Helmet ಧರಿಸದೆ ಬಂದ ಬೈಕ್ ಸವಾರ; ಬೈಕ್‌ಗೆ ಲಾಕ್ ಹಾಕಿದ ಟ್ರಾಫಿಕ್ ಪೊಲೀಸರು
Team Udayavani, Jan 14, 2024, 12:32 AM IST
ಬಂಟ್ವಾಳ: ಸವಾರನೋರ್ವ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದಾಗ ನಿಲ್ಲಿಸಲು ಸಂಚಾರ ಪೊಲೀಸರು ಹೇಳಿದರೂ ನಿಲ್ಲಿಸಿಲ್ಲ ಎಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಬೈಕ್‌ಗೆ ಲಾಕ್ ಹಾಕಿದ ಘಟನೆ ಬಂಟ್ವಾಳದಲ್ಲಿ ಶನಿವಾರ ಸಂಭವಿಸಿದೆ.
ಬಂಟ್ವಾಳ ಟ್ರಾಫಿಕ್ ಎಎಸ್‌ಐ ಜನಾರ್ದನ ಹಾಗೂ ಟ್ರಾಫಿಕ್ ಸಿಬಂದಿ ಮೆಕ್ಯಾನಿಕ್ ಭಾಸ್ಕರ ಅವರ ಬೈಕ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಅವರು ರಿಪೇರಿಗೆ ಬಂದಿದ್ದ ಬೈಕನ್ನು ಟೆಸ್ಟ್ ರೈಡ್ ಮಾಡುತ್ತಿದ್ದರು. ಆ ಬಳಿಕ ತಾ.ಪಂ.ಬಳಿ ಇದ್ದ ಬೈಕ್‌ನ ಚಕ್ರಕ್ಕೆ ಪೊಲೀಸರು ಲಾಕ್ ಹಾಕಿದ್ದರು. ಪೊಲೀಸರ ಈ ಕ್ರಮವನ್ನು ಸಾರ್ವಜನಿಕರು ಪ್ರಶ್ನಿಸಿದಗ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಸಾಕಷ್ಟು ಹೊತ್ತು ವಾಗ್ವಾದ ನಡೆದು ಬೈಕಿನ ಲಾಕ್ ತೆಗೆದ ಬಳಿಕ ಪರಿಸ್ಥಿತಿ ತಣ್ಣಗಾಯಿತು. ನೀವು ಸಣ್ಣ ವಾಹನಗಳನ್ನು ಹಿಂಬಾಲಿಸಿಕೊಂಡು ಬರುತ್ತೀರಿ, ಆದರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಪ್ರಭಾವಿಗಳ ವಾಹನಗಳನ್ನು ಏನೂ ಮಾಡುವುದಿಲ್ಲ, ಬಿ.ಸಿ.ರೋಡು ಬಸ್ ನಿಲ್ದಾಣದಲ್ಲಿ ಹಲವು ದಿನಗಳಿಂದ ಕಳ್ಳತನ ನಡೆಯುತ್ತಿದ್ದರೂ, ಅವರ ಪತ್ತೆಗೆ ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.