ದಲ್ಲಾಳಿಗಳ ಹಾವಳಿಯಿಂದ ಫಲಾನುಭವಿಗಳು ಅತಂತ್ರ: ಬಂಗೇರ
ಬೆಳ್ತಂಗಡಿ ಮಿನಿ ವಿಧಾನಸೌಧ: ವಿವಿಧ ಬೇಡಿಕೆ ಮುಂದಿಟ್ಟು ಕಾಂಗ್ರೆಸ್ ನಿಯೋಗದಿಂದ ಸಹಾಯಕ ಕಮಿಷನರ್ ಭೇಟಿ
Team Udayavani, Sep 16, 2020, 8:29 AM IST
ಬೆಳ್ತಂಗಡಿ ಕಾಂಗ್ರೆಸ್ ನಿಯೋಗದಿಂದ ಸಹಾಯಕ ಕಮಿಷನರ್ ಅವಿರಿಗೆ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿಯಿಂದ ಫಲಾನುಭವಿಗಳು ಸೂಕ್ತ ಸಮಯ ದಲ್ಲಿ ಸರಕಾರದ ಯೋಜನೆಗಳನ್ನು ಪಡೆಯಲಾಗದೆ ಅತಂತ್ರರಾಗಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅವರನ್ನು ತತ್‌ಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆಗ್ರಹಿಸಿದರು.
ಬೆಳ್ತಂಗಡಿ ತಾ| ಕಚೇರಿಯಲ್ಲಿ ಸಾರ್ವ ಜನಿಕರಿಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಹಾಗೂ ವಿವಿಧ ಬೇಡಿಕೆ ಮುಂದಿಟ್ಟು ಸೆ. 15ರಂದು ಮಿನಿ ವಿಧಾನಸೌಧದಲ್ಲಿ ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ಅವರಿಗೆ ಮನವಿ ಸಲ್ಲಿಸಿ, ಬಳಿಕ ಮಾತನಾಡಿದರು. ತಾ|ನಲ್ಲಿ 94ಸಿ ಯೋಜನೆಯಡಿ ತಯಾರಾದ ಸುಮಾರು ಒಂದು ಸಾವಿರ ಹಕ್ಕುಪತ್ರಗಳನ್ನು ಅರ್ಹ ಫಲಾನುಭವಿ ಗಳಿಗೆ ವಿತರಿಸದೆ ಬಡವರು ಕಚೇರಿಗೆ ಅಲೆದಾಡುವಂತಾಗಿದೆ. ಈಗಾಗಲೇ ಸ್ಥಳ ತನಿಖೆ ಆದ ನಿವೇಶನಗಳ ಬಗ್ಗೆ ತಹಶೀಲ್ದಾರರು ಮರು ತನಿಖೆ ಆಗಬೇಕು ಎಂದು ಹೇಳುತ್ತಿದ್ದು, ಇದನ್ನು ತತ್‌ಕ್ಷಣ ನಿಲ್ಲಿಸಿ ಅಂಥವರಿಗೆ ಹಕ್ಕುಪತ್ರ ನೀಡಬೇಕು. ಆರ್. ಟಿ.ಸಿ., ಪಹಣಿ ಇತ್ಯಾದಿ ಕಡತಗಳ ಬಗ್ಗೆ ಶೀಘ್ರ ಆದೇಶ ನೀಡಿ ವಿಲೇವಾರಿ ಮಾಡುವಂತೆ ಆಗ್ರಹಿಸಿದರು.
ಸ್ಥಳದಲ್ಲೇ ಹಕ್ಕುಪತ್ರ ವಿತರಣೆ
ಗುಂಡೂರಿ ಗ್ರಾಮದ ವಿಮಲಾ, ಕೂಸಮ್ಮ ಅವರಿಗೆ ಸ್ಥಳದಲ್ಲೇ 94ಸಿ ಹಕ್ಕುಪತ್ರ ಕೊಡಿಸಿದ ಘಟನೆ ಸಂಭವಿಸಿತು. 2018ರಲ್ಲೇ 94ಸಿ ಯೋಜನೆಯಲ್ಲಿ ವಿಮಲಾ, ಕೂಸಮ್ಮ ಅವರಿಗೆ ಸ್ಥಳ ಮಂಜೂರಾಗಿ ಹಕ್ಕುಪತ್ರಕ್ಕೆ ತಹಶೀಲ್ದಾರ್ ಸಹಿಯಾಗಿತ್ತು. ಆದರೆ ತಾ| ಕಚೇರಿ ಸಿಬಂದಿ ನಿರ್ಲಕ್ಷ್ಯವೋ ರಾಜಕೀಯ ಒತ್ತಡದಿಂದಲೋ ಫಲಾನುಭವಿಗಳನ್ನು 2 ವರ್ಷ ಅಲೆದಾಡಿಸಲಾಗಿತ್ತು. ಈ ಕುರಿತು ಮಾಜಿ ಶಾಸಕ ವಸಂತ ಬಂಗೇರ ಅವರು ಸಹಾಯಕ ಕಮಿಷನರ್ ಗಮನಕ್ಕೆ ತಂದಾಗ, ಸ್ಥಳದಲ್ಲೇ ಹಕ್ಕುಪತ್ರ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.