ಬೆಳ್ತಂಗಡಿ: ರಾ.ಹೆ 73ರ ಸಮೀಪದ ಅರಣ್ಯದಲ್ಲಿ 6 ಮಂಗಗಳ ಮೃತದೇಹ ಪತ್ತೆ, ಆತಂಕ ಸೃಷ್ಟಿ
Team Udayavani, Mar 12, 2021, 9:21 AM IST
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಮಂಗಳೂರು-ವಿಲ್ಲುಪುರಂ -73 ರ ಮುಂಡಾಜೆ ಗ್ರಾಮದ ಕಾಯರ್ತೋಡಿ ರಸ್ತೆಯ ಸೀಟ್ ಬಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ರಸ್ತೆಬದಿ 6 ಮಂಗಗಳ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ಸುಮಾರು 6 ಮಂಗಗಳ ಮೃತ ದೇಹ ರಸ್ತೆ ಬದಿ ಪತ್ತೆಯಾಗಿರುವುದನ್ನು ಮುಂಜಾನೆ ಪಾದಚಾರಿಗಳು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಹಾಗೂ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸುತ್ತಮುತ್ತ ಆತಂಕ ಸೃಷ್ಟಿಯಾಗಿದೆ.
5 ಮಂಗಗಳ ಮೃತದೇಹ ಒಂದೇ ಕಡೆ ಬಿದ್ದಿದ್ದು, 1 ಮರಿ ಮಂಗ ಇನ್ನೊಂದು 30ಮೀ. ಅಂತರದಲ್ಲಿ ಸತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:ಎಚ್ಚರಿಕೆ ವಹಿಸಿ, ಕೋವಿಡ್-19 ಸಾಂಕ್ರಮಿಕ ರೋಗ ಇನ್ನೂ ಮುಗಿದಿಲ್ಲ: ಕೆಂದ್ರ ಸರ್ಕಾರ
ಇತ್ತೀಚೆಗೆ ಬೆಳಾಲು ರಸ್ತೆ ಸಮೀಪ ಎರಡು ಮಂಗಗಳ ಮೃತದೇಹ ಸಿಕ್ಕಿದ್ದು, ಅದರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಮತ್ತೆ 6 ಮಂಗಗಳ ಮೃತದೇಹ ಪತ್ತೆಯಾಗಿರುವುದು ತಾಲೂಕಿನಲ್ಲಿ ಮತ್ತೆ ಆತಂಕ ಸೃಷ್ಟಿಸುಯಾಗುವಂತೆ ಮಾಡಿದೆ.
ಇತ್ತೀಚೆಗೆ ಕೃಷಿಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಈ ಹಿನ್ನೆಲೆ ಕೊಂದು ಎಸೆದಿರಬಹುದೇ ಅಥವಾ ಇನ್ನಾವುದಾದರು ಆರೋಗ್ಯ ಸಮಸ್ಯೆಯಿಂದ ಸತ್ತು ಬಿದ್ದಿರಬಹುದೇ ಎಂಬುದು ಆರೋಗ್ಯ ಇಲಾಖೆ ಪರಿಶೀಲನೆಯಿಂದಷ್ಟೆ ತಿಳಿದುಬರಬೇಕಿದೆ.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರ ಹಣದ ದಾಹ ಆರ್ಥಿಕ ಸ್ಥಿತಿಯ ಏರುಪೇರಿಗೆ ಕಾರಣವಾಗಲಿದೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.