ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿದ ಬಸ್ ಚಾಲಕ!
Team Udayavani, Aug 9, 2018, 12:53 PM IST
ಆಲಂಕಾರು: ಕಡಬ ಸಮೀಪದ ಹೊಸ್ಮಠ ಮುಳುಗು ಸೇತುವೆ ಮುಳುಗ ಡೆಯಾಗಿದೆ ಎಂಬ ನೆಪ ಹೇಳಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಶಾಲಾ ವಿದ್ಯಾ ರ್ಥಿಗಳು ಹಾಗೂ ಪ್ರಯಾಣಿಕರನ್ನು ಆಲಂಕಾರು ಪೇಟೆಯಲ್ಲಿ ಇಳಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಪುತ್ತೂರು- ಶಾಂತಿಮೊಗರು- ಕಡಬ ಮಧ್ಯೆ ಸಂಚರಿಸುವ ಬಸ್ ಸಂಜೆ 4.30ಕ್ಕೆ ಕಡಬಕ್ಕೆ ತೆರಳಿತ್ತು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು, 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಹೊಸ್ಮಠ ಸೇತುವೆ ಮುಳುಗಿದ ಮಾಹಿತಿ ನೀಡದೆ ಕಡಬಕ್ಕೆ ಟಿಕೆಟ್ ನೀಡಿದ್ದರು. ಬಸ್ ಆಲಂಕಾರು ಪೇಟೆಗೆ ತಲುಪಿದಾಗ ಪ್ರಯಾಣಿಕರನ್ನು ಇಳಿಸಿ, ಪುತ್ತೂರಿಗೆ ಮರಳಿದ್ದರು.
ದುಬಾರಿ ಬಾಡಿಗೆ
ವಿಪರೀತ ಮಳೆ ಕಾರಣ ರಸ್ತೆ ಬದಿಯಲ್ಲೂ ನಿಲ್ಲಲಾಗದೆ ಹಲವು ಪ್ರಯಾಣಿಕರು ಖಾಸಗಿ ವಾಹನಗಳಿಗೆ ದುಬಾರಿ ಬಾಡಿಗೆ ನೀಡಿ ತೆರಳಿದರು. ಸಂಜೆ 6.30ರ ವರೆಗೂ ವಿದ್ಯಾರ್ಥಿಗಳು ಬದಲಿ ವಾಹನಕ್ಕಾಗಿ ಕಾಯುತ್ತಿದ್ದರು. ಕೊನೆಗೂ 6.35ರ ವೇಳೆಗೆ ಉಪ್ಪಿನಂಗಡಿಯಿಂದ ಬಸ್ ಬಂತು.
ಮನವಿಗೂ ಸ್ಪಂದನೆ ಇಲ್ಲ
ಹೊಸ್ಮಠ ಬ್ಲಾಕ್ ಆದರೂ ಪರವಾಗಿಲ್ಲ. ಸೇತುವೆ ತನಕ ನಮ್ಮನ್ನು ಬಿಡಿ. ಆಮೇಲೆ ನಡೆದು ಹೋಗುತ್ತೇವೆ ಎಂದು ಚಾಲಕನ ಬಳಿ ಅಂಗಲಾಚಿದರೂ ಒಪ್ಪಲಿಲ್ಲ. ಬೇರೆ ಯಾವುದಾದರೂ ವಾಹನದಲ್ಲಿ ಹೋಗಿ ಎಂದು ಬಲವಂತವಾಗಿ ಆಲಂಕಾರಿನಲ್ಲೇ ಇಳಿಸಿ ಪುತ್ತೂರಿಗೆ ಮರಳಿದ್ದಾರೆ ಎಂದು ವಿದ್ಯಾರ್ಥಿ ಮಹಮ್ಮದ್ ಸಮೀರ್ ಅಳಲು ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ತೋಡಿಕೊಂಡರು.
ಚಾಲಕನ ವಿರುದ್ಧ ಕ್ರಮ
ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗಿರುವ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಗಮನಕ್ಕೂ ತಾರದೆ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸಿ ಹೋಗುವಂತಿಲ್ಲ. ಚಾಲಕ ಯಾವ ಕಾರಣಕ್ಕೆ ಹಾಗೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಈ ವಿಚಾರವಾಗಿ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ಸಾರಿಗೆ ನಿಯಂತ್ರಕ ವಸಂತ್ ಅಗ್ತತಾಡಿ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.