ಬಡವನ ಭಾರ ಹೊತ್ತ ನೇತ್ರಾವತಿ! ಸೆಳೆಯುವ ನದಿನೀರಲ್ಲೇ ಮನೆ ಸಲಕರಣೆ ಸಾಗಾಟ
Team Udayavani, Aug 20, 2021, 7:30 AM IST
ಬೆಳ್ತಂಗಡಿ: ದೇಶ ಸ್ವಾತಂತ್ರ್ಯ ಕಂಡು ವರ್ಷಗಳು ಸಾಗಿದವೇ ವಿನಾ ಬಡತನದ ರೇಖೆಯನ್ನು ಮಾಸುವಂಥ ಸರಕಾರದ ಯೋಜನೆಗಳು ಇನ್ನೂ ತಳಮಟ್ಟದ ಜನರಿಗೆ ತಲುಪಿಲ್ಲ. ಇದಕ್ಕೆ ಪ್ರತ್ಯಕ್ಷ ನಿದರ್ಶನ ಒಂದೊಮ್ಮೆ ಕುಗ್ರಾಮ ಎಂದು ಪಟ್ಟಹೊತ್ತ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದ ಹಲವು ಊರುಗಳು.
ಗುಡಿಸಲಂತಿರುವ ಮನೆಯಲ್ಲಿ ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಿರುವ ಮಲವಂತಿಗೆ ಗ್ರಾ.ಪಂ.ನ ದಿಡುಪೆ ಹೊಳೆಕೆರೆ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಕಮಲಾ ದಂಪತಿ ಸೂರು ನಿರ್ಮಾಣಕ್ಕಾಗಿ ಅಪಾಯ ಲೆಕ್ಕಿಸದೆ ಸೆಳೆಯುವ ನೇತ್ರಾವತಿ ನದಿಯನ್ನೇ ಮನೆ ಸಾಮಗ್ರಿ ಹೊತ್ತು ಸಾಗಿಸಲು ಆಶ್ರಯಿಸಿದ್ದಾರೆ.
ಹಾವು, ಹುಳುಹುಪ್ಪಟೆಗಳಿಂದ ಮುಕ್ತಿ ಬೇಕೆಂದು ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಚಂದ್ರಶೇಖರ್ ಅವರು ಮಲವಂತಿಗೆ ಗ್ರಾ.ಪಂ.ಗೆ 2018ರಲ್ಲಿ ಅರ್ಜಿ ಸಲ್ಲಿಸಿದ್ದರು. 2019ರ ಆ. 9ರಂದು ಪ್ರವಾಹ ಮನೆಬಾಗಿಲಿಗೆ ಬಡಿದುಹೋಗಿತ್ತು. ಹೀಗಾಗಿ ಆಶ್ರಯ ಯೋಜನೆ ವಿಳಂಬ ಸಾಧ್ಯತೆಯಿಂದ ಬರಪರಿಹಾರದಡಿ ಮನೆ ಮಂಜೂರುಗೊಳಿಸುವ ಭರವಸೆ ನೀಡಲಾಗಿತ್ತು. ಅಂದು ಬಿರುಕು ಬಿಟ್ಟ ಮನೆಗಳಿಗೆಲ್ಲ ನೂತನ ಮನೆ ಮಂಜೂರಾಗಿದ್ದರೂ ಚಂದ್ರಶೇಖರ ಗೌಡರಿಗೆ ಅದೃಷ್ಟ ಒಲಿದಿರಲಿಲ್ಲ. ಅತ್ತ ಆಶ್ರಯ ಯೋಜನೆಯೂ ಇಲ್ಲ ಇತ್ತ ಬರಪರಿಹಾರವೂ ಇಲ್ಲ ಎಂದಾಗಿತ್ತು. ಇನ್ನು ಸರಕಾರದ ಯೋಜನೆಗಳನ್ನು ಕಾಯುವುದು ತರವಲ್ಲವೆಂದು ತಾನೇ ಸಾಲಸೋಲ ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದರು.
6 ಲಕ್ಷ ರೂ. ಸಾಲ :
ಬಂಗಾರ ಅಡವು, ಕೈಸಾಲ ಮಾತ್ರವಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ, ನವೋದಯ ಸ್ವಸಹಾಯ ಗುಂಪು, ಗ್ರಾಮೀಣ ಒಕ್ಕೂಟದಿಂದ ಸೇರಿದಂತೆ ಒಟ್ಟು 6 ಲಕ್ಷ ರೂ. ಸಾಲ ಮಾಡಿದ್ದರು. ಮನೆ ನಿರ್ಮಾಣವೇನೋ ಸರಿ ಸಲಕರಣೆ ಸಾಗಿಸಲು ಮನೆಗೆ ರಸ್ತೆಯೇ ಇಲ್ಲ. ದಿಡುಪೆ ಪೇಟೆಗೆ ಬರಲು ನೇತ್ರಾವತಿ ನದಿ ದಾಟಬೇಕು. ಇಲ್ಲವೇ 1 ಕಿ.ಮೀ. ಸುತ್ತಿ ಕಾಲುಸಂಕದಲ್ಲಿ ತೆರಳಬೇಕು. ಸಿಮೆಂಟ್, ಕಬ್ಬಿಣ, ಇತರ ಸಾಮಗ್ರಿ ಸಾಗಿಸಲು ನದಿಯೇ ಆಶ್ರಯವಾಗಿತ್ತು.
ನೆರವಾದ ನೆರೆಯವರು :
ಪರಿಕರಗಳ ಸಾಗಾಟಕ್ಕೆ ನೇತ್ರಾವತಿ ನದಿಯೊಂದೇ ಕೊನೆಗುಳಿದ ಮಾರ್ಗವಾಗಿತ್ತು. ಹೀಗಿರುವಾಗ ಊರಿನ ಯುವಕರೂ ನೆರವಾಗಿದ್ದಾರೆ. ಚಂದ್ರಶೇಖರ್ ಅವರೊಂದಿಗೆ ಕಬ್ಬಿಣ, ಸಿಮೆಂಟ್, ಕಾಂಕ್ರೀಟ್ ಕಿಟಕಿ, ಬಾಗಿಲು ಸಾಗಾಟಕ್ಕೆ ನಝೀರ್, ಬಶೀರ್, ವಿನಯಚಂದ್ರ, ಪವನ್, ಸಫಾನ್, ರವಿ, ಸುರೇಶ್, ನವೀನ್ ಜೀವದ ಹಂಗುತೊರೆದು ನದಿ ದಾಟಿಸಿ ಚಂದ್ರಶೇಖರ್ ಅವರ ಬದುಕಿನ ನಾವಿಕರಾಗಿದ್ದಾರೆ. ಇದೀಗ ಮನೆ ಒಂದು ಹಂತಕ್ಕೆ ಬಂದು ತಲುಪಿದ್ದು ಸರಕಾರದ ಯೋಜನೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಅನೇಕ ಮನೆಗಳಿಗೆ ಸಂಪರ್ಕ ಕೊರತೆ :
ದಿಡುಪೆ ಗ್ರಾಮದ ಹೊಳೆಕೆರೆ, ಕೊಂಡಾಲ, ಕುಂಬಪಾಲು, ಬಾಳೆ ಹಿತ್ತಿಲು ಪ್ರಮುಖ ಪ್ರದೇಶಗಳ 25ಕ್ಕೂ ಅಧಿಕ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕದ ಕೊರತೆ ಇದೆ. ಸೇತುವೆ ನಿರ್ಮಾಣವೂ ಸಾಧ್ಯವಾಗಿಲ್ಲ. ಹೀಗಾಗಿ ನದಿ ದಾಟಲು ಹಗ್ಗವೇ ಆಧಾರವೆಂಬಂತಾಗಿದೆ.
ಮೂರು ವರ್ಷಗಳಿಂದ ವಸತಿ ಯೋಜನೆಗಳು ಮಂಜೂರುಗೊಂಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿರುವ ಹೆಚ್ಚಿನ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಗ್ರಾ.ಪಂ.ನಿಂದ ಎಲ್ಲ ದಾಖಲೆಗಳು ಸಂಬಂಧಪಟ್ಟ ಇಲಾಖೆಗೆ ಹಾಜರುಪಡಿಸಲಾಗಿದೆ.– ರಶ್ಮಿ, ಪಿಡಿಒ, ಮಲವಂತಿಗೆ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ
Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು
Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು
Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್‌ನಲ್ಲಿ ಸಿಲುಕಿದ ಮಹಿಳೆ!
Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.