ಸರಕಾರಿ ಶಾಲೆ ಅಭಿವೃದ್ಧಿಗೆ 10 ಕೋ. ರೂ. ಸಿಎಸ್‌ಆರ್ ನಿಧಿ
ಬೆಳ್ತಂಗಡಿ ತಾಲೂಕು ಪಂಚಾಯತ್ ಕೆಡಿಪಿ ತ್ತೈಮಾಸಿಕ ಸಭೆ
Team Udayavani, Jul 7, 2019, 5:00 AM IST
ಬೆಳ್ತಂಗಡಿ: ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ ಹಾಗೂ ಕಟ್ಟಡ ಸಹಿತ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಾಲೂಕಿಗೆ ಸಿಎಸ್‌ಆರ್ ನಿಧಿ ಮೂಲಕ 10 ಕೋ. ರೂ. ಅಂದಾಜು ಮೊತ್ತ ನೀಡಲು ಎಂಆರ್‌ಪಿಎಲ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ತಾಲೂಕು ಪಂಚಾಯತ್ ಸಭಾಭವನ ದಲ್ಲಿ ಶನಿವಾರ ಜರಗಿದ ತ್ತೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಸಭೆ ಕರೆಯಲಾಗಿದೆ. 55 ಶಾಲೆಗಳಿಗೆ ಶೌಚಾಲಯ ನಿರ್ಮಾಣ, ವಿದ್ಯುತ್ ಸಂಪರ್ಕಕ್ಕಾಗಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗುವುದು. ಈಗಾಗಲೇ 20 ಶಾಲೆಗಳಿಗೆ 2 ಕೋ. ರೂ. ಫಂಡ್ ಇರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಶಿಕ್ಷಣ ಇದ್ದಲ್ಲಿ ಮಕ್ಕಳ ಸಂಖ್ಯೆ ಪರಿಗಣಿಸಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ. ಸರಳೀಕಟ್ಟೆ, ನಾರಾವಿ, ಬಯಲು, ಬದನಾಜೆ, ಕಾಶಿಪಟ್ಣದಲ್ಲಿ ಸಹಿತ ಇನ್ನೂ 5 ಶಾಲೆಗಳಲ್ಲಿ ಆರಂಭಿಸುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್ ಸಭೆಗೆ ಮಾಹಿತಿ ನೀಡಿದರು.
ತಾ|್ಞಲ್ಲಿ ಆರ್‌ಟಿಸಿ ಸಿಗದ ಶಾಲೆಗಳಿವೆ. ಅವುಗಳ ಕುರಿತು ಏನು ಕ್ರಮ ಜರಗಿಸ ಲಾಗಿದೆ. ಆಂಗ್ಲ ಮಾಧ್ಯಮ ಶಾಲೆ ತೆರೆಯು ವಲ್ಲಿ ಪ್ರದೇಶದ ತಾರತಮ್ಯ ತೋರದಂತೆ, ಜಿ.ಪಂ. ರಸ್ತೆ ಕಾಮಗಾರಿಗೆ ಅನು ದಾನ ಒದಗಿಸುವಂತೆ ಶಾಹುಲ್ ಹಮೀದ್ ತಿಳಿಸಿದರು. ಅದಕ್ಕೆ ಕೊರಗಪ್ಪ ನಾಕ್, ದರಣೇಂದ್ರ ಕುಮಾರ್ ಧ್ವನಿಗೂಡಿಸಿದರು.
23 ಶಾಲೆಗಳಿದ್ದು, 14 ಕಂದಾಯ, 6 ಅರಣ್ಯ, 3 ಖಾಸಗಿ ಒಡೆತನದಲ್ಲಿದೆ ಎಂದು ಬಿಇಒ ಸತೀಶ್ ಮಾಹಿತಿ ನೀಡಿದರು.
ಉಜಿರೆಯಿಂದ ಪೆರೆಯಶಾಂತಿವರೆಗೆ ರಸ್ತೆ ವಿಸ್ತಾರ ಹಾಗೂ ನಿರ್ವಹಣೆ ವಿಚಾರದಲ್ಲಿ ಗೊಂದಲವಿದೆ. ಗೇರುಕಟ್ಟೆ-ಕುಂಡದಬೆಟ್ಟು, ನಾರಾವಿ – ಗುರುವಾಯನಕೆರೆ ಸಹಿತ ಪ್ರಮುಖ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕೊಳೆರೋಗಕ್ಕೆ 11 ಕೋ. ರೂ.
ಕೊಳೆರೋಗ ಪರಿಹಾರ ವಿಚಾರವಾಗಿ ಧರಣೇಂದ್ರ ಪ್ರಶ್ನೆಗೆ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಪ್ರತಿಕ್ರಿಯಿಸಿ, ಈಗಾಗಲೇ 8 ಕಂತುಗಳಲ್ಲಿ 11 ಕೋ. ರೂ. ಪರಿಹಾರ ಯೋಜನೆಯಲ್ಲಿ ಅನುದಾನ ಬಂದಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದು, ವಿಎಗಳಿಗೆ ಕೊಟ್ಟು ರೀ ಎಂಟ್ರಿ ಮಾಡಲಾಗುತ್ತಿದೆ. ಆಧಾರ್ ನಲ್ಲಿರುವ ವಿಳಾಸ ಹೆಸರಿನ ತಿದ್ದುಪಡಿ ಸಹಿತ ಲೋನ್ ಹೊಂದಿದ ಬ್ಯಾಂಕ್‌ಗೆ ಪರಿಹಾರ ವಿತರಣೆಯಾಗದೆ ಬಾಕಿ ಉಳಿ ದಿದೆ. ಜು. 31ರ ವರೆಗೆ ಅವಧಿ ವಿಸ್ತರಿಸಿ ಪರಿಶೀಲಿಸಲಾಗುತ್ತಿದೆ ಎಂದರು.
ಅರ್.ಎಂ.ಎಸ್. ಕಟ್ಟಡ ಅಸಮರ್ಪಕ ವಾಗಿರುವ ಕುರಿತು ಕೊರಗಪ್ಪ ನಾಯ್ಕ ಪ್ರಸ್ತಾವಿಸಿದಾಗ, ನಿರ್ಮಾಣಕ್ಕೆ ಯಾರೂ ಟೆಂಡರ್ ಹಾಕದಿರುವುದು ಸಮಸ್ಯೆಯಾಗಿದೆ ಎಂದು ಶಾಸಕರು ತಿಳಿಸಿದರು.
ಭಾಗ್ಯಲಕ್ಷ್ಮೀ ಬಾಂಡ್
ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಎಷ್ಟು ವಿತರಿಸಲಾಗಿದೆ. ಈ ಕುರಿತು ಮಾಹಿತಿ ನೀಡುವಂತೆ ಮಮತಾ ಶೆಟ್ಟಿ ಪ್ರಶ್ನಿಸಿದರು. 505 ಬಾಂಡ್ ಬಂದಿವೆ. ವಲಯವಾರು ವಿತರಣೆ ಮಾಡಲಾಗುವುದು ಎಂದು ಸಿಡಿಪಿಒ ಪ್ರೀಯಾ ಆಗ್ನೇಸ್ ತಿಳಿಸಿದಾಗ ಕಾರ್ಯಕ್ರಮ ಮಾಡಿ ವಿತರಣೆ ಮಾಡು ವಂತೆ ಶಾಸಕರು ಸೂಚಿಸಿದರು.
ಅಂಬೇಡ್ಕರ್ ಭವನಕ್ಕೆ ಜಾಗ ಗುರುತಿ ಸುವುದು, ಅರಸಿನಮಕ್ಕಿ, ಕೊಕ್ಕಡ, ಶಿಶಿಲ, ಶಿಬಾಜೆ ವಿಭಾಗದಲ್ಲಿ ವಿದ್ಯುತ್ ಸಮಸ್ಯೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಯಂತ್ರ ಸಮಸ್ಯೆ, ಹೆಚ್ಚುವರಿ ಡಯಾಲಿಸಿಸ್ ಯಂತ್ರಕ್ಕೆ ಬೇಡಿಕೆ ಇದ್ದು, ಸಿಬಂದಿ ಹಾಗೂ ವೈದ್ಯರನ್ನು ನೇಮಿಸುವ ಕುರಿತು ಸದಸ್ಯರು ಗಮನ ಸೆಳೆದರು. ಟಿ.ಎಚ್.ಒ. ಹಾಗೂ ವೈದ್ಯಾಧಿಕಾರಿ ಸಮಸ್ಯೆ ಕುರಿತು ಸಭೆಗೆ ಮಾಹಿತಿ ನೀಡಿದರು.
ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಇಒ ಕೆ.ಇ. ಜಯರಾಂ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್ ಉಪಸ್ಥಿತರಿದ್ದರು.
ಕಿಸಾನ್ ಸಮ್ಮಾನ್‌ಗೆ 26 ಸಾವಿರ ಅರ್ಜಿ
ಕಿಸಾನ್ ಸಮ್ಮಾನ್ ಯೋಜನೆಯಡಿ 50 ಸಾವಿರ ಗುರಿ ಇದ್ದು, ಈಗಾಗಲೇ 26 ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಸಮಯದ ಕೊರತೆ ಇರುವುದರಿಂದ ಪಂ.ಗೆ ಅರ್ಜಿ ಕಳುಹಿಸಿ ಭರ್ತಿಮಾಡಲು ಸೂಚನೆ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಪ್ರೇಮಾ ಡಿ. ಕಾಮ್ಲೆ ತಿಳಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಈ ಕುರಿತು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪ್ರಯತ್ನಿಸಲು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.