ಬಡಕೊಟ್ಟು ಕುಟುಂಬಗಳ ಮನೆ ಬಹುತೇಕ ಪೂರ್ಣ
Team Udayavani, Sep 8, 2021, 3:10 AM IST
ಬೆಳ್ತಂಗಡಿ: ಉಜಿರೆ ಗ್ರಾಮದ ಬಡಕೊಟ್ಟು ಎಂಬಲ್ಲಿರುವ ಮೂಲ ನಿವಾಸಿ ಕೊರಗ ಕುಟುಂಬಗಳಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 11 ಮನೆಗಳು ಬಹುತೇಕ ಪೂರ್ಣಗೊಂಡಿದೆ.
ಕಳೆದ ವರ್ಷ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪ್ರತೀ ಮನೆಗೆ 3.50 ಲಕ್ಷ ರೂ. ಘಟಕ ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿತ್ತು. ಹೀಗಾಗಿ 2020 ಮಾರ್ಚ್ ಅವಧಿಯಲ್ಲಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಕಾಂಕ್ರೀಟ್ ಮೇಚ್ಛಾವಣಿ ಹಂತದವರೆಗೆ ಪೂರ್ಣಗೊಂಡಿದೆ.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಾಲೂಕಿಗೆ ಪ್ರಸಕ್ತ ವರ್ಷ 15 ಮನೆಗಳು ಮಂಜೂರಾಗಿದ್ದು, ಅವುಗಳ ಪೈಕಿ 11 ಮನೆಗಳು ಬಡಕೊಟ್ಟು ಕುಟುಂಬಗಳಿಗೆ ನೀಡಲಾಗಿದೆ.
ಮಳೆಗಾಲದ ಮುನ್ನ ಕಾಮಗಾರಿ ಪೂರ್ಣ ಗೊಳಿಸುವ ಉದ್ದೇಶ ಹೊಂದಲಾಗಿತ್ತು. ಇದೀಗ ಎಲ್ಲ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.
ಪ್ರತೀ ಮನೆಗೆ 3.50 ಲಕ್ಷ ರೂ. ಘಟಕ ಯೋಜನೆ ವೆಚ್ಚ ನೇರವಾಗಿ ಫಲಾನುಭವಿಗಳ ಕೈಸೇರಿದ್ದು, ಶಾಸಕರು ತಲಾ 1 ಲಕ್ಷ ರೂ.ನಂತೆ ವೈಯಕ್ತಿಕ ಅನುದಾನ ಒದಗಿಸಿ 400 ಚದರಡಿ ಮನೆ ನಿರ್ಮಾಣವಾಗಿದೆ.
ಫಲಾನುಭವಿಗಳಾದ ಅಕ್ಕು, ಚೋಮು, ಪ್ರೇಮಾ, ಲಲಿತಾ, ಮೇರಿ, ಚಂದ್ರಾವತಿ, ಮೀನಾಕ್ಷಿ, ರೀತಾ, ವನಿತಾ, ಸಾವಿತ್ರಿ, ಅಂಗಾರೆ ಸೇರಿ 11 ಮಂದಿಗೆ ಮನೆ ಪೂರ್ಣಗೊಂಡಿದೆ.
ಬಡೆಕೊಟ್ಟು ಕೊರಗ ಕುಟುಂಬದ 11 ಮನೆಗಳು ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೇಲ್ಛಾವಣಿ ಪೂರ್ಣಗೊಂಡಿದ್ದು, ಸಾರಣೆ ಹಂತದಲ್ಲಿದೆ. ವಯರಿಂಗ್, ಬಣ್ಣಬಳಿದು ಉದ್ಘಾಟನೆಗೆ ದಿನ ನಿಗದಿಪಡಿಸಲಾಗುವುದು. –ಹೇಮಚಂದ್ರ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.