ಉನ್ನತ ಚಿಂತನೆ-ಪ್ರವೃತ್ತಿ ಅಗತ್ಯ: ಸ್ವಾಮಿ
Team Udayavani, Jan 4, 2019, 10:06 AM IST
ಬೆಳ್ತಂಗಡಿ : ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮಾನವೀಯ ಮೌಲ್ಯಗಳುಳ್ಳ ಜವಾಬ್ದಾರಿಯುತ ವ್ಯಕ್ತಿತ್ವ ನಿರ್ಮಾಣ ಅವಶ್ಯಕವಾಗಿದ್ದು, ಉನ್ನತ ಚಿಂತನೆಗಳು, ಉತ್ತಮ ಪ್ರವೃತ್ತಿ, ನಮ್ಮ ದೃಷ್ಟಿಕೋನವು ವ್ಯಕ್ತಿತ್ವ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾ ಮಾನಂದಜೀ ಮಹಾರಾಜ್ ಹೇಳಿದರು.
ಅವರು ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ 7 ದಿನಗಳ ಕಾಲ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಗುರುವಾರ ನಡೆದ ಸಮಾರೋಪದಲ್ಲಿ ಲಕ್ಷ್ಯಗೀತಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯ ಎನ್‌ಎಸ್‌ಎಸ್ ಕೋಷ್ಠದ ಅನುಷ್ಠಾನಾಧಿಕಾರಿ ಡಾ| ಪೂರ್ಣಿಮಾ ಜೋಗಿ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಗಾಂಧಿ ಚಿಂತನೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಯುವ ಜನತೆ ಒಂದಾದರೆ ಮಾದರಿ ಸಮಾಜ ನಿರ್ಮಾಣ, ಸಮಾಜದಲ್ಲಿ ತಾಂಡವಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದರು.
ಕಾಲೇಜಿನ ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಆಶಾಕಿರಣ ಶಿಬಿರದ ವರದಿ ಮಂಡಿಸಿದರು. ಪ್ರಾಂಶುಪಾಲ ಪ್ರೊ| ಟಿ.ಎನ್. ಕೇಶವ ಸ್ವಾಗತಿಸಿ, ಯೋಜನಾಧಿಕಾರಿ ಗಣೇಶ್ ಶೆಂಡ್ಯೆ ವಂದಿಸಿದರು. ಪ್ರಾಧ್ಯಾಪಕ ಡಾ| ಬಿ.ಎ. ಕುಮಾರ ಹೆಗ್ಡೆ ನಿರೂಪಿಸಿದರು.
ಒಂದು ವಾರ ನಡೆದ ಭಾವೈಕ್ಯ ಶಿಬಿರದ ಅನುಭವವನ್ನು ಇತರ ಭಾಷಿಗರು ಕನ್ನಡದಲ್ಲಿ ಹಂಚಿಕೊಂಡರು. ಶಿಬಿರಾರ್ಥಿಗಳು ಮಹಾರಾಷ್ಟ್ರದ ತಿಲಕ, ಸಾಂಪ್ರದಾಯಿಕ ಪೇಟ ಧರಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಹಾಗೂ ಶಿಬಿರಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಲಿತ ಪಾಠ ಅನುಷ್ಠಾನ
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಮಾತನಾಡಿ, ದೇಶದ ಪ್ರಗತಿಯ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕೊಡುಗೆಯಾಗಿದ್ದು, ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳು ಕೌಶಲಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗಿದೆ. ಶಿಬಿರದಲ್ಲಿ ಕಲಿತ ಪಾಠಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು ಎಂದರು.
ಏಕತೆ
ನಮ್ಮ ರಾಷ್ಟ್ರದಿಂದ ಎಲ್ಲವನ್ನು ಪಡೆಯುವ ನಾವು ನಮ್ಮ ರಾಷ್ಟಕ್ಕೇನು ಕೊಡುಗೆ ನೀಡಿದೆವು ಎಂಬ ಪ್ರಶ್ನೆ ಕೇಳಿಕೊಳ್ಳುವ ಅಗತ್ಯವಿದೆ. ವೈವಿಧ್ಯತೆಯೊಳಗಿನ ಏಕತೆ ಕಾಪಾಡುವುದು ನಮ್ಮ ಕರ್ತವ್ಯ.
- ಸ್ವಾಮಿ ಜಿತಕಾಮಾನಂದಜೀ ಮಹಾರಾಜ್
ಅಧ್ಯಕ್ಷರು, ಮಂಗಳೂರು
ಶ್ರೀ ರಾಮಕೃಷ್ಣ ಮಠ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.