ಬೆಳ್ಳಾರೆಯ ಉದ್ಯಮಿಯ ಅಪಹರಣ ಯತ್ನ: ಹಲವರ ಮೇಲೆ ಪ್ರಕರಣ ದಾಖಲು
Team Udayavani, Dec 21, 2022, 7:30 AM IST
ಸುಳ್ಯ: ಬೆಳ್ಳಾರೆಯ ಯುವ ಉದ್ಯಮಿಯನ್ನು ಆಂಬ್ಯುಲೆನ್ಸ್ ನಲ್ಲಿ ಕೂಡಿ ಹಾಕಿ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಉದ್ಯಮಿಯ ತಂದೆ, ಪತ್ನಿ, ಅತ್ತೆ ಸಹಿತ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಉದ್ಯಮಿಯ ತಾಯಿ ನೀರಜಾಕ್ಷಿ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
ನೀರಜಾಕ್ಷಿ ಅವರ ಮಗ ನವೀನ್ ಕುಮಾರ್ ಹಾಗೂ ಆತನ ಪತ್ನಿ ಮಧ್ಯೆ ಮೂರು ತಿಂಗಳಿಂದ ವೈಮನಸ್ಸು ಉಂಟಾಗಿದ್ದು, ಆತನ ಪತ್ನಿ ತವರು ಮನೆಗೆ ಹೋಗಿದ್ದು ಡಿ.18ರಂದು ಸೊಸೆ ಹಾಗೂ ಆಕೆಯ ಹೆತ್ತವರು, ಸಂಬಂಧಿಕರು ಮಾತುಕತೆ ನಡೆ ಸಿದ್ದು, ಈ ವೇಳೆ ನವೀನ್ ಅವರು ಪತ್ನಿ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೇ ಕಾರಣದಿಂದ ಡಿ.19ರಂದು ದೂರುದಾರರ ಗಂಡ ಮಾಧವ ಗೌಡ, ಸೊಸೆ ಸ್ಪಂದನಾ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್ ಎಂಬವರು ನವೀನ್ ಕುಮಾರ್‌ನನ್ನು ಅಪಹರಿಸಿಕೊಂಡು ಹೋಗಿದ್ದು, ತಡೆಯಲು ಹೋದ ದೂರುದಾರರನ್ನು ಹಾಗೂ ಅವರ ಹಿರಿಯ ಸೊಸೆಯನ್ನು ಆರೋಪಿಗಳು ಹೊಡೆದು ಗಾಯ ಮಾಡಿದ್ದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.