Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ
Team Udayavani, Jan 13, 2025, 11:39 PM IST
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಪಣಿಕಲ್ಲಿನಲ್ಲಿ ರವಿವಾರ ರಾತ್ರಿ ಮತ್ತೆ ಕಾಡಾನೆ ಕಂಡುಬಂದಿದ್ದು, ಸ್ಥಳೀಯ ತೋಟಕ್ಕೆ ನುಗ್ಗಿ ಅಪಾರ ಹಾನಿ ಮಾಡಿದೆ.
ಕೃಷ್ಣ ಭಟ್ ಅವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, 5 ಸ್ಪ್ರಿಂಕ್ಲೇರ್ ಪೈಪ್, 25 ಕ್ಕಿಂತ ಅಧಿಕ ಬಾಳೆ ಗಿಡ, ಐದು ಅಡಿಕೆ ಮರ ಹಾಗೂ ಈಚಲ ಮರವನ್ನು ಮುರಿದು ಹಾಕಿದೆ. ಹಲವು ದಿನಗಳಿಂದ ಸುಳಿಯದ ಕಾಡಾನೆ ಮತ್ತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಸುಂಟಿಕೊಪ್ಪ : ಕಾಡುಪ್ರಾಣಿಗೆ ಕರು ಬಲಿ
ಮಡಿಕೇರಿ: ಸುಂಟಿಕೊಪ್ಪ ಸಮೀಪ ಮಳ್ಳೂರು ಗ್ರಾಮದಲ್ಲಿ ನಾಲ್ಕು ತಿಂಗಳ ಕರುವೊಂದು ಯಾವುದೋ ವನ್ಯಜೀವಿ ದಾಳಿಯಿಂದ ಮೃತಪಟ್ಟಿದೆ.
ಮಳ್ಳೂರಿನ ನಿವಾಸಿ ತೇಜ ಕುಮಾರ್ ಅವರಿಗೆ ಸೇರಿದ ಕರು ಇದಾಗಿದ್ದು, ಮೃತದೇಹದ ಅರ್ಧಭಾಗವನ್ನು ತಿಂದು ಹಾಕಲಾಗಿದೆ. ಕರುವನ್ನು ಹಾರಂಗಿ ಹಿನ್ನೀರು ಭಾಗದ ಕಾಫಿ ಕಣದ ಪಕ್ಕದಲ್ಲಿ ಮೇಯಲೆಂದು ಕಟ್ಟಿ ಹಾಕಲಾಗಿತ್ತು. ಹುಲಿ ಅಥವಾ ಚಿರತೆಯು ಕರುವಿನ ಮೇಲೆ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.
ಆನೆಕಾಡು ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ
Bantwala: ಡೀಸೆಲ್ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ
Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್?
Puttur: ಬಲ್ನಾಡು ಉಳ್ಳಾಲ್ತಿ ಸನ್ನಿಧಿಗೆ ಭಜನೆಯ ನಡಿಗೆಗೆ 100 ವರ್ಷದ ಸಂಭ್ರಮ!
Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.