Belthangady: ಅಪಘಾತ ವಲಯವಾಗುತ್ತಿದೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ
Team Udayavani, Oct 20, 2023, 5:06 PM IST
ಬೆಳ್ತಂಗಡಿ: ವಾಹನಗಳ ಓಡಾಟಕ್ಕೆ ಆವಶ್ಯಕವಾಗಿ ರಸ್ತೆ ವಿಸ್ತರಣೆಯಾಗದ ಪರಿಣಾಮ ರಾಷ್ಟ್ರೀಯ ಹೆದ್ದಾರಿ – 73ರ ಮಂಗಳೂರು – ವಿಲ್ಲುಪುರಂ ರಸ್ತೆಯಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಅತೀ ಹೆಚ್ಚು ಪ್ರವಾಸಿಗರು ಸಂಚರಿಸುವ ರಸ್ತೆಯಾಗಿದ್ದರಿಂದ ಪ್ರತಿನಿತ್ಯ ಬಹಳಷ್ಟು ವಾಹನಗಳ ಸಂಚಾರವಿರುತ್ತದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಮೂರು ಪಟ್ಟು ವಾಹನ ಸಂಚಾರ ಅಧಿಕವಾಗಿದೆ.
ಅದರೆ ರಸ್ತೆ ಅಭಿವೃದ್ಧಿ ಕಂಡಿಲ್ಲ. ಪರಿಣಾಮ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಇರುವ ರಸ್ತೆಗೆ ತೇಪೆ ಹಾಕುತ್ತ
ಮರು ಡಾಮರೀಕರಣ ನಡೆಸುತ್ತಿರುವ ಪರಿಣಾಮ ರಸ್ತೆ ಅಂಚು ಒಂದು ಅಡಿಗೂ ಅಧಿಕ ಕೆಲವೆಡೆ ದಪ್ಪವಿದೆ. ಪರಿಣಾಮ
ವಾಹನಗಳು ರಸ್ತೆಯಿಂದ ಕೆಳಗಿಳಿಸುತ್ತಿಲ್ಲ. ಸರಕು ತುಂಬಿದ ವಾಹನಗಳು ರಸ್ತೆಯಿಂದ ಕೆಳಗಿಳಿದರೆ ಪಲ್ಟಿಯಾಗುತ್ತಿವೆ. ಇದರಿಂದ ಚಾರ್ಮಾಡಿ ಘಾಟ್‌ನಲ್ಲಿ ತಾಸುಗಟ್ಟಲೆ ಸಂಚಾರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಜೂನ್‌ನಿಂದ ಆಗಿರುವ ಪ್ರಮುಖ ಅಪಘಾತಗಳು
ಜೂ. 2: ಉಜಿರೆಯಿಂದ ಮೂಡಿಗೆರೆ ಕಡೆ ಪ್ರಯಾಣಿಸುತ್ತಿದ್ದ ಟಿಟಿ ವಾಹನ ಹಾಗೂ ಮೂಡಿಗೆರೆಯಿಂದ ಉಜಿರೆ ಕಡೆ ಹೋಗುತ್ತಿದ್ದ ಕಾರು ಚಾರ್ಮಾಡಿ ಪೇಟೆಯಲ್ಲಿ 100 ಮೀ. ಅಂತರದಲ್ಲಿ ಉರುಳಿ ಬಿದ್ದಿತ್ತು.
ಜೂ. 5: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡಿದ್ದ.
ಜೂ. 11: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಚಾರ್ಮಾಡಿ ಪೇಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ, ಪಿಕ್‌ಅಪ್ ವಾಹನ ಚರಂಡಿಗೆ ಉರುಳಿ ಬಿದ್ದಿತ್ತು.
ಜು. 7: ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪದ ಕೂಗಳತೆಯ ದೂರದಲ್ಲಿ ಎರಡು ಬಸ್‌ಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಚಾಲಕನ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು.
ಸೆ. 9: ಪೈಪ್ ಸಾಗಾಟದ ಲಾರಿ ಯೊಂದು 1ನೇ ತಿರುವಿನ ಸಮೀಪ ರಸ್ತೆ ಬದಿ ಬರೆಗೆ ಗುದ್ದಿತ್ತು. ಉಳಿದಂತೆ ಲಾೖಲ ಕೆಲ ತಿಂಗಳ
ಹಿಂದೆ ಬೈಕ್ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದ.
ಅ. 18: ಲಾೖಲದಲ್ಲಿ ಪಿಕಪ್ ಅಡಿಗೆ ಬಿದ್ದು ಬಾಲಕ ಮೃತಪಟ್ಟಿದ್ದ. ಈ ಮಧ್ಯೆ ಉಜಿರೆಯಿಂದ ಸಾಗುವಾಗ ಸೀಟು, ಮುಂಡಾಜೆ ಪ್ರದೇಶ ದಲ್ಲಿ ಪ್ರತಿನಿತ್ಯ ಎಂಬಂತೆ ಅಪಘಾತಗಳು ಸಂಭವಿಸುತ್ತಿವೆ.
ರಸ್ತೆಗೆ ಬರೆ
ಮಂಗಳೂರು -ಚಿಕ್ಕಮಗಳೂರು ಸಾಗುವ ರಾ.ಹೆ. 73ರಲ್ಲಿ ಚಾರ್ಮಾಡಿ ಪೇಟೆ ಪರಿಸರದಿಂದ ಚಾರ್ಮಾಡಿ ಒಂದನೇ ತಿರುವಿನ ವರೆಗೆ 3 ಕಿ.ಮೀ. ಪ್ರದೇಶದ ರಸ್ತೆ ಡಾಮಾರಿಕರಣ ನಯವಾಗಿರುವ ಪರಿಣಾಮ ಪದೇ ಪದೇ ಅಪಘಾತವಾಗು¤ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಜು.4ರಂದು ಜೆಸಿಬಿ ಸಹಾಯದಿಂದ ಒರಟಾಗಿಸುವ ಕಾಮಗಾರಿ ನಡೆಸಲಾಗಿತ್ತು. ಬಳಿಕ
ಅಪಘಾತ ಸಂಖ್ಯೆ ಕಡಿಮೆ ಆಗಿತ್ತು.
ಸಂಚಾರಿ ಠಾಣೆಯಿಂದ ಪತ್ರ
ರಾ.ಹೆ.ಯಲ್ಲಿ ಸಂಚಾರಿ ನಾಮಫಲಕ ಅಳವಡಿಸಲು, ಹಂಪ್ಸ್ ಅಳವಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಹಾಗೂ
ಲೋಕೋಪಯೋಗಿ ಇಲಾಖೆಗೆ ಸಂಚಾರಿ ಪೊಲೀಸ್ ಠಾಣೆ ಸೂಚನೆಯನ್ನೂ ನೀಡಿದೆ. ಆದರೆ ರಸ್ತೆ ಅಭಿವೃದ್ಧಿಯಾಗುತ್ತಿರುವ
ಪರಿಣಮಾ ಇದು ಸಾಧ್ಯವಾಗಿಲ್ಲ.
ಮೂರು ತಿಂಗಳಲ್ಲಿ 5 ಸಾವಿರ ಪ್ರಕರಣ
ಹೆದ್ದಾರಿ ನಿಯಮ ಉಲ್ಲಂಘಿಸದಂತೆ ಹಾಗೂ ಅಪಘಾತ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ಸಂಬಂಧಿಸಿದಂತೆ ಹೈವೆ ಪ್ಯಾಟ್ರೋಲ್ ಗಸ್ತು ಸಂಚರಿಸುತ್ತಿದೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಿಂದ ಕಳೆದ ಮೂರು ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಿಸಿದ್ದು, ಪ್ರಸಕ್ತ ವರ್ಷದಲ್ಲಿ 15,000 ಪ್ರಕರಣ ದಾಖಲಿಸಲಾಗಿದೆ. ಸವಾರರು ವೇಗ ಮಿತಿ ಸಂಚಾರ ಹಾಗೂ ಸಂಚಾರ ನಿಯಮ ಪಾಲಿಸದಿಲ್ಲಿ ಅಪಘಾತ ನಿಯಂತ್ರಣ ಸಾಧ್ಯ.
ಅರ್ಜುನ್, ಉಪನಿರೀಕ್ಷಕರು, ಸಂಚಾರ ಪೊಲೀಸ್ ಠಾಣೆ, ಬೆಳ್ತಂಗಡಿ
*ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.