ಹಲವು ನಿರೀಕ್ಷೆಯಲ್ಲಿ ಗಡಿಭಾಗದ ಜನರು
ಸುಳ್ಯಪದವು: ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
Team Udayavani, Apr 16, 2022, 9:20 AM IST
ಸುಳ್ಯಪದವು: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಎ. 16ರಂದು ಕರ್ನಾಟಕ ಕೇರಳ ಗಡಿ ಭಾಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಎ. 15ರಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ರಮೇಶ್ ಬಾಬು, ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಇವರ ಜತೆಗೆ ಸ್ಥಳೀಯ ಬಡಗನ್ನೂರು ಗ್ರಾ.ಪಂ. ಕೈಜೋಡಿಸಿದೆ.
ವಿವಿಧ ಇಲಾಖೆಗಳು ಸ್ಟಾಲ್‌ಗಳನ್ನು ತೆರೆದು ಜನರಿಗೆ ಮಾಹಿತಿ ಜತೆ ಪ್ರಾತ್ಯಕ್ಷಿಕೆ ನೀಡಲಿವೆ. ಅಂದು ಡಿಸಿ ಸಂಜೆ ಎಸ್‌ಟಿ, ಎಸ್‌ಸಿ ಮನೆಗಳಿಗೆ, ಅಂಗನ ವಾಡಿ ಕೇಂದ್ರ, ಧಾರ್ಮಿಕ ಕೇಂದ್ರ, ಎಂಡೋ ಪೀಡಿತರ ಮನೆಗಳಿಗೆ ಭೇಟಿ ನೀಡಿ ಗ್ರಾಮದ ಹಿರಿಯರೊಂದಿಗೆ ಗ್ರಾಮ ಚಾವಡಿ ನಡೆಸಲಿದ್ದಾರೆ. ರಾತ್ರಿ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೊಂದಲಿದ್ದಾರೆ.
ಜಿಲ್ಲಾಧಿಕಾರಿಯ ಜತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದು ಸಮಸ್ಯೆಗಳು ಸ್ಥಳದಲ್ಲಿ ಇತ್ಯರ್ಥವಾಗುವ ನಂಬಿಕೆ ಜನರಲ್ಲಿದೆ.
ಮುನ್ನಲೆಗೆ ಎಂಡೋಸಲ್ಫಾನ್ ವಿಚಾರ
ಕರ್ನಾಟಕ ಕೇರಳ ಗಡಿಭಾಗವಾದ ಮಿಂಚಿಪದವು ಎಂಬಲ್ಲಿ ಗೇರು ನಿಗಮ ದವರು ಬಾವಿಗೆ ಎಂಡೋಸಲ್ಫಾನ್ ಸುರಿದಿದ್ದಾರೆ ಎಂಬ ಮಾತು ಅಂದಿನಿಂದ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಅದು ಡಿಸಿ ಗ್ರಾಮವಾಸ್ತವ್ಯದ ವೇಳೆ ಮುನ್ನಲೆಗೆ ಬರುವ ಸಾಧ್ಯತೆ ಅಧಿಕವಾಗಿದೆ. ಜಿಲ್ಲಾಧಿಕಾರಿ ಮಿಂಚಿಪದವುಗೆ ತಂಡ ದೊಂದಿಗೆ 2021ನೇ ಜೂನ್‌ಲ್ಲಿ ಭೇಟಿ ನೀಡಿ ಅದರ ತೆರವಿಗೆ ಕಾಸರಗೋಡು ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಈ ವರೆಗೆ ಏನೂ ಆಗದೆ ಇರುವುದು ಸಂಶಯಗಳಿಗೆ ಕಾರಣವಾಗಿದೆ.
ಇಲ್ಲಿ ಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಇದು ಆಗಿರುವುದರಿಂದ ಸಮಸ್ಯೆ ಗಳನ್ನು ಮಂಡಿಸಲು ಸಾರ್ವ ಜನಿಕರು ತುದಿಗಾಲಲ್ಲಿ ನಿಂತಿದ್ದಾರೆ. ಗಡಿ ಭಾಗದ ಸುಳ್ಯಪದವು ಶ್ರೀ ಬಾಲ ಸುಬ್ರಹ್ಮಣ್ಯ ಅನುದಾನಿತ ಶಾಲೆ ಸುಸಜ್ಜಿತವಾಗಿ ಇದ್ದರೂ ಶೂನ್ಯ ಅಧ್ಯಾಪಕರನ್ನು ಹೊಂದಿದೆ.
ಈ ಭಾಗ ಗಡಿ ಪ್ರದೇಶ ವಾಗಿರುವುದರಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಎಸ್‌ಸಿ, ಎಸ್‌ಟಿ ಜಾತಿ ಸರ್ಟಿಫಿಕೇಟ್ ಸಮಸ್ಯೆ, ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸಲು ಸಾರಿಗೆ ವ್ಯವಸ್ಥೆ, ಕೇರಳ ಮತ್ತು ಕರ್ನಾಟಕ ರಸ್ತೆಗಳು ಮರು ಡಾಮರು ಕಾಮಗಾರಿ ಹೊಂದಿದ್ದರೂ ಗಡಿಭಾಗದ ಕಾಯರ್‌ಪದವು ಎಂಬಲ್ಲಿ ಸರಿಯಾದ ಸೇತುವೆ ನಿರ್ಮಾಣ ಆಗಬೇಕಾಗಿದೆ. ಮೊಬೈಲ್ ಟವರ್ ಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೃಷಿಕರ ತೋಟಗಳಿಗೆ ಕಾಡುಕೋಣ, ಹಂದಿ, ಮಂಗಗಳು ನಿರಂತರ ದಾಳಿ ನಡೆಸುತ್ತಿದ್ದು ಕೃಷಿ ನಾಶವಾಗುತ್ತಿದೆ ಇದರ ಬಗ್ಗೆ ಗಮನಹರಿಸಬೇಕಾಗಿದೆ. ಕೃಷಿಕರು ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಜಿ ಹಾಕಿ ಕೆವೈಸಿ ಪುನಃ ಮಾಡಿದರೂ ಹಣ ಬಂದಿಲ್ಲ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.