‘ಭಾರತದ ಪರಂಪರೆ ವಿಶ್ವಮಾನ್ಯ’
Team Udayavani, Feb 6, 2019, 6:29 AM IST
ಬಂಟ್ವಾಳ : ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ ಯಾವುದೇ ಸರಿಸಾಟಿ ಇಲ್ಲ. ಬಹು ಸಂಸ್ಕೃತಿಯ ನಾಡಾದರೂ ಇಡೀ ದೇಶವೇ ಒಂದು ಎಂಬ ಭಾವ ನಮ್ಮನ್ನು ಆವರಿಸಿದೆ. ಇಲ್ಲಿನ ಜ್ಞಾನ, ಪರಂಪರೆ ಎಲ್ಲವೂ ವಿಶ್ವಮಾನ್ಯ ವಾಗಲು ಕಾರಣವಾಗಿದೆ. ನಮ್ಮ ಭೌಗೋ ಳಿಕ ವ್ಯವಸ್ಥೆಯು ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸಿದೆ ಎಂದು ವಿದ್ವಾಂಸ ಶತಾವಧಾನಿ ಡಾ| ಆರ್. ಗಣೇಶ್ ಹೇಳಿದರು.
ಅವರು ಮಂಗಳವಾರ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ವೇದವ್ಯಾಸ ಧ್ಯಾನ ಮಂದಿರ ದಲ್ಲಿ ನಡೆದ ರಾಜ್ಯಮಟ್ಟದ 8ನೇ ವರ್ಷದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸೂರ್ಯ ಪ್ರಭಾವ
ಸೂರ್ಯ ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಭೂಮಧ್ಯೆ ರೇಖೆಯ ಭಾಗದಲ್ಲಿ ಇರುವಂತಹ ನಾವು ಸೂರ್ಯನ ನೇರ ಪ್ರಭಾವಕ್ಕೆ ಒಳಗಾಗಿರುವುದರಿಂದ ನಮ್ಮ ಚಿಂತನೆ, ಯೋಚನೆ ಗಳೆಲ್ಲವೂ ಉದಾತ್ತ ಮಟ್ಟಕ್ಕೆ ಏರಿದವು. ಏಕೆಂದರೆ ಸೂರ್ಯ ಜ್ಞಾನದ ಮೂಲ. ನಮ್ಮ ಸಂಸ್ಕೃತಿಯ ಯಾವುದೇ ಭಾಗವಿರಲಿ ಅದು ಅರಳಿಸಿ, ವ್ಯಕ್ತಿತ್ವವನ್ನು ವಿಕಸನಗೊಳಿಸಿ ನಮ್ಮನ್ನು ಎತ್ತರಕ್ಕೆ ಏರಿಸುವಂತದ್ದು ಎಂದರು.
ಜ್ಞಾನ ಪರಂಪರೆಯ ವಾರಸುದಾರರು
ನಮ್ಮ ಜ್ಞಾನದ ಪರಂಪರೆ ತುಂಬಾ ನಶಿಸಿ ಹೋಗಿದೆ ಎಂಬ ಭಾವನೆ ನಮ್ಮಲ್ಲಿದ್ದರೂ ಇಂದಿಗೂ ಶೇ. 80ಕ್ಕೂ ಹೆಚ್ಚು ಉಳಿದುಕೊಂಡಿದೆ ಎಂಬುದು ಹೆಮ್ಮೆಯ ವಿಚಾರ. ಪಾಕಿಸ್ತಾನ, ಅಪ ಘಾನಿಸ್ತಾನಗಳಂತಹ ದೇಶದಲ್ಲಿದ್ದ ನಮ್ಮ ಪ್ರಾಚೀನ ವಿಶ್ವವಿದ್ಯಾನಿಲಯಗಳು ನಿರಂತರ ದಾಳಿಯಿಂದ ಜರ್ಝರಿತ ಗೊಂಡಿವೆಯಾದರೂ ಇಂದಿಗೂ ಜ್ಞಾನ ಪರಂಪರೆಯ ವಾರಸುದಾರರು ನಾವು ಎಂಬ ಹೆಮ್ಮೆ ನಮಗಿರಲಿ ಎಂದು ಅವರು ಕಿವಿಮಾತು ಹೇಳಿದರು.
ನೈಜತೆ ಅರಿವಿಗೆ ಬರಲಿ
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವನೆ ನೀಡಿ ಮಾತನಾಡಿ, ನಮ್ಮ ಸಂಸ್ಕೃತಿಯ ವಿಶ್ವವ್ಯಾಪಕತೆಯ ಬಗೆಗೆ ನಮಗೆ ಅರಿವಿಲ್ಲದಿರುವುದು ದುರಂತ. ಉದ್ದೇಶಪೂರ್ವಕವಾಗಿ ಪಠ್ಯಪುಸ್ತಕಗಳಿಂದ ನಮ್ಮ ವೀರ ಪರಂಪರೆಯ ವಿಷಯ ಕೈಬಿಡಲಾಗಿದೆ. ಇಂತಹ ದುರುದ್ದೇಶಪೂರಿತ ವ್ಯಕ್ತಿಗಳೇ ಶಿಕ್ಷಣ ಇಲಾಖೆಯನ್ನು ನಿರ್ವಹಿಸುತ್ತಿರುವುದು ಖೇದಕರ. ಆದರೆ ಯಾವುದೋ ಒಂದು ಹಂತದಲ್ಲಿ ನೈಜತೆ ಅರಿವಿಗೆ ಬರಲೇಬೇಕಲ್ಲವೇ. ಅದಕ್ಕಾಗಿ ಈ ವಿಚಾರ ಸಂಕಿರಣ ಎಂದರು.
ದಿನಪೂರ್ತಿ ನಡೆದ ವಿಚಾರ ಸಂಕಿರಣದ 2ನೇಯ ಅವಧಿಯಲ್ಲಿ ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ| ಶರದ್ ಹೆಬ್ಟಾಳ್ಕರ್ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರ ಎಂಬ ವಿಷಯ ಮಂಡಿಸಿದರು.
ಪ್ರಜ್ಞಾಪ್ರವಾಹ ಸಂಯೋಜಕ ರಘನಂದನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಹಾಗೂ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ವಿಚಾರ ಸಂಕಿರಣದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರದ ವಿವಿಧ ಆಯಾಮಗಳನ್ನು ಬಿಂಬಿಸುವ ನೂರಾರು ಪ್ರದರ್ಶಿನಿಗಳು, ಹತ್ತಾರು ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.
ಮಹಾನ್ ರಾಷ್ಟ್ರ
ಇಲ್ಲಿನ ಆಹಾರ, ಉಡುಗೆ-ತೊಡುಗೆ, ಪದ್ಧತಿಗಳು ಎಲ್ಲವೂ ವಿಭಿನ್ನವಾಗಿ ತೋರಿಬಂದರೂ ನಮ್ಮದು ಒಂದೇ ಸಂಸ್ಕೃತಿಯನ್ನು ಹೊಂದಿದ ಮಹಾನ್ ರಾಷ್ಟ್ರ. ಯಾವ ಆಚರಣೆಗೂ ಇಲ್ಲಿ ವಿರೋಧವಿಲ್ಲ. ಆದ್ದರಿಂದ ಭಾರತದವರು, ಹಿಂದೂಗಳು ಅಸಹಿಷ್ಣುಗಳಾಗಲು ಸಾಧ್ಯವೇ ಇಲ್ಲ.
ಶತಾವಧಾನಿ ಡಾ| ಆರ್. ಗಣೇಶ್ ವಿದ್ವಾಂಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.