![15](https://www.udayavani.com/wp-content/uploads/2024/12/15-5-415x249.jpg)
Didupe ದರ್ಕಾಸು ಕೆಮ್ಮಟೆಯಲ್ಲಿ ಪಾಲದಲ್ಲೇ ಓಡಾಟ; ರೋಟರಿ ತಂಡದಿಂದ ಕಾಲುಸಂಕ ಭರವಸೆ
Team Udayavani, Oct 16, 2024, 1:16 PM IST
![2](https://www.udayavani.com/wp-content/uploads/2024/10/2-26-620x331.jpg)
ಮಲವಂತಿಗೆ ಗ್ರಾಮದ ದಿಡುಪೆ ಕೆಮ್ಮಟೆ ದರ್ಕಾಸು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ದಿಡುಪೆ ದರ್ಕಾಸು ಸಾಗುವ ರಸ್ತೆಯ ಕೆಮ್ಮಟೆ ಸಮೀಪ ಶಾಶ್ವತ ಕಾಲುಸಂಕ ವಿಲ್ಲದೆ ಅಡಿಕೆ ಪಾಲದಲ್ಲಿ ಓಡಾಡುತ್ತಿದ್ದ ಕುರಿತು ‘ಉದಯವಾಣಿ ಸುದಿನ ವರದಿ’ ಆಲಿಸಿದ ಬೆಳ್ತಂಗಡಿ ರೋಟರಿ ತಂಡವು ಕಾಲುಸಂಕ ನಿರ್ಮಾಣದ ಭರವಸೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ವೆಚ್ಚದ ಕುರಿತು ವರದಿ ಸಿದ್ಧಪಡಿಸಿದೆ.
ಬೆಳ್ತಂಗಡಿ ಗ್ರಾಮದ ಅಂಚಿನಲ್ಲಿರುವ ಮಲವಂತಿಗೆ ಗ್ರಾಮದ ದಿಡುಪೆ ಐದು ಸೆಂಡ್ಸ್ ಮಾರ್ಗವಾಗಿ ದರ್ಕಾಸು ಕೆಮ್ಮಟೆ ಸಾಗುವಲ್ಲಿ ಹಿಂದೆ ನಂದಿಕಾಡು ಹೊಳೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ಮಂಡಲ ಪಂಚಾಯತ್ ಅವಧಿಯಲ್ಲಿ ನಿರ್ಮಾಣವಾಗಿತ್ತು. ಆದರೆ 2019ರ ನೆರೆ ಅದನ್ನು ಕೊಚ್ಚಿ ತನ್ನ ಪಾಲಾಗಿಸಿತ್ತು. ಬಳಿಕ ದಿನನಿತ್ಯದ ಓಡಾಟಕ್ಕೆ ಅಡಿಕೆ ಪಾಲದ ಕಾಲುಸಂಕ ರಚಿಸಿ ದಿನ ಸಾಗಿಸುತ್ತಿದ್ದರು. ಈ ಕುರಿತು ‘ಉದಯವಾಣಿ ಸುದಿನ’ ಸ್ಥಳೀಯರ ಸಮಸ್ಯೆ ಬಗ್ಗೆ ವರದಿ ಬಿತ್ತರಿಸಿತ್ತು.
ಸೇವೆಯಲ್ಲಿ ಸದಾ ಮುಂದು, ಸಮಾಜಕ್ಕಾಗಿ ಸದಾ ತುಡಿಯುವ ರೋಟರಿ ಸೇವಾ ಸಂಸ್ಥೆಯು ವರದಿ ಓದಿ ಇನ್ನಿತರ ಸಂಘ ಸಂಸ್ಥೆಯೊಂದಿಗೆ ಜತೆಗೂಡಿ ಇದೇ ಮೊದಲಬಾರಿಗೆ ರೋಟರಿ ಅಧ್ಯಕ್ಷ ಪೂರನ್ ವರ್ಮಾ ಅವರ ಮುತುವರ್ಜಿಯೊಂದಿಗೆ ಕಾಲು ಸಂಕ ನಿರ್ಮಾಣದತ್ತ ಚಿಂತಿಸಿದೆ. ಈ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಂದ ಮಾಹಿತಿ ಪಡೆದು ವರದಿ ಪಡೆದಿದ್ದು, ಮುಂದೆ ಎಂಜಿನಿಯರ್‌ಗಳ ತಂಡವು ಅಂದಾಜು ವೆಚ್ಚದ ಬಗ್ಗೆ ಪಟ್ಟಿ ಸಿದ್ಧಪಡಿಸಿ ಅನುದಾನ ಹೊಂದಿಸಲು ಮುಂದಾಗಿದೆ.
ಈ ಪ್ರದೇಶದಲ್ಲಿ 15ರಿಂದ 20 ಮನೆಗಳಿವೆ. ಇಲ್ಲಿನ 10ಕ್ಕೂ ಅಧಿಕ ಅಂಗನವಾಡಿ ಮಕ್ಕಳು, ಅಂಗವಿಕಲರು, ವೃದ್ಧರು ಇದೇ ಕಾಲು ಸಂಕ ಅನುಸರಿಸಬೇಕಿದೆ. ಸುಮಾರು 20 ಅಡಿ ಉದ್ದ, 15 ರಿಂದ 20 ಅಡಿ ಆಳವಿರುವ ಈ ಕಾಲು ಸಂಕದಲ್ಲೇ ಅಗತ್ಯ ಕಾರ್ಯಗಳಿಗೆ ದಿಡುಪೆಗೆ ಓಡಾಡ ಬೇಕಾಗಿರುವುದರಿಂದ ಕಾಲುಸಂಕ ಅಗತ್ಯವಾಗಿದೆ.
ಟಾಪ್ ನ್ಯೂಸ್
![15](https://www.udayavani.com/wp-content/uploads/2024/12/15-5-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![18-aranthodu](https://www.udayavani.com/wp-content/uploads/2024/12/18-aranthodu-150x90.jpg)
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
![3](https://www.udayavani.com/wp-content/uploads/2024/12/3-33-150x80.jpg)
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
![2](https://www.udayavani.com/wp-content/uploads/2024/12/2-32-150x80.jpg)
Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್ ಪ್ಲ್ಯಾನ್
![1](https://www.udayavani.com/wp-content/uploads/2024/12/1-34-150x80.jpg)
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
![4-bantwala](https://www.udayavani.com/wp-content/uploads/2024/12/4-bantwala-150x90.jpg)
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
![15](https://www.udayavani.com/wp-content/uploads/2024/12/15-5-150x90.jpg)
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
![15-uv-fusion](https://www.udayavani.com/wp-content/uploads/2024/12/15-uv-fusion-150x90.jpg)
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
![Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
![Consumer-Court](https://www.udayavani.com/wp-content/uploads/2024/12/Consumer-Court-150x90.jpg)
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
![16-digital-arrest](https://www.udayavani.com/wp-content/uploads/2024/12/16-digital-arrest-150x90.jpg)
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.