ಸಾಹಿತ್ಯ ಸಮ್ಮೇಳನ ಅಮೃತ ಕಲಶವಾಗಲಿ
Team Udayavani, Jan 17, 2019, 9:06 AM IST
ಬೆಳ್ತಂಗಡಿ (ಪಾಂಡ್ಯಪ್ಪ ಅರಸರಾದ ಕೃಷ್ಣರಾಜ ಅಜಿಲ ವೇದಿಕೆ, ಅಳದಂಗಡಿ) : ಸಾಹಿತ್ಯ ಸಮ್ಮೇಳನಗಳು ಸಂಬಂಧ ಗಳ ಬೆಸುಗೆ ಬಲಪಡಿಸಬೇಕು. ವೈಷಮ್ಯದ ಬೆಂಕಿ ಯನ್ನು ಶೀತಲಗೊಳಿಸುವ ಅಮೃತ ಕಲಶ ವಾಗ ಬೇಕು. ಜಾತಿ, ಮತಗಳ ನಡು ವಣ ಬಿಗಿ ಬಂಧ ವನ್ನು ಸಡಿಲಿಸಿ, ಸೌಹಾರ್ದ ಬದುಕಿನ ಸೇತುವೆಯಾಗಬೇಕೆಂದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಬಣ್ಣಿಸಿದರು. ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಪ್ರಸ್ತುತ ಕಾಲದಲ್ಲಿ ಸಾಹಿತಿಯ ಬರಹಗಳು ಜಾತಿ ಪಟ್ಟಿಗೆ ಸೇರುತ್ತಿವೆ. ಪತ್ರಿಕೆಯಲ್ಲಿ ಬರುವ ಸಾಹಿತ್ಯವನ್ನು ಓದಿ ಆಸ್ವಾದಿಸುವ ಬದಲು ಬರಹಗಾರನ ಜಾತಿಯಿಂದ ವಿಂಗಡನೆ ಯಾಗುವ ಸಾಹಿತ್ಯ ಸಮಾಜದಲ್ಲಿ ಬಿರುಕು ಮೂಡಿಸುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಇಂತಹ ಸಮ್ಮೇಳನ ಗಳು ಜಾತಿಯೊಡೆಯುವ ಮನಗಳನ್ನು ಪರಿವರ್ತಿಸುವ ಜತೆಗೆ ಜಾತಿ ಭೇದವಿಲ್ಲದೆ ಎಲ್ಲರಿಗೂ ಸಮೀಪವಾಗಿ ಸಂಬಂಧಗಳನ್ನು ಬೆಸೆಯುವಂತಾಗಬೇಕು.
ಕನ್ನಡ ಪತ್ರಿಕೆ ಓದಿ
ಕೇರಳದಲ್ಲಿ ಪ್ರತಿಯೊಬ್ಬ ಅಕ್ಷರಸ್ಥನೂ ಒಂದೊಂದು ಪತ್ರಿಕೆಯನ್ನು ಕೊಳ್ಳುವ ಅಭ್ಯಾಸ ಹೊಂದಿದ್ದು, ಇಲ್ಲಿ ಒಂದೇ ಪತ್ರಿಕೆ ಕೊಂಡು 10 ಮಂದಿ ಓದುವ ಪರಿಪಾಠವಿದೆ. ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು, ದಿನಕ್ಕೊಂದು ಕನ್ನಡ ಪತ್ರಿಕೆ ಓದು ಅಭ್ಯಾಸವಿರುವವನು ತನ್ನ ಭಾಷೆಯ ಆಳವನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸಬಹುದು.
ಕನ್ನಡದ ಕಲಿಕೆಗೆ ನೆಲೆಯಾಗಿದ್ದ ಸರಕಾರಿ ಶಾಲೆಗಳು ಭೂತಕಾಲದ ಗರ್ಭ ಸೇರುತ್ತಿವೆ. ಕನ್ನಡ ಮಾಧ್ಯಮಗಳಲ್ಲಿ ಕಲಿತರೆ ಉನ್ನತ ಶಿಕ್ಷಣ ಸಾಧ್ಯವಿಲ್ಲವೆಂಬ ಭಾವ ಕನ್ನಡಕ್ಕಾಗಿ ಚಳವಳಿ ನಡೆಸುತ್ತಿರುವ ಕಟ್ಟಾಳುಗಳಲ್ಲಿಯೇ ವ್ಯಕ್ತವಾಗುತ್ತಿದೆ. ಅಂಥವರ ಮಕ್ಕಳು ಆಂಗ್ಲ ಭಾಷೆಯ ಶಾಲೆಗಳಿಗೆ ಹೋಗುತ್ತಿದ್ದು, ಭಾಷೆಯ ರಕ್ಷಣೆ ನಮ್ಮ ಮನೆಯಿಂದಲೇ ಆರಂಭವಾಗಬೇಕಿದೆ ಎಂದರು.
ಶುಲ್ಕ ಏರಿಕೆಗೆ ವಿರೋಧ
ಸಾಹಿತ್ಯ ಪರಿಷತ್ ತನ್ನ ಸದಸ್ಯ ಶುಲ್ಕವನ್ನು ಏರಿಸಿ ಅದರ ನೆರಳಿಗೂ ಜನ ಬಾರದಂತೆ ದೂರವಿಡುವ ಬದಲು ಸಾಂಕೇತಿಕ ಶುಲ್ಕ ಪಡೆದು ಹೆಚ್ಚು ಮಂದಿ ಸಾಹಿತ್ಯ ಪ್ರೇಮಿಗಳನ್ನು ಒಂದುಗೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಪರಿಷತ್ ಶುಲ್ಕವನ್ನು 500 ರೂ.ಗೆ ಏರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಸರಕಾರವು ಪ್ರತಿಯೊಬ್ಬ ಪ್ರಕಾಶಕರಿಂದ 1 ಲಕ್ಷ ರೂ.ಮೌಲ್ಯದ ಗ್ರಂಥಗಳನ್ನು ಖರೀದಿಸುತ್ತಿದ್ದು, ಪ್ರತಿಗಳ ಸಂಖ್ಯೆ 300 ದಾಟುವುದಿಲ್ಲ. ಗ್ರಂಥಾಲಯಕ್ಕೆ ಪುಸ್ತಕ ಖರೀದಿ ಪ್ರಕ್ರಿಯೆ 3 ವರ್ಷಗಳ ಬಳಿಕ ನಡೆಯುತ್ತದೆ. ಹೀಗಾಗಿ ಪ್ರಕಾಶಕರೂ ಸರಕಾರದ ಅನುದಾನಕ್ಕಾಗಿ ಕಾಯುತ್ತಾರೆ. ಹೀಗಾಗಿ ಉತ್ತಮ ಪುಸ್ತಕಗಳ ಓದಿನಿಂದ ಸಾಹಿತ್ಯಾಭಿಮಾನಿಗಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಆಯಾಯ ವರ್ಷ ಎಲ್ಲರಿಗೂ ಪುಸ್ತಕ ಸಿಗುವಂತ ಕಾರ್ಯ ಮಾಡಬೇಕಿದೆ ಎಂದು ಪ.ರಾ.ಶಾಸ್ತ್ರಿ ಅವರು ವಿವರಿಸಿದರು.
ಉಪನ್ಯಾಸ ಗೋಷ್ಠಿಗಳು
ಸಮ್ಮೇಳನದ ಉದ್ಘಾಟನೆಯ ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ರೋಹಿಣಾಕ್ಷ ಶಿರ್ಲಾಲು ಅವರು ಗಾಂಧಿ ನಮನ, ವಿದ್ಯಾರ್ಥಿಗಳಾದ ಸಫಾನ ಹಾಗೂ ಶೃಂಗಾರ ಅವರು ಸಾಹಿತ್ಯ ಪ್ರೇರಣೆ, ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕವಿ ಕಂಡ ಗೊಮ್ಮಟೇಶ್ವರ, ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಅವರು ಯಕ್ಷಗಾನ ಮತ್ತು ಹಾಸ್ಯ ಸಂದರ್ಭಗಳು, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅವರು ಯಕ್ಷಗಾನ-ಅಭಿವ್ಯಕ್ತಿ-ವಿಧಾನ, ಕೆಮ್ಮಟೆ ಸರಕಾರಿ ಶಾಲಾ ಶಿಕ್ಷಕಿ ವಸಂತಿ ಟಿ. ನಿಡ್ಲೆ ಅವರು ಮಕ್ಕಳ ಸಾಹಿತ್ಯ ಎಂಬ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. ಪ್ರೊ| ಮಧೂರು ಮೋಹನ ಕಲ್ಲೂರಾಯ ಮತ್ತು ಜಯರಾಮ ಕುದ್ರೆತ್ತಾಯ ಅವರು ಹಳೆಗನ್ನಡ ಕಾವ್ಯ ವಿಶೇಷ: ಗಾಯನ ಮತ್ತು ಪ್ರಸ್ತುತಿ ನಡೆಸಿಕೊಟ್ಟರು.
ಅಜಿಲ ಸೀಮೆ
ಸಾಹಿತ್ಯ, ಸಂಸ್ಕೃತಿಗೆ ಅಜಿಲ ಸೀಮೆಯ ಕೊಡುಗೆ ಅನನ್ಯವಾಗಿದೆ. ಇಂದು ಯಕ್ಷಗಾನದಿಂದಾಗಿ ಕನ್ನಡ ಭಾಷೆ ಕಲಬೆರಕೆಯಾಗದೆ ಶುದ್ಧವಾಗಿ ಉಳಿದುಕೊಂಡಿದೆ. ಹಿಂದಿನ ಸಾಹಿತಿ ಗಳಿಗೆ ಹೋಲಿಸಿದರೆ ಗಾಢವಾಗಿ ಪ್ರಭಾವ ಬೀರಬಲ್ಲ ಸಾಹಿತ್ಯ ರಚನೆಯ ಜವಾಬ್ದಾರಿಯನ್ನು ಸಾಹಿತಿಗಳು ನಿರ್ವಹಿಸುತ್ತಿಲ್ಲವೇ ಎಂಬ ಪ್ರಶ್ನೆಯೂ ಸಾಹಿತ್ಯಾಭಿಮಾನಿಗಳನ್ನು ಕಾಡುತ್ತಿದೆ.
ಪ. ರಾಮಕೃಷ್ಣ ಶಾಸ್ತ್ರಿ
ಸಮ್ಮೇಳನದ ಸರ್ವಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.