Belthangady ಸಾತ್ವಿಕ ಬದುಕು ಕಟ್ಟಿಕೊಟ್ಟ ಜನಜಾಗೃತಿ: ಮಾಣಿಲ ಶ್ರೀ
ಬೆಳ್ತಂಗಡಿ: ಗಾಂಧಿಸ್ಮೃತಿ, ನವಜೀವನ ಸಮಿತಿ ಸದಸ್ಯರ ಸಮಾವೇಶ
Team Udayavani, Oct 2, 2023, 10:46 PM IST
ಬೆಳ್ತಂಗಡಿ: ಸಮಾಜದಲ್ಲಿರುವ ವೈಪರೀತ್ಯವನ್ನು ಸರಿದೂಗಿಸಿ ಸಾತ್ವಿಕ ಬದುಕು ಕಟ್ಟಿಕೊಡುವ ಸತ್ಕಾರ್ಯ ಜನಜಾಗೃತಿ ವೇದಿಕೆಯಿಂದಾಗಿದೆ. ಕಲಿಯುಗದಲ್ಲಿರುವ ವಿಶ್ವಕ್ಕೆ ದುಷ್ಟ ಕೂಟದಿಂದ ಹೊರತಾದ ಸಾತ್ವಿಕ ನೆಲೆಗಟ್ಟು ಬೇಕಿದೆ. ಆ ಪರಿವರ್ತನೆ ಮತ್ತು ಪರಮಾರ್ಜನೆಯ ಕಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ| ಹೆಗ್ಗಡೆಯವರ ಮೂಲಕ ಕೈಗೂಡಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದಲ್ಲಿ ಸೋಮವಾರ ಗಾಂಧೀಜಯಂತಿ ಪ್ರಯುಕ್ತ ಬೆಳ್ತಂಗಡಿ ಎಸ್‌ಡಿಎಂ ಕಲಾಭವನ ವಠಾರದಲ್ಲಿ ಹಮ್ಮಿಕೊಂಡ ಗಾಂಧಿಸ್ಮತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಗಾಂಧೀಜಿಯವರ ಕನಸು ನನಸಾಗಿಸಲು ವ್ಯಸನಿಗಳನ್ನು ದುಶ್ಚಟ ಮುಕ್ತಗೊಳಿಸಿ ನವಜೀವನ ಕಲ್ಪಿಸಿದ ಕೀರ್ತಿ ಡಾ| ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಪ್ರಧಾನ ಧರ್ಮಗುರು ವಂ| ವೊಲ್ಟರ್ ಒಸ್ವಲ್ಡ್ ಡಿ’ಮೆಲ್ಲೊ, ಹೊಸನಗರ ಜುಮ್ಮಾ ಮಸೀದಿ ಪ್ರಧಾನ ಧರ್ಮಗುರು ಮೌಲಾನ ಅಶ್ರಫ್ ಹಿಮಾಮಿ ಶುಭ ಹಾರೈಸಿದರು. “ವ್ಯಸನಮುಕ್ತ ಕುಟುಂಬ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ವಿಚಾರವಾಗಿ ನ್ಯಾಯವಾದಿ ಸಹನಾ ಕುಂದರ್ ಮಾತನಾಡಿದರು.
ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ್ ಸಾಧಕರನ್ನು ಸಮ್ಮಾನಿಸಿ, ವೇದಿಕೆಯು ರಾಜ್ಯದ 31 ಜಿಲ್ಲೆಗಳಲ್ಲಿ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಿಸಿದೆ. ಈವರೆಗೆ 1,661 ಮದ್ಯವರ್ಜನ ಶಿಬಿರಗಳನ್ನು ಸಂಘಟಿಸಿ 1,25,874 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮುಂಬಯಿ ಉದ್ಯಮಿ ಆರ್.ಬಿ. ಹೆಬ್ಬಳ್ಳಿ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜಾ, ದ.ಕ. ಜಿಲ್ಲಾ-1ರ ನಿರ್ದೇಶಕ ಮಹಾಬಲ ಕುಲಾಲ್, ಕೇಂದ್ರ ಒಕ್ಕೂಟ ಬೆಳ್ತಂಗಡಿ ಅಧ್ಯಕ್ಷ ಸೀತಾರಾಮ ಆರ್., ಗುರುವಾಯನಕೆರೆ ಅಧ್ಯಕ್ಷ ಸದಾನಂದ ಬಂಗೇರ, ಬಂಟ್ವಾಳ ಅಧ್ಯಕ್ಷ ಚಿದಾನಂದ ರೈ ಕಕ್ಯ, ಯೋಜನಾಧಿಕಾರಿ ಗಳಾದ ದಯಾನಂದ ಪೂಜಾರಿ, ಮಾಧವ ಗೌಡ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ ಸ್ವಾಗತಿಸಿ, ಯೋಜನಾಧಿಕಾರಿಗಳಾದ ಸುರೇಂದ್ರ ವಂದಿಸಿದರು. ರಾಮ್ ಕುಮಾರ್ ನಿರೂಪಿಸಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡಲಾಯಿತು. ಜ.ವೇ. ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾçಸ್ ಹಕ್ಕೊತ್ತಾಯ ಮತ್ತು ಠರಾವು ಮಂಡಿಸಿ ಶಾಸಕ ಹರೀಶ್ ಪೂಂಜರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮ್ಮಾನ
ನವಜೀವನ ಸಾಧಕರಾದ ಲಿಂಗಪ್ಪ ಗೌಡ, ಅಚ್ಯುತ ಅಚಾರ್ಯ, ವಿಶ್ವನಾಥ ಬಸವನಗುಡಿ, ಸುಂದರ, ಬಿರ್ಮಣ ಪೂಜಾರಿ, ಕುಞ್ಞ ಗೌಡ, ಸಂಜೀವ ಗೌಡ ಹಾಗೂ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದ ಸಾಧಕರಾದ ಹರೀಶ್ ಕೂಡಿಗೆ, ಸತೀಶ್ ಆಚಾರ್ಯ, ಸ್ನೇಕ್ ಪ್ರಕಾಶ್, ನಾಗೇಶ್, ಜೀವ ರಕ್ಷಕ ತರಬೇತುದಾರ ಸಂತೋಷ್ ಅವರನ್ನು ಸಮ್ಮಾನಿಸಲಾಯಿತು. ಉತ್ತಮ ಘಟಕ ಪ್ರಶಸ್ತಿಗೆ ಪಾತ್ರರಾದ ಬೆಳ್ತಂಗಡಿಯ ನಡ ಘಟಕ, ಗುರುವಾಯನಕೆರೆಯ ಅಳದಂಗಡಿ ಘಟಕದ ಸದಸ್ಯರನ್ನು ಹಾಗೂ ಶೌರ್ಯ ಜೋಡಿಯಾಗಿ ತಣ್ಣೀರುಪಂತ ಘಟಕದ ಶೋಭಾ, ಪ್ರಶಾಂತ್ ದಂಪತಿಯನ್ನು ಗೌರವಿಸಲಾಯಿತು. ಪಾನಮುಕ್ತ ಮನೆಯವರ ಪರವಾಗಿ ವಸುಧಾ, ಶೀಲಾವತಿ, ಪಾನಮುಕ್ತರಾದ ಸಂಜೀವ ಗೌಡ ದಿಡುಪೆ ಅನಿಸಿಕೆ ವ್ಯಕ್ತಪಡಿಸಿದರು.
ಡಾ| ಹೆಗ್ಗಡೆ ಜತೆಗೆ ನಾವಿದ್ದೇವೆ
ಕಾರ್ಯಕ್ರಮ ಉದ್ಘಾಟಿಸಿದ ವಿ.ಪ.ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಮೂಲಕ ಸತ್ಯ, ನ್ಯಾಯ, ಧರ್ಮದ ಹಾದಿಯಲ್ಲಿ ಸಮಾಜದ ಪರಿವರ್ತನೆಗಾಗಿ ಡಾ| ಹೆಗ್ಗಡೆ ಕಟಿಬದ್ಧರಾಗಿದ್ದಾರೆ. ಸಮಾಜದ ಉದ್ಧಾರಕ್ಕಾಗಿ ಅವರ ನಿಲುವಿನೊಂದಿಗೆ ಯಾವುದೇ ಅಡೆತಡೆಗಳಿದ್ದರೂ ಮೆಟ್ಟಿ ನಾವೆಲ್ಲ ಹೆಜ್ಜೆ ಇಡುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.