ಬೆಳ್ಳಾರೆ ಕೆಪಿಎಸ್‌ ಕ್ಯಾಂಪಸ್‌: ಉತ್ತಮ ದಾಖಲಾತಿ


Team Udayavani, Jun 16, 2019, 9:44 AM IST

z-36

ಬೆಳ್ಳಾರೆ: ಸರಕಾರದ ಮಹತ್ವಾಕಾಂಕ್ಷೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಬೆನ್ನಲ್ಲೇ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್ಗೆ ದಾಖಲಾತಿಗೆ ವಿದ್ಯಾರ್ಥಿ ಸಮೂಹ ಮುಗಿಬಿದ್ದಿದೆ. ಸದ್ಯ ಇಲ್ಲಿನ ಕೆಪಿಎಸ್‌ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರಕ್ಕೂ ಅಧಿಕ.

ಸರಕಾರದ ಆದೇಶದಂತೆ 2018-19ನೇ ಶೈಕ್ಷಣಿಕ ವರ್ಷದಿಂದ ಒಂದೇ ಭೌಗೋಳಿಕ ಸ್ಥಳದಲ್ಲಿ ಎಲ್.ಕೆ.ಜಿ., ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಒಟ್ಟುಗೂಡಿಸಿ ಬೆಳ್ಳಾರೆಯಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆರಂಭಿಸಲಾಗಿತ್ತು.

ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಿಕ್ಷಣದ ಅಡಿಯಲ್ಲಿ ಎಲ್.ಕೆ.ಜಿ. ಮತ್ತು 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿದೆ. ಪೂರ್ವ ಪ್ರಾಥಮಿಕದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾದ ಬಳಿಕ ಇಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಗಣನೀಯ ಏರಿಕೆಯಾಗಿದೆ.

ವೃತ್ತಿ ಕೌಶಲಕ್ಕೂ ಆದ್ಯತೆ
ಹೆತ್ತವರು ಹಾಗೂ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದಂತೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನಲ್ಲಿ ಉತ್ತಮ ದರ್ಜೆಯ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ತರಗತಿಗಳಿಗೆ ಗುಣಮಟ್ಟದ ಕಟ್ಟಡಗಳ ವ್ಯವಸ್ಥೆಯಿದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉಪಯುಕ್ತವಾಗುವ ವಿಶೇಷ ವೃತ್ತಿ ಕೌಶಲ್ಯ ತರಬೇತಿ, ನೂತನವಾಗಿ ಈ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಬಾಲಕರಿಗೆ ಜೆ.ಒ.ಸಿ. ಮತ್ತು ಬಾಲಕಿಯರಿಗೆ ಫ್ಯಾಶನ್‌ ಡಿಸೈನಿಂಗ್‌ನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. ಈ ಶಾಲೆಯಲ್ಲಿ ಏಕಕಾಲಕ್ಕೆ 4 ಸ್ಮಾರ್ಟ್‌ ಕ್ಲಾಸ್‌ಗಳನ್ನು ನಡೆಸುವಷ್ಟು ಸೌಲಭ್ಯಗಳಿವೆ. 12 ಖಾಯಂ ಹಾಗೂ ಇಬ್ಬರು ಪ್ರಭಾರ ಸಹಿತ ಒಟ್ಟು 14 ಶಿಕ್ಷಕರನ್ನು ಶಾಲೆ ಹೊಂದಿದೆ. ದೊಡ್ಡ ವಿಸ್ತೀರ್ಣವುಳ್ಳ ಕ್ರೀಡಾಂಗಣ ಶಾಲೆಯ ಆವರಣದೊಳಗಿದೆ. ಪೂರ್ವ ಪ್ರಾಥಮಿಕ ಶಾಲೆಗೆ ತರಬೇತಿ ಪಡೆದ ಒಬ್ಬರು ಗೌರವ ಶಿಕ್ಷಕಿ ಹಾಗೂ ಆಯಾ ನೇಮಿಸಲಾಗಿದೆ. 30ರ ಗಡಿ ದಾಟಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾತಿ ಪಡೆದಿರುವುದರಿಂದ ಹೆಚ್ಚುವರಿ ಶಿಕ್ಷಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ.

ಅನುದಾನದ ನಿರೀಕ್ಷೆ
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಕೊಠಡಿಗಳ ಸಮಸ್ಯೆ ಎದುರಾಗಲಿದ್ದು ತರಗತಿ ಕೊಠಡಿ ನಿರ್ಮಾಣದ ಅಗತ್ಯವಿದೆ. ಶಾಲಾ ಗೋಡೆಗಳಿಗೆ ಬಣ್ಣ ಸಹಿತ ಹಲವು ದುರಸ್ತಿ ಕಾರ್ಯಗಳು ಆಗಬೇಕಿವೆ. ಕಳೆದ ವರ್ಷ ನಿರ್ವಹಣೆ ಹಾಗೂ ಇತರ ಖರ್ಚಿಗೆ 17 ಲಕ್ಷ ರೂ. ಅನುದಾನ ಬಂದಿತ್ತು. ಈ ಬಾರಿ ಕೇವಲ 5 ಲಕ್ಷ ರೂ. ದೊರೆತಿದೆ. ಹೀಗಾಗಿ, ಶಾಲೆ ಸರಕಾರ ಮತ್ತು ದಾನಿ ಗಳ ನಿರೀಕ್ಷೆ ಯಲ್ಲಿದೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್ಗೆ ರಾತ್ರಿ ಪಾಳಿ ಕಾವಲಿಗೆ ಹೋಮ್‌ಗಾರ್ಡ್‌ ಅಗತ್ಯವಿದ್ದು, ಶಾಲೆಯ ಎಸ್‌ಡಿಎಂಸಿ ವತಿಯಿಂದ ಪೊಲೀಸ್‌ ಇಲಾಖೆಗೆ ಮನವಿ ನೀಡಲಾಗಿದೆ.

ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲಿನಲ್ಲಿ ಈ ವರ್ಷದ ಆಂಗ್ಲ ಮಾಧ್ಯಮ ಎಲ್.ಕೆ.ಜಿ.ಗೆ 56 ಮಕ್ಕಳು, 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 63, ಕನ್ನಡ ಮಾಧ್ಯಮಕ್ಕೆ 6 ಮಕ್ಕಳು, 2ನೇ ತರಗತಿಗೆ 49, 3ನೇ ತರಗತಿಗೆ 42, 4ನೇ ತರಗತಿಗೆ 54, 5ನೇ ತರಗತಿಗೆ 45 ಮಕ್ಕಳು, 6ನೇ ತರಗತಿಯ ಆಂಗ್ಲಮಾಧ್ಯಮಕ್ಕೆ 49 ಮತ್ತು ಕನ್ನಡ ಮಾಧ್ಯಮಕ್ಕೆ 45, 7ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 50 ಮತ್ತು ಕನ್ನಡ ಮಾಧ್ಯಮಕ್ಕೆ 64, 8ನೇ ತರಗತಿಗೆ 151, 9ನೇ ತರಗತಿಗೆ 149, 10ನೇ ತರಗತಿಗೆ 113, ಪ್ರಥಮ ಪಿಯುಸಿಗೆ 141 ಹಾಗೂ ದ್ವಿತೀಯ ಪಿಯುಸಿಗೆ 98 ಮಕ್ಕಳು ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ದಾಖಲಾತಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಬೆಳ್ಳಾರೆಯಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆರಂಭಿಸಿರುವ ಸರಕಾರ 1 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದು, ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣವಾಗಿದ್ದು, ಆಕರ್ಷಕ ಪ್ರವೇಶದ್ವಾರ, ಭದ್ರತಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆಯ ಗೋಡೆಗಳಿಗೂ ಬಣ್ಣ ಹಚ್ಚಿ ಶೃಂಗರಿಸಲಾಗಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ರೂಪಿಸಲಾಗಿದೆ. ಪ್ರಸಕ್ತ ವರ್ಷ ಲೋಕೋಪಯೋಗಿ ಇಲಾಖೆ 1.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು
ಆಂಗ್ಲ ಮಾಧ್ಯಮ ಆರಂಭವಾದ ಬಳಿಕ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಯಿಂದ 1.20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುವುದು.
– ಉಮಾಕುಮಾರಿ, ಉಪ ಪ್ರಾಂಶುಪಾಲೆ, ಕೆ.ಪಿ.ಎಸ್‌. ಬೆಳ್ಳಾರೆ

ಕೋಟಿ ರೂ. ಅನುದಾನ

ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲಿನಲ್ಲಿ ಈ ವರ್ಷದ ಆಂಗ್ಲ ಮಾಧ್ಯಮ ಎಲ್.ಕೆ.ಜಿ.ಗೆ 56 ಮಕ್ಕಳು, 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 63, ಕನ್ನಡ ಮಾಧ್ಯಮಕ್ಕೆ 6 ಮಕ್ಕಳು, 2ನೇ ತರಗತಿಗೆ 49, 3ನೇ ತರಗತಿಗೆ 42, 4ನೇ ತರಗತಿಗೆ 54, 5ನೇ ತರಗತಿಗೆ 45 ಮಕ್ಕಳು, 6ನೇ ತರಗತಿಯ ಆಂಗ್ಲಮಾಧ್ಯಮಕ್ಕೆ 49 ಮತ್ತು ಕನ್ನಡ ಮಾಧ್ಯಮಕ್ಕೆ 45, 7ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ 50 ಮತ್ತು ಕನ್ನಡ ಮಾಧ್ಯಮಕ್ಕೆ 64, 8ನೇ ತರಗತಿಗೆ 151, 9ನೇ ತರಗತಿಗೆ 149, 10ನೇ ತರಗತಿಗೆ 113, ಪ್ರಥಮ ಪಿಯುಸಿಗೆ 141 ಹಾಗೂ ದ್ವಿತೀಯ ಪಿಯುಸಿಗೆ 98 ಮಕ್ಕಳು ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ದಾಖಲಾತಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಬೆಳ್ಳಾರೆಯಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಆರಂಭಿಸಿರುವ ಸರಕಾರ 1 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದು, ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣವಾಗಿದ್ದು, ಆಕರ್ಷಕ ಪ್ರವೇಶದ್ವಾರ, ಭದ್ರತಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆಯ ಗೋಡೆಗಳಿಗೂ ಬಣ್ಣ ಹಚ್ಚಿ ಶೃಂಗರಿಸಲಾಗಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್ ರೂಪಿಸಲಾಗಿದೆ. ಪ್ರಸಕ್ತ ವರ್ಷ ಲೋಕೋಪಯೋಗಿ ಇಲಾಖೆ 1.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯಲಿವೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.