ಸ್ವಾತಂತ್ರ್ಯ ಹೋರಾಟದ ಕಿಡಿಹಚ್ಚಿದ ಬೆಳ್ಳಾರೆಯಲ್ಲಿ ಸ್ಮಾರಕ ಭವನ
ದಾಖಲೆಗಳ ಮ್ಯೂಸಿಯಂ ಸ್ಥಾಪನೆ ಕಾಮಗಾರಿಗೆ ವೇಗ ನಿರೀಕ್ಷೆ
Team Udayavani, Aug 15, 2021, 6:22 AM IST
ಅರಂತೋಡು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ರೈತ ಹೋರಾಟ ಭವನ ಹಾಗೂ ದಾಖ ಲೆಗಳ ಮ್ಯೂಸಿಯಂ ಸ್ಥಾಪನೆಗೆ ವೇಗ ನೀಡಲಾಗುತ್ತಿದೆ.
ಮಾರ್ಚ್ ತಿಂಗಳಿನಲ್ಲಿ ಬಂಗ್ಲೆಗಡ್ಡೆಯಲ್ಲಿ ದ.ಕ. ಜಿಲ್ಲಾಡಳಿತ, ತಾ| ಆಡಳಿತ, ಬೆಳ್ಳಾರೆ ಗ್ರಾ. ಪಂ., ನೆಹರೂ ಯುವ ಕೇಂದ್ರ, ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರೊéàತ್ಸವದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ಅಂಗಾರ ಹಾಗೂ ಜಿಲ್ಲಾಧಿಕಾರಿ ಡಾ| ರಾಜೇಂದ್ರ ರೈತ ಹೋರಾಟ ಸ್ಮಾರಕ ಭವನ, ದಾಖಲೆಗಳ ಮ್ಯೂಸಿಯಂ, ಉದ್ಯಾನವನ ನಿರ್ಮಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು, ಮುಂದಿನ ಸ್ವಾತಂತ್ರೊéàತ್ಸವದ ಮೊದಲು ಈ ಕೆಲಸಗಳನ್ನು ಮುಗಿಸಲಾಗುವುದೆಂದು ಭರವಸೆ ನೀಡಿದ್ದರು. ವಾರದ ಹಿಂದೆ ಅಂಗಾರ ಸ್ಥಳಕ್ಕೆ ತೆರಳಿ ಸ್ಥಳೀಯ ಆಡಳಿತದಿಂದ ಮಾಹಿತಿ ಪಡೆದುಕೊಂಡು ಬಂದಿದ್ದು, ಕಾಮಗಾರಿಗೆ ವೇಗ ದೊರೆಯುವ ನಿರೀಕ್ಷೆ ಇದೆ.
ಸುಳ್ಯ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿದೆ ಎಂಬುದು ಇತಿ ಹಾಸದಲ್ಲಿ ದಾಖಲಾಗಿದೆ. ಬ್ರಿಟಿಷ್ ಸರಕಾರ ಹೇರಿದ ತೆರಿಗೆ ಜನರನ್ನು ಕೆರಳಿಸು ವಂತೆ ಮಾಡಿತ್ತು. ಹೀಗಾಗಿ ಕೆರಳಿದ ರೈತ ಹೋರಾಟಗಾರರು ಬೆಳ್ಳಾರೆ ಯ ಬಂಗ್ಲೆಗುಡ್ಡೆಯಲ್ಲಿದ್ದ ಬ್ರಿಟಿಷರ ಖಜಾನೆ ಯನ್ನು 1837 ಮಾ. 30ರಂದು ವಶಕ್ಕೆ ಪಡೆದುಕೊಂಡರು. 1837 ಎ. 5ರಂದು ಮಂಗಳೂರಿನ ಬಾವುಟ ಗುಡ್ಡೆ ಯಲ್ಲಿ ಸ್ವಾತಂತ್ರ್ಯ ಧ್ವಜ ಹಾರಿಸಿದರು.
ಕೃತಿಗಳಲ್ಲಿ ವಿವರ :
ಸುಳ್ಯ ಆಸುಪಾಸಿನ ರೈತ ಹೋರಾಟದ ಬಗ್ಗೆ ಅನೇಕ ಲೇಖಕರು ಕೃತಿಗಳಲ್ಲಿ ದಾಖ ಲಿದ್ದಾರೆ. ಸುಳ್ಯದ ಲೇಖಕ ಡಾ| ಪ್ರಭಾಕರ ಶಿಶಿಲ ತಮ್ಮ ಕಾದಂಬರಿ “ಮೂಡಣದ ಕೆಂಪು ಕಿರಣ’ದಲ್ಲಿ ಸ್ಥಳೀಯರು ಬ್ರಿಟಿಷ ವಿರುದ್ಧ ಹೋರಾಡಿರುವುದನ್ನು ವಿವರಿ ಸಿದ್ದಾರೆ. ಇದಲ್ಲದೆ ಪುರುಷೋತ್ತಮ ಬಿಳಿ ಮಲೆ, ಸಾಹಿತಿ ನಿರಂಜನ ಕೃತಿಗಳಲ್ಲಿ ರೈತರ ಹೋರಾಟವನ್ನು ದಾಖಲಿಸಿದ್ದಾರೆ.
ಬೆಳ್ಳಾರೆಯಲ್ಲಿದ್ದ ಖಜಾನೆಯನ್ನು ರೈತ ಹೋರಾಟಗಾರರು ವಶಕ್ಕೆ ಪಡೆದುಕೊಂಡು ಹೋರಾಟ ಮುಂದುವರಿಸಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇದನ್ನು ದಾಖಲಿಸುವ ದೃಷ್ಟಿಯಿಂದ ಬೆಳ್ಳಾರೆಯಲ್ಲಿ ರೈತ ಹೋರಾಟ ಸ್ಮಾರಕ ಭವನ, ದಾಖಲೆಗಳ ಮ್ಯೂಸಿಯಂ,ಪಾರ್ಕ್ ನಿರ್ಮಾಣಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. -ಎಸ್.ಅಂಗಾರ,ಸಚಿವರು
ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ ಬೆಳ್ಳಾರೆಯಲ್ಲಿ ರೈತ ಹೋರಾಟ ಸ್ಮಾರಕ ಭವನ ಸೇರಿದಂತೆ ಪೂರಕ ವ್ಯವಸ್ಥೆಗಳು ಉಸ್ತುವಾರಿ ಸಚಿವ ಅಂಗಾರರ ನೇತೃತ್ವದಲ್ಲಿ ಆದಷ್ಟು ಬೇಗ ನಡೆಯಲಿ. ನಮ್ಮ ಹಿರಿಯರ ಹೋರಾಟ ಮುಂದಿನ ಪೀಳಿಗೆಗೆ ತಿಳಿಯಲಿ. -ಡಾ| ಪ್ರಭಾಕರ ಶಿಶಿಲ, ಲೇಖಕರು
-ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.