ಜ್ಞಾನ ಗಂಗೆ-ಜ್ಞಾನ ತುಂಗೆ ಪುಸ್ತಕ: ಬಹುಮಾನ ವಿತರಣೆ
Team Udayavani, Jan 12, 2019, 7:58 AM IST
ಬೆಳ್ತಂಗಡಿ : ಧರ್ಮಸ್ಥಳ ಶಾಂತಿವನ ಟ್ರಸ್ಟ್, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಜ್ಞಾನ ಗಂಗೆ-ಜ್ಞಾನ ತುಂಗೆ ಪುಸ್ತಕಗಳ ದ.ಕ., ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಗಣ್ಯರ ಸಮ್ಮುಖದಲ್ಲಿ ಶುಕ್ರವಾರ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ವಿತರಿಸಿದರು.
ದ.ಕ. ಜಿಲ್ಲಾ ಮಟ್ಟ
ಪ್ರಾ. ಶಾಲಾ ವಿಭಾಗ: ಭಾಷಣ ಸ್ಪರ್ಧೆ ಯಲ್ಲಿ ಮೂಡುಬಿದಿರೆ ರೋಟರಿ ಆ. ಮಾ. ಶಾಲೆಯ ಪ್ರಹ್ಲಾದ್ ಮೂರ್ತಿ ಪ್ರಥಮ, ಕೋಲ್ಚಾರು ಸರಕಾರಿ ಹಿ.ಪ್ರಾ. ಶಾಲೆಯ ನೇಹಾ ಕೆ.ಎ. ದ್ವಿತೀಯ, ಮೂಡುಬಿದಿರೆ ರೋಟರಿ ಆ.ಮಾ. ಶಾಲೆಯ ನಿಹಾರಿಕಾ ಶೆಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಐವರ್ನಾಡು ಸರಕಾರಿ ಹಿ.ಪ್ರಾ. ಶಾಲೆಯ ತನ್ಮಯಾ ಎಲ್.ಎಸ್. ಪ್ರಥಮ, ಮುರುವ ಮಾಣಿಲ ಅನುದಾನಿತ ಹಿ.ಪ್ರಾ. ಶಾಲೆಯ ಪ್ರಣತಿ ದ್ವಿತೀಯ, ಧರ್ಮಸ್ಥಳ ಎಸ್‌ಡಿಎಂ ಆ.ಮಾ.ಶಾಲೆಯ ಸಮರ್ಥ್ ಎಸ್. ಜೈನ್ ತೃತೀಯ ಸ್ಥಾನ ಪಡೆದಿದ್ದಾರೆ.
ಕಂಠಪಾಠ ಸ್ಪರ್ಧೆಯಲ್ಲಿ ಬೆಳ್ತಂಗಡಿ ಎಸ್‌ಡಿಎಂ ಆ.ಮಾ. ಶಾಲೆಯ ಚಿನ್ಮಯ ಜಿ.ಕೆ. ಪ್ರಥಮ, ಕೋಣಾಜೆ ವಿಶ್ವಮಂಗಳ ಆ.ಮಾ. ಶಾಲೆಯ ಶ್ರಾವ್ಯಾ ಎನ್. ಭಟ್ ದ್ವಿತೀಯ, ತೆಂಕಿಲ ವಿವೇಕಾನಂದ ಆ.ಮಾ. ಶಾಲೆಯ ತನ್ಮಯಿ ಯು. ತೃತೀಯ ಸ್ಥಾನ ಪಡೆದಿದ್ದಾರೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ಹಿ.ಪ್ರಾ. ಶಾಲೆಯ ಅಕ್ಷಯ್ ಶೆಟ್ಟಿ ಪ್ರಥಮ, ಪಾಣೆಮಂಗಳೂರು ಎಸ್‌ಎಲ್‌ಎನ್‌ಪಿಯ ಧನುಷ್ ದ್ವಿತೀಯ, ಮೂಡುಬಿದಿರೆ ರೋಟರಿ ಆ.ಮಾ. ಶಾಲೆಯ ಪ್ರಣವ್ ಕಿಣಿ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗ: ಭಾಷಣ ಸ್ಪರ್ಧೆ ಯಲ್ಲಿ ತೆಂಕಿಲ ವಿವೇಕಾನಂದ ಕ.ಮಾ. ಶಾಲೆಯ ಪೃಥಾ ಆರ್. ರೈ ಪ್ರಥಮ, ತೆಂಕಿಲ ವಿವೇಕಾನಂದ ಆ.ಮಾ.ಶಾಲೆಯ ಸಿಂಚನಾ ಲಕ್ಷ್ಮೀ ದ್ವಿತೀಯ, ಬಾಳಿಲ ತನುಶ್ರೀ ವಿದ್ಯಾ ಬೋಧಿನಿ ಪ್ರೌಢಶಾಲೆಯ ತನುಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಪುಂಜಾಲಕಟ್ಟೆ ಸ.ಪ.ಪೂ. ಕಾಲೇಜಿನ ಕೀರ್ತನಾ ಪ್ರಥಮ, ಸುಬ್ರಹ್ಮಣ್ಯ ಎಸ್‌ಎಸ್ ಪ.ಪೂ. ಕಾಲೇಜಿನ ನಮೃತಾ ಸಿ.ಬಿ. ದ್ವಿತೀಯ, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಸಮನ್ವಿತಾ ಕೆ. ತೃತೀಯ ಸ್ಥಾನ ಪಡೆದಿದ್ದಾರೆ.
ಕಂಠಪಾಠ ಸ್ಪರ್ಧೆಯಲ್ಲಿ ಬೆಳ್ಳಾರೆ ಸ.ಪ.ಪೂ. ಕಾಲೇಜಿನ ಪದ್ಮಿನಿ ಸಿ.ಆರ್. ಪ್ರಥಮ, ಧರ್ಮಸ್ಥಳ ಎಸ್‌ಡಿಎಂ ಪ್ರೌಢ ಶಾಲೆಯ ಕ್ಷಿತಿ ಕೆ. ರೈ ದ್ವಿತೀಯ, ಮೂಡು ಬಿದಿರೆ ಜೈನ್ ಕನ್ನಡ ಮಾಧ್ಯಮ ಶಾಲೆಯ ಜ್ಞಾನೇಶ್‌ತೃತೀಯ ಸ್ಥಾನ ಪಡೆದಿದ್ದಾರೆ.
ಚಿತ್ರಕಲಾ ಸ್ಪರ್ಧೆಯಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್ ಎಸ್. ಪ್ರಥಮ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಸುಧಾಂಶು ಆಚಾರ್ಯ ದ್ವಿತೀಯ, ಉರ್ವ ಕೆನರಾ ಪ್ರೌಢಶಾಲೆಯ ಅನನ್ಯಾ ಎಚ್. ತೃತೀಯ ಸ್ಥಾನ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.