ಇಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಕುತೂಹಲ ಕೆರಳಿಸಿದ ಅಧ್ಯಕ್ಷ ಗಾದಿ
Team Udayavani, Nov 7, 2020, 4:36 AM IST
ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಾರ್ಯಾಲಯ.
ಬೆಳ್ತಂಗಡಿ: ಎರಡು ವರ್ಷಗಳ ಬಳಿಕ ಇಂದು (ನ. 7)ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ. ಪ.ಪಂ. ಇತಿಹಾಸದಲ್ಲೇ 11 ವಾರ್ಡ್‌ಗಳ ಪೈಕಿ ಮೊದಲ ಬಾರಿಗೆ ಬಹುಮತ ಪಡೆದಿರುವ ಬಿಜೆಪಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರುವ ಮೂಲಕ ಆಡಳಿತ ಮಂಡಳಿ ಸ್ಥಾಪಿಸುವ ಹುಮ್ಮಸ್ಸಿನಲ್ಲಿದೆ.
ತಹಶೀಲ್ದಾರ್ ಮಹೇಶ್ ಜೆ. ಚುನಾ ವಣಾಧಿಕಾರಿಯಾಗಿದ್ದು, ನ. 7ರ ಬೆಳಗ್ಗೆ 10ರಿಂದ 11ರವರೆಗೆ ನಾಮಪತ್ರ ಸ್ವೀಕಾರ ಪ್ರಕ್ರಿಯೆ, ಮಧ್ಯಾಹ್ನ 1ರಿಂದ 1.15ರವರೆಗೆ ನಾಮಪತ್ರ ಪರಿಶೀಲನೆ ನಡೆದು, 1.15ರಿಂದ 1.25ರ ವರೆಗೆ ನಾಮ ಪತ್ರ ಹಿಂಪಡೆಯಲು ಅವಕಾಶವಿದೆ. ಯಾವುದೇ ಸ್ಪರ್ಧೆ ಇಲ್ಲದಿದ್ದಲ್ಲಿ ಒಮ್ಮತದ ಆಯ್ಕೆ ನಡೆಯಲಿದೆ. ಇಲ್ಲವಾದಲ್ಲಿ ಅಪ ರಾಹ್ನ 2 ಗಂಟೆಗೆ ಚುನಾವಣೆ ನಡೆಯಲಿದೆ.
ಪೂರ್ಣಾವಧಿ ಗದ್ದುಗೆ ನಿರೀಕ್ಷೆ
ಪ.ಪಂ. 11 ವಾರ್ಡ್‌ಗಳ ಪೈಕಿ ಬಿಜೆಪಿಯು 7 ಸ್ಥಾನ ಪಡೆಯುವ ಮೂಲಕ ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್‌ಗೆ 4 ಸ್ಥಾನ ಗಳಿದ್ದು, ಉಳಿದ ಯಾವುದೇ ಪಕ್ಷಗಳು ಗೆದ್ದು ಬಂದಿಲ್ಲ. ಆದ್ದರಿಂದ ಬಿಜೆಪಿಗೆ ಪೂರ್ಣಾ ವಧಿ ಗದ್ದುಗೆ ಸಿಗುವ ನಿರೀಕ್ಷೆ ಇದೆ.
ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ
2018, ಅ. 28ರ ಚುನಾವಣೆ ನಡೆ ದಿತ್ತು. ಇದೀಗ ಆಡಳಿತ ಮಂಡಳಿ ನೇಮಕವಾಗದೆ ಎರಡು ವರ್ಷ ಪೂರ್ಣಗೊಂಡಿದೆ. ರಾಜ್ಯ ಸರಕಾರವು ಮೊದಲ ಬಾರಿಗೆ ಪ. ಪಂ.ಗಳ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಹೊರಡಿಸಿತ್ತು. ಅದರ ಪ್ರಕಾರ ಬೆಳ್ತಂಗಡಿ ಪ.ಪಂ. ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ ಎ, ಉಪಾಧ್ಯಕ್ಷರ ಹುದ್ದೆ ಸಾಮಾ ನ್ಯಕ್ಕೆ ಮೀಸಲಾಗಿತ್ತು. ಎರಡನೇ ಬಾರಿಗೆ ಬದಲಾದ ಮೀಸಲಾತಿಯಲ್ಲಿ ಅಧ್ಯಕ್ಷರ ಹುದ್ದೆ ಹಿಂದುಳಿದ ವರ್ಗ(ಬಿ), ಉಪಾ ಧ್ಯಕ್ಷ ಸಾಮಾನ್ಯಕ್ಕೆ ಮೀಸಲಾಗಿತ್ತು. ಪ್ರಸಕ್ತ ಮೂರನೇ ಬಾರಿಗೆ ಬದಲಾದ ಸನ್ನಿವೇಶ ನದಲ್ಲಿ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಎಂದು ಸರಕಾರ ಆದೇಶಿಸಿದೆ.
ಮೂವರು ಮಹಿಳೆಯರು
ಬಿಜೆಪಿಯಿಂದ 4ನೇ ವಾರ್ಡ್‌ನಲ್ಲಿ ಗೆದ್ದ ರಜನಿ ಕುಡ್ವ, 9ನೇ ವಾರ್ಡ್‌ನಿಂದ ಗೆದ್ದ ತುಳಸಿ, 10ನೇ ವಾರ್ಡ್‌ನಿಂದ ಗೆದ್ದ ಗೌರಿ ಅಧ್ಯಕ್ಷ ಸ್ಥಾನದ ಹುದ್ದೆಯ ರೇಸ್‌ನಲ್ಲಿ ಮುಂದಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಅರ್ಹತೆ ಪಡೆದಿದ್ದಾರೆ. ಪಕ್ಷದ ಸಭೆಯಲ್ಲಿ ತೀರ್ಮಾನವಾದಂತೆ ಅಧ್ಯಕ್ಷ ಸ್ಥಾನ ತುಂಬಲಿದೆ.
ಪೂರ್ಣಾವಧಿ ಅವಕಾಶ
ಪ.ಪಂ. ಚುನಾವಣೆ ಇತಿಹಾಸದಲ್ಲಿ ಅಂದರೆ 1976ರಿಂದ 1996ರವರೆಗೆ ಇದ್ದ ಪುರಸಭೆ, ಮಂಡಲ ಪಂಚಾಯತ್, ಮಧ್ಯಾಂತರ ಗ್ರಾ.ಪಂ. ಬಳಿಕ 1996ರಲ್ಲಿ ಪ.ಪಂ. ಆಗಿ ಬದಲಾಗಿ 4 ಅವಧಿಯಲ್ಲೂ ಬಿಜೆಪಿಗೆ ಪೂರ್ಣಾವಧಿ ಅಧಿಕಾರ ಗದ್ದುಗೆ ಏರಲು ಸಾಧ್ಯವಾಗಿಲ್ಲ. 2001ರಿಂದ 2006ರ ಅವಧಿಯಲ್ಲಿ ಸಮ್ಮಿಶ್ರ ಸರಕಾರ(3-ಬಿಜೆಪಿ), (3-ಕಾಂಗ್ರೆಸ್), (5-ಜೆಡಿಎಸ್) ಸ್ಥಾನ ಪಡೆದಿತ್ತು. ಎರಡೂವರೆ ವರ್ಷ ಅವಧಿಗೆ ಬಿಜೆಪಿ ಮತ್ತೆ 2 ವರ್ಷಕ್ಕೆ ಕಾಂಗ್ರೆಸ್ ಅಧಿಕಾರ ವಹಿಸಿರುವುದು ಹೊರತಾಗಿ ಇದೇ ಮೊದಲ ಬಾರಿ ಬಿಜೆಪಿ ಪೂರ್ಣ ಅವಧಿ ಅಧಿಕಾರ ಕ್ಕೇರುವುದು ನಿಶ್ಚಿತವಾಗಿದೆ. ಒಂದು ಪಕ್ಷ ದಲ್ಲಿ ಚುನಾವಣೆ ನಡೆದು ಬಹುಮತ ಕೊರತೆ ಯಾದಲ್ಲಿ ಎಂಎಲ್‌ಎ, ಎಂಎಲ್‌ಸಿ, ಸಂಸದರ ಮತವನ್ನು ಪರಿಗಣಿಸಲಾಗುತ್ತದೆ. ಬಿಜೆಪಿಗೆ ಇದು ವರದಾನವಾಗಲಿದೆ.
ಶಾಸಕರಿಗಿದು ಪ್ರತಿಷ್ಠೆ
ಬೆಳ್ತಂಗಡಿ ಪ.ಪಂ. ಚುನಾವಣೆ ಶಾಸಕ ಹರೀಶ್ ಪೂಂಜ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಅವರ ನೇತೃತ್ವದಲ್ಲೇ ಬಿಜೆಪಿ ಚುನಾವಣೆಯನ್ನು ಎದುರಿಸಿತ್ತು. ಇದೇ ಮೊದಲ ಬಾರಿಗೆ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ಶಾಸಕರು ಯಶಸ್ಸು ಸಾಧಿಸಿದ್ದಾರೆ.
ಸಂಪೂರ್ಣ ಸಿದ್ಧತೆ
ಪ.ಪಂ. ಚುನಾವಣೆಗೆ ದಿನಾಂಕ ನಿಗದಿಯಾಗಿದ್ದಂತೆ ಎಲ್ಲ ಪೂರ್ವ ತಯಾರಿ ನಡೆಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಬೇಕೆಂಬುದೇ ನಮ್ಮ ಉದ್ದೇಶ. ಎರಡು ವರ್ಷಗಳ ಬಳಿಕ ಪ.ಪಂ. ಆಡಳಿತ ಮಂಡಳಿ ಅಧ್ಯಕ್ಷ/ಉಪಾಧ್ಯಕ್ಷರ ಚಿತ್ರಣ ಸಿಗಲಿದೆ.
– ಮಹೇಶ್ ಜೆ., ತಹಶೀಲ್ದಾರ್ (ಚುನಾವಣಾಧಿಕಾರಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.