Belthangady: ನಿನ್ನಿಕಲ್‌ನಲ್ಲಿ ಶೀಘ್ರ ಸಬ್‌ಸ್ಟೇಷನ್ ಪ್ರಾರಂಭ
ಬೆಳ್ತಂಗಡಿ: ಮೆಸ್ಕಾಂ ಜನ ಸಂಪರ್ಕ ಸಭೆ; ಹೆಚ್ಚಿಗೆ ವಿದ್ಯುತ್ ನಿಲುಗಡೆಗೆ ಆಕ್ಷೇಪ
Team Udayavani, Dec 9, 2024, 12:32 PM IST
ಬೆಳ್ತಂಗಡಿ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ ಇದರ ವತಿಯಿಂದ ಬೆಳ್ತಂಗಡಿ ಮತ್ತು ಉಜಿರೆ ಉಪ ವಿಭಾಗ ಕಚೇರಿಯ ವಿದ್ಯುತ್ ಬಳಕೆದಾರರ ಜನ ಸಂಪರ್ಕ ಸಭೆ ಬೆಳ್ತಂಗಡಿ ಉಪ ವಿಭಾಗ ಕಚೇರಿಯಲ್ಲಿ ನಡೆಯಿತು.
ಮೆಸ್ಕಾಂ ಮಂಗಳೂರು ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಲೋಡ್ ಸಮಸ್ಯೆಗೆ ಎಲ್ಲ ಉಪ ವಿಭಾಗದಲ್ಲಿ ಹೆಚ್ಚುವರಿ ವಿದ್ಯುತ್ ಒದಗಿಸಿ ಅಪ್ ಗ್ರೇಡ್ ಮಾಡಲಾಗಿದೆ. ನಿನ್ನಿಕಲ್‌ನಲ್ಲಿ ಸಬ್‌ಸ್ಟೇಷನ್ ಕಾಮಗಾರಿ ಶೀಘ್ರ ಪ್ರಾರಂಭ ಆಗಲಿದೆ. ಬೆಳಾಲಿನಲ್ಲಿ ಸಬ್‌ಸ್ಟೇಷನ್ ಆರಂಭಕ್ಕೆ ನಿಗದಿ ಪಡಿಸಿದ ಜಾಗದಲ್ಲಿ ಅರಣ್ಯ ಇಲಾಖೆಯ ಜಾಗ ಎಂಬ ಆಕ್ಷೇಪ ಇದ್ದು ಬೇರೆ ಜಾಗ ಇದ್ದಲ್ಲಿ ತಹಶೀಲ್ದಾರ್‌ರನ್ನು ಸಂಪರ್ಕ ಮಾಡಿ ಜಾಗ ಮಂಜೂರಾದರೆ ಅಲ್ಲಿ 110 ಕೆವಿ ಸಬ್ ಸ್ಟೇಷನ್ ಪ್ರಾರಂಭ ಮಾಡಲಾಗುವುದು ಎಂದರು.
ಬಂಟ್ವಾಳ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಡಿ.ಎಚ್., ಉಜಿರೆ ಉಪ ವಿಭಾಗದ ಸಹಾಯಕ ಕಾರ್ಯನಿವಾಹಕ ಎಂಜಿನಿ ಯರ್ ಪ್ರವೀಣ್ ಬಿ.ಎನ್., ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿ ಚಂದ್ರಶೇಖರ್, ತಾಲೂಕಿನ ವಿವಿಧ ಉಪ ವಿಭಾಗದ ಸಹಾಯಕ ಎಂಜಿನಿಯರ್, ಸಿಬಂದಿ, ವಿದ್ಯುತ್ ಬಳಕೆದಾರರು ಹಾಜರಿದ್ದರು. ವಿದ್ಯುತ್ ಗ್ರಾಹಕರು ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ನಂದಿನಿ ಎಂ.ಸ್ವಾಗತಿಸಿ, ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ರಾಗ್ಸ್ ವಂದಿಸಿದರು.
ಮನೆ ಮೇಲೆ ಸೋಲಾರ್ ಅಳವಡಿಸಿರೆ 78 ಸಾವಿರ ಸಬ್ಸಿಡಿ
ಸರಕಾರದ ಯೋಜನೆಯಂತೆ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ಸೌರ ಶಕ್ತಿಯಿಂದ ವಿದ್ಯುತ್ ಉಪಯೋಗ ಮಾಡಿದರೆ ಸರಕಾರದಿಂದ 78 ಸಾವಿರ ಸಬ್ಸಿಡಿ ಪಡೆಯ ಬಹುದು. ಇದರಿಂದ ಹೆಚ್ಚುವರಿ ವಿದ್ಯುತ್ ಮೆಸ್ಕಾಂ ಖರೀದಿ ಮಾಡುತ್ತದೆ ಎಂದು ಮೆಸ್ಕಾಂ ಮಂಗಳೂರು ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಹೇಳಿದರು.
ಬಾಲ ಸುಬ್ರಹ್ಮಣ್ಯ ಭಟ್ ಮಾತನಾಡಿ, ವಿದ್ಯುತ್ ನಿಲುಗಡೆ ಇದ್ದ ದಿನ ಸಂಜೆ 5.30 ರ ಒಳಗೆ ಎಂದು ಪ್ರಕಟನೆಯಲ್ಲಿ ಸೂಚನೆ ನೀಡಿ ರಾತ್ರಿ ವರೆಗೂ ಕೊಡುವುದಿಲ್ಲ, ಯಾಕೆ ಎಂದು ಪ್ರಶ್ನಿಸಿದರು.
ಮುಂದಕ್ಕೆ ಸರಿ ಮಾಡುವ ಎಂದು ಅಧಿಕಾರಿಗಳು ಹೇಳಿದರು. ಕೆಲವು ಖಾಸಗಿ ಕಟ್ಟಡದವರು ರಸ್ತೆ ಬದಿಯ ಸರಕಾರಿ ಜಾಗದಲ್ಲಿ ವಿದ್ಯುತ್ ಕಂಬ ಹಾಕಿದ್ದಾರೆ. ಅದನ್ನು ಅವರ ಜಾಗದಲ್ಲಿಯೇ ಹಾಕಲು ಕ್ರಮ ಕೈಗೊಳ್ಳಬೇಕು, ಸರಕಾರಿ ಜಾಗದಲ್ಲಿ ಇರುವ ಖಾಸಗಿ ಪಂಪು ಸೆಟ್ ತೆಗೆಯಬೇಕು, ಹಳೆ ತಂತಿ ಬದಲಾಯಿಸಿ, ಜನ ಸಂಪರ್ಕ ಸಭೆ ನಡೆಯುವ ದಿನಾಂಕ, ಸಮಯ ಗ್ರಾಹಕರಿಗೆ ಮೊದಲೇ ತಿಳಿಸಬೇಕು ಇತ್ಯಾದಿ ಬೇಡಿಕೆಗಳು ಸಭೆಯಲ್ಲಿ ವ್ಯಕ್ತವಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.