ಕಟ್ಟಡ ಪುನಶ್ಚೇತನ: ಶೀಘ್ರ ಮಹಿಳಾ ಠಾಣೆ ಸ್ಥಳಾಂತರ
Team Udayavani, May 11, 2019, 9:04 AM IST
ಪಾರಂಪರಿಕ ಶೈಲಿಯಲ್ಲಿ ಪುನಶ್ಚೇತನಗೊಂಡಿರುವ ಪೊಲೀಸ್ ಠಾಣೆ ಕಟ್ಟಡ
ನಗರ: ಸ್ವಾತಂತ್ರ್ಯ ಪೂರ್ವದಲ್ಲಿ ಪುತ್ತೂರಿನಲ್ಲಿ ರಸ್ತೆ ಬದಿ ನಿರ್ಮಾಣವಾದ ಹಳೆಯ ಪೊಲೀಸ್ ಠಾಣೆ ಕಟ್ಟಡ ಪಾರಂಪರಿಕ ಶೈಲಿಯಲ್ಲೇ ಪುನಶ್ಚೇತನಗೊಂಡು ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಮಹಿಳಾ ಪೊಲೀಸ್ ಠಾಣೆ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ.
ನಗರದ ಮುಖ್ಯ ರಸ್ತೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯ ಪಕ್ಕದಲ್ಲೇ ಇರುವ ಈ ಹಳೆಯ ಕಟ್ಟಡ ಪೊಲೀಸ್ ಠಾಣೆಯಾಗಿ ಹಲವು ದಶಕಗಳಿಂದ ಕಾರ್ಯ ನಿರ್ವಹಿಸಿದೆ. ಕೆಲವು ವರ್ಷಗಳ ಬಿಡುವಿನ ಬಳಿಕ ಮತ್ತೆ ಮಹಿಳಾ ಠಾಣೆಯ ಸೇವೆಗೆ ಒದಗುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಪುತ್ತೂರು ತಾಲೂಕು ಕೇಂದ್ರವಾಗಿದ್ದು, ಬ್ರಿಟಿಷ್ ಸರಕಾರದ ಕೋರ್ಟ್, ಪೊಲೀಸ್ ಕೆಲಸ ಮಾಡುತ್ತಿದ್ದ ಪ್ರದೇಶವಿದು. ಸ್ವಾತಂತ್ರ್ಯಾ ಅನಂತರ ಮದ್ರಾಸ್ ಪ್ರಾಂತ ಸರಕಾರದ ಪೊಲೀಸ್, ಅನಂತರ ಕರ್ನಾಟಕ ಸರಕಾರದ ಪೊಲೀಸ್ ಇಲ್ಲಿ ಕಾರ್ಯ ನಿರ್ವಹಿಸಿದ್ದರು. ಸ್ಟೇಷನ್ ಆಗಿ ಸೇವೆ ಸಲ್ಲಿಸಿದ ಹಳೆಯ ಕಟ್ಟಡ ಸುದೀರ್ಘ ಬಾಳ್ವಿಕೆ ಕಾಪಾಡಿಕೊಂಡಿದೆ.
ಠಾಣಾ ನಿರ್ವಹಣೆ
2009ರ ಡಿ. 25ರಂದು ಪುತ್ತೂರು ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು, ಬಳಿಕ ಹಳೆಯ ಕಟ್ಟಡ ಖಾಲಿ ಉಳಿದುಕೊಂಡಿತ್ತು. ಇದಾದ ಕೆಲವೇ ಸಮಯದಲ್ಲಿ ಪುತ್ತೂರಿಗೆ ಸಂಚಾರ ಪೊಲೀಸ್ ಠಾಣೆ ಮಂಜೂರಾ ದಾಗ ಅದನ್ನು ಹಳೆ ಕಟ್ಟಡದಲ್ಲಿ ಮುಂದುವರೆ ಸಲಾಯಿತು. 2015ರ ಸೆ. 7ರಂದು ಸಂಚಾರ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೊಂಡ ಕಾರಣ ಮತ್ತೆ ಹಳೆಯ ಕಟ್ಟಡ ಖಾಲಿ ಬಿತ್ತು. ಮೊದಲ ಆರು ತಿಂಗಳ ಕಾಲ ಟ್ರಾಫಿಕ್ ಠಾಣೆಯ ಕಡತಗಳು ಇದೇ ಕಟ್ಟಡದಲ್ಲಿದ್ದರೂ 2016ರ ಆರಂಭದಲ್ಲಿ ಸಂಪೂರ್ಣ ಸ್ಥಳಾಂತರಗೊಂಡಿತ್ತು.
2017ರ ಮಾ. 11 ರಂದು ಮಹಿಳಾ ಠಾಣೆ ಆರಂಭಗೊಂಡಾಗ ಇದೇ ಕಟ್ಟಡದಲ್ಲಿ ಕೆಲಸ ಮಾಡುವುದೆಂದು ನಿರ್ಧರಿಸಲಾಯಿತಾದರೂ ಕಟ್ಟಡ ನವೀಕರಣ ಅಗತ್ಯವಿರುವ ಕಾರಣ ಮುಂದೂಡಲಾಯಿತು. ಹೀಗಾಗಿ ಮಹಿಳಾ ಠಾಣೆಯಲ್ಲಿ ಸಂಚಾರ ಠಾಣೆಯ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಹಳೆಯ ಕಟ್ಟಡ ಪುನಶ್ಚೇತನಗೊಂಡ ಕಾರಣ ಮುಂದಿನ ಕೆಲವೇ ಸಮಯದಲ್ಲಿ ಮಹಿಳಾ ಠಾಣೆ ಈ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಳೆಯ ಕಟ್ಟಡ ನವೀಕರಣಕ್ಕೆ 2018ರಲ್ಲಿ ರಾಜ್ಯ ಸರಕಾರ 19.20 ಲಕ್ಷ ರೂ. ಮಂಜೂರು ಮಾಡಿತ್ತು. ಎನ್‌ಐಟಿಕೆಯ ನಿರ್ಮಿತಿ ಕೇಂದ್ರದವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. 2018ರ ಜೂನ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಕೆಲಸ ನಿಧಾನವಾಗಿ ನಡೆದರೂ ಅಂತಿಮವಾಗಿ ಸುಂದರ ಕಟ್ಟಡ ಮೂಡಿದೆ. ಹಳೆ ಕಟ್ಟಡ ಹೆಂಚಿನ ಮಾಡು ಹೊಂದಿದ್ದು, ಪುನಶ್ಚೇತನ ಸಂದರ್ಭಧಲ್ಲೂ ಹೊಸದಾಗಿ ಹೆಂಚಿನ ಮಾಡನ್ನೇ ನಿರ್ಮಿಸಲಾಗಿದೆ. ಹಳೆಯ ಗೋಡೆಯನ್ನು ಕೊಂಚ ಏರಿಸಿ, ಕೆಂಪು ಕಲ್ಲಿನ ಪಟ್ಟಿ ಕೂರಿಸಿ ಆಕರ್ಷಕಗೊಳಿಸಲಾಗಿದೆ. ಪ್ರಸ್ತುತ ಅಂತಿಮ ಸ್ಪರ್ಷದ ಕೆಲಸ ನಡೆಯುತ್ತಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ, ಮಹಿಳಾ ಠಾಣೆಯು ಪುನಶ್ಚೇತನಗೊಂಡ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾರಂಪರಿಕ ಪುನಶ್ಚೇತನ

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.