ಕಮಿಲ-ಮೊಗ್ರ ಸೇತುವೆ: ಹೊಂಡ, ಕುಸಿತ
Team Udayavani, Aug 2, 2018, 12:59 PM IST
ಸುಬ್ರಹ್ಮಣ್ಯ: ಕಮಿಲ ಮೊಗ್ರ ರಸ್ತೆಯ ಸೇತುವೆಯಲ್ಲಿ ಹೊಂಡ ಬಿದ್ದಿದ್ದು ಸಂಪರ್ಕ ಕುಸಿತದ ಭೀತಿ ಇದೆ. ಗುತ್ತಿಗಾರು ಗ್ರಾಮದ ಕಮಿಲ- ಮೊಗ್ರ-ಏರಣಗುಡ್ಡೆ ರಸ್ತೆ ಹದಗೆಟ್ಟಿದೆ. ಈ ರಸ್ತೆಯಲ್ಲಿ ಇರುವ ಸೇತುವೆ ಅನೇಕ ವರ್ಷಗಳಿಂದ ಶಿಥಿಲವಾಗಿದೆ. ಇದು ದುರಸ್ತಿಯಾಗಬೇಕು ಎಂಬ ಒತ್ತಾಯವಿದ್ದರೂ ರಿಪೇರಿಯಾಗೇ ಇಲ್ಲ. ಈ ಸೇತುವೆ ಮಳೆಯ ಕಾರಣದಿಂದ ಎರಡು ಕಡೆ ಕುಸಿತವಾಗಿದೆ. ಇದೇ ರಸ್ತೆಯಲ್ಲಿ ಇರುವ ಇನ್ನೊಂದು ಸೇತುವೆಯೂ ಕುಸಿದಿದ್ದು, ತಾತ್ಕಾಲಿ ದುರಸ್ತಿಗೊಂಡಿದೆ.
ನಿರ್ಮಾಣವಾದ ವರ್ಷವೇ ಕುಸಿತ
ಕಮಿಲ -ಏರಣಗುಡ್ಡೆ ರಸ್ತೆಯಲ್ಲಿ 10 ವರ್ಷ ಗಳ ಹಿಂದೆ ನಿರ್ಮಾಣವಾದ ಸೇತುವೆ ವರ್ಷದಲ್ಲೇ ಕುಸಿತವಾಗಿತ್ತು. ಕೇಂದ್ರ ಸರಕಾರದ ವಿಶೇಷ ಯೋಜನೆಯ ಅನ್ವಯ ಸಾರ್ವಜನಿಕರ ಸಹಭಾಗಿತ್ವದಲ್ಲಿ, ಆರ್ಥಿಕ ಸಹಕಾರದಲ್ಲಿ ಇಲ್ಲಿ ಸೇತುವೆ ನಿರ್ಮಾಣವಾಗಿತ್ತು. ಆದರೆ ಕೆಲವೇ ಸಮಯದಲ್ಲಿ ಕುಸಿತವೂ ಉಂಟಾಗಿತ್ತು. ಹೀಗೆ, ಸೇತುವೆ ಕುಸಿದು 9 ವರ್ಷ ಕಳೆದರೂ ಸಂಪೂರ್ಣ ದುರಸ್ತಿಯಾಗಿಲ್ಲ.
ಮರಳು ತುಂಬಿರುವ ಸೇತುವೆಯ ಮೇಲೆಯೇ ವಾಹನ ಓಡಾಟ ನಡೆಯುತ್ತಿದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಜನತೆ ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಇದೀಗ ಮತ್ತೆ ಕುಸಿತವಾಗಿದ್ದು, ಸಾರ್ವಜನಿಕರ ಸಂಚಾರ ಆತಂಕದಲ್ಲಿದೆ. ಏರಣಗುಡ್ಡೆ ಪ್ರದೇಶದಲ್ಲಿ ಬಹುಪಾಲು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಬಡವರೇ ಇದ್ದಾರೆ. ಈ ಸೇತುವೆ ಕುಸಿತವಾದರೆ ಸಂಕಷ್ಟ ಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ತತ್ ಕ್ಷಣವೇ ಸ್ಪಂದಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.