Belthangady: ಬಾವಿಗೆ ಬಿದ್ದು ಮಹಿಳೆ ಸಾವು
Team Udayavani, Oct 14, 2024, 11:00 PM IST
ಬೆಳ್ತಂಗಡಿ: ಆರಂಬೊಡಿ ಗ್ರಾಮದ ಪಿಲಿಕಜೆ ಎನ್ನುವಲ್ಲಿ ಮಹಿಳೆಯೋರ್ವರು ಮನೆಯ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅ. 14ರಂದು ಸಂಭವಿಸಿದೆ.
ಆರಂಬೊಡಿ ಗ್ರಾಮದ ಪಿಲಿಕಜೆ ಮನೆ ನಿವಾಸಿ ಮಮತಾ (45) ಮೃತ ಮಹಿಳೆ. ಈಕೆಯ ಪತಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧೀನತೆ ಕಳೆದುಕೊಂಡು ಮನೆಯಲ್ಲೇ ಇದ್ದರು. ಆ ಬಳಿಕ ಮೃತ ಮಮತಾ ಅವರು ಮಾನಸಿಕ ಖನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಇದ್ದರು ಎನ್ನಲಾಗಿದೆ.
ಅ. 13ರಂದು ಬೆಳಗಿನ ಉಪಹಾರದ ಬಳಿಕ ಸುಮಾರು 9.30 ಗಂಟೆಗೆ ಮಮತಾ ಅವರು ಮನೆಯಿಂದ ಕಾಣೆಯಾದವರನ್ನು ಅವರ ಮಕ್ಕಳು ಹಾಗೂ ನೆರೆ-ಹೊರೆಯವರು ಹುಡುಕಾಡಿದಾಗ ಆದಿನ ರಾತ್ರಿಯಾದರೂ ಪತ್ತೆಯಾಗದೆ ಇದ್ದು ಅ. 14 ರಂದು ಬೆಳಗ್ಗೆ 11 ಗಂಟೆಗೆ ಹುಡುಕಾಡಿದಾಗ ಮಮತಾ ಅವರ ಮೃತದೇಹವು ಮನೆಯ ಅಂಗಳದಲ್ಲಿ ಇರುವ ಬಾವಿಯಲ್ಲಿ ಪತ್ತೆಯಾಗಿದೆ. ಪುತ್ರ ಶ್ರೀಕಾಂತ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.