Belthangady: ತೋಡಿಗೆ ಅಡಿಕೆ ಮರವೇ ಸಂಕ!
ಬೆಳ್ತಂಗಡಿಯ ದಿಡುಪೆ ದರ್ಕಾಸು ಕೆಮ್ಮಟೆಗೆ ಬೇಕು ಶಾಶ್ವ ತ ಕಾಲುಸಂಕ 2019ರ ಮಹಾನೆರೆಗೆ ಕೊಚ್ಚಿ ಹೋಗಿದ್ದು ಮತ್ತೆ ನಿರ್ಮಾಣವಾಗಲೇ ಇಲ್ಲ
Team Udayavani, Sep 22, 2024, 12:51 PM IST
ಬೆಳ್ತಂಗಡಿ: ಅರಣ್ಯದಂಚಿನ ಪ್ರದೇಶಗಳ ನಿವಾಸಿಗಳು ವರ್ಷದ ಹೆಚ್ಚಿನ ಸಮಯದಲ್ಲಿ ತುಂಬಿಯೇ ಇರುವ ತೊರೆ, ಹಳ್ಳಗಳನ್ನು ಅಪಾಯಕಾರಿಯಾಗಿಯೇ ದಾಟುತ್ತಿದ್ದಾರೆ. ಅದೇ ರೀತಿ ಮಲವಂತಿಗೆ ಗ್ರಾಮದ ದಿಡುಪೆ ದರ್ಕಾಸು ಸಾಗುವ ರಸ್ತೆಯ ಕೆಮ್ಮಟೆ ಸಮೀಪ ಅಡಿಕೆ ಮರಗಳೇ ಸಂಕವಾಗಿ ಆಸರೆಯಾಗಿದೆ. ಇಲ್ಲಿಗೆ ಶಾಶ್ವತ ಕಾಲು ಸಂಕದ ಬೇಡಿಕೆ ಇದೆ.
ಬೆಳ್ತಂಗಡಿ ಗ್ರಾಮದ ಅಂಚಿನಲ್ಲಿರುವ ಮಲವಂತಿಗೆ ನಿವಾಸಿಗಳಿಗೆ ಕಾಡಾನೆ, ಕಾಡುಪ್ರಾಣಿಗಳು ಕೃಷಿ ನಾಶದ ಭಯವೊಂದೆಡೆಯಾದರೆ, 2019 ನೆರೆಬಳಿಕ ಭೂ ಕುಸಿತದ ಬಳಿಕ ಆತಂಕದಲ್ಲೇ ದಿನ ದೂಡುವಂತಾಗಿದೆ. ಈ ನಡುವೆ ರಸ್ತೆ, ಕಾಲುಸಂಕದ ಕೊರತೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ. ದಿಡುಪೆ ಐದು ಸೆಂಟ್ಸ್ ಕಾಲನಿ ಮಾರ್ಗವಾಗಿ ದರ್ಕಾಸು ಕೆಮ್ಮಟೆಗೆ ಸಾಗುವಲ್ಲಿ ಹಿಂದೆ ನಂದಿಕಾಡು ಹೊಳೆಗೆ ಅಡ್ಡಲಾಗಿ ಕಿರು ಸೇತುವೆಯೊಂದು ಮಂಡಲ ಪಂಚಾಯತ್ ಅವಧಿಯಲ್ಲಿ ನಿರ್ಮಾಣವಾಗಿತ್ತು. ಆದರೆ 2019ರ ನೆರೆ ಅದನ್ನು ಕೊಚ್ಚಿ ತನ್ನ ಪಾಲಾಗಿಸಿತ್ತು. ಬಳಿಕ ದಿನನಿತ್ಯದ ಓಡಾಟಕ್ಕೆ ಅಡಿಕೆ ಪಾಲದ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ.
ಗ್ರಾಪಂ ಗೆ ಮನವಿ
ಈ ಹಿಂದೆ ಇದ್ದ ಕಿರು ಕಾಲುಸಂಕ ಬಳಿ ಮತ್ತೆ ಕಾಲು ಸಂಕ ನಿರ್ಮಿಸಿದರೆ ಎರಡೆರಡು ಬೇಕಾಗುತ್ತದೆ. ಪೆರ್ನಡ್ಕ ಹೊಳೆಗೆ ದರ್ಕಾಸು ಬಳಿ ಕಾಲುಸಂಕ ನಿರ್ಮಿಸಿದರೆ ಕೆಮ್ಮಟೆ, ಪೆರ್ನಡ್ಕ, ಪರಂಬೇರು, ಆಯರೆನಂದಿಕಾಡು ಸುತ್ತಮುತ್ತ ಅನುಕೂಲವಾಗಲಿದೆ ಎಂಬುದು ಊರವರ ಅಭಿಪ್ರಾಯ. ಅವರು ಪಂಚಾಯತ್‌ಗೆ ಈ ನಿಟ್ಟಿನಲ್ಲಿ ಮನವಿ ಮಾಡಿದ್ದಾರೆ.
ದಿನ ನಿತ್ಯದ ಓಡಾಟಕ್ಕೆ ಆತಂಕ
ಈ ಪ್ರದೇಶದಲ್ಲಿ 15ರಿಂದ 20 ಮನೆಗಳಿವೆ. ಇಲ್ಲಿನ 10ಕ್ಕೂ ಅಧಿಕ ಅಂಗನವಾಡಿ ಮಕ್ಕಳು, ಅಂಗವಿಕಲರು, ವೃದ್ಧರು ಇದೇ ಕಾಲು ಸಂಕ ಬಳಸಬೇಕಾಗಿದೆ. ಸುಮಾರು 20 ಅಡಿ ಉದ್ದ, 15 ರಿಂದ 20 ಅಡಿ ಆಳವಿರುವ ಈ ಕಾಲು ಸಂಕದಲ್ಲೇ ಆಸ್ಪತ್ರೆಗೆ, ಹೈನುಗಾರಿಕೆ, ಅಗತ್ಯ ಕಾರ್ಯಗಳಿಗೆ ದಿಡುಪೆಗೆ ಓಡಾಡಬೇಕು. ಕಾಲು ಸಂಕದವರೆಗೆ ವಾಹನ ಸಾಗಲು ಕಿರಿದಾದ ರಸ್ತೆಯಿದೆ. ಬಳಿಕ ವೃದ್ಧರನ್ನು ಆಸ್ಪತ್ರೆಗೆ ಸಾಗಿಸಲೂ ಹರಸಾಹಸ ಪಡಬೇಕಿದೆ. ಮಳೆಗಾಲದಲ್ಲಿ ನೆರೆ ಅಧಿಕವಾದರೆ ಕಾಲುಸಂಕ ಮುಳುಗುತ್ತದೆ. ಅಂಗನವಾಡಿ ಮಕ್ಕಳು ಭಯದಲ್ಲೇ ಸಾಗಿ ಒಂದುವರೆ ಕಿ.ಮೀ.ದೂರದ ಅಂಗನವಾಡಿ ಸೇರುತ್ತಿದ್ದಾರೆ.
ಗರ್ಭಿಣಿಯರು, ವೃದ್ಧರು, ಸಣ್ಣಪುಟ್ಟ ಮಕ್ಕಳು ಪಾಲದಲ್ಲಿ ಓಡಾಡುವುದು ಕಷ್ಟ. ಕೆಳಗೆ ಬದಿ ಜಾರಿಬಿದ್ದರೆ ಬಂಡೆಕಲ್ಲುಗಳ ರಾಶಿಯಿದೆ. ಮಲವಂತಿಗೆ ಗ್ರಾಪಂಗೆ ಮನವಿ ನೀಡಿದ್ದೇವೆ. ಸಂಘ ಸಂಸ್ಥೆಗಳಾದರೂ ಕಾಲು ಸಂಕ ನಿರ್ಮಿಸಿ ಕೊಟ್ಟರೆ ಸಹಕಾರವಾಗಲಿದೆ.
– ರಮೇಶ್ ದರ್ಕಾಸು, ಸ್ಥಳೀಯ ನಿವಾಸಿ
ಹಿಂದೆ ಇದ್ದ ಕಾಲು ಸಂಕ ನೆರೆಗೆ ಕೊಚ್ಚಿ ಹೋಗಿದೆ. ನೂತನ ಕಾಲು ಸಂಕ ನಿರ್ಮಾಣಕ್ಕೆ ಅನುದಾನ ಬಂದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಗ್ರಾಮ ಪಂಚಾಯತ್ ವತಿಯಿಂದ ಅಡಿಕೆ
ಪಾಲದ ಸಂಕ ನಿರ್ಮಿಸಿಕೊಡಲಾಗಿದೆ.
– ಪ್ರಕಾಶ್ ಕುಮಾರ್‌ಜೈನ್ ಅಧ್ಯಕ್ಷರು, ಮಲವಂತಿಗೆ ಗ್ರಾಪಂ
ಮಲವಂತಿಗೆ ಗ್ರಾಮ ಸಹಿತ ಬೆಳ್ತಂಗಡಿ ತಾಲೂಕಿನಲ್ಲಿ 70ಕ್ಕೂ ಅಧಿಕ ಸಣ್ಣಪುಟ್ಟ ಕಾಲುಸಂಕಗಳಿವೆ. ಕೆಲವು ಖಾಸಗಿ ಸ್ಥಳದಲ್ಲಿವೆ. ಅಗತ್ಯ ಅನುದಾನದಲ್ಲಿ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು.
– ಭವಾನಿ ಶಂಕರ್, ತಾ.ಪಂ. ಇಒ ಬೆಳ್ತಂಗಡಿ
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.