ಬೆಳೆಗಾರರಿಗೆ ಬಲ ತುಂಬಿದ ಅಡಿಕೆ, ಕೊಕ್ಕೋ ಖರೀದಿ
Team Udayavani, Apr 28, 2020, 5:00 AM IST
ಪುತ್ತೂರು: ಕೋವಿಡ್ 19 ನಿಯಂತ್ರಣದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತ ವರ್ಗಕ್ಕೆ ಉಂಟಾಗಿರುವ ಆರ್ಥಿಕ ಸಮಸ್ಯೆಯನ್ನು ಪರಿಹರಿಸಲು ಕ್ಯಾಂಪ್ಕೋದಿಂದ ಜಿಲ್ಲೆಯ 9 ಕಡೆಗಳಲ್ಲಿ ಅಡಿಕೆ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಎ. 12ರಿಂದ ಆರಂಭಗೊಂಡ ಖರೀದಿ ಪ್ರಕ್ರಿಯೆಯಲ್ಲಿ ಒಟ್ಟು ಸುಮಾರು 1,410 ಕ್ವಿಂ. ಅಡಿಕೆ ಹಾಗೂ 1, 100 ಕ್ವಿಂ. ಕೊಕ್ಕೋ ಖರೀದಿ ಮಾಡಲಾಗಿದೆ.
ತಿಂಗಳಿಗೆ ಓರ್ವ ರೈತ 2 ಕ್ವಿಂ. ಅಥವಾ 50,000 ರೂ. ಮೌಲ್ಯದ ಅಡಿಕೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕ್ಯಾಂಪ್ಕೋ ಶಾಖೆ ಎರಡು ವಾರಗಳಿಂದ ವಾರದ ತಲಾ ಮೂರು ದಿನ ಖರೀದಿ ಪ್ರಕ್ರಿಯೆ ನಡೆಸಿವೆ.
1,410 ಕ್ವಿಂ.ಅಡಿಕೆ, 1,100 ಕ್ವಿಂ. ಕೊಕ್ಕೋ ಖರೀದಿ
ಜಿಲ್ಲೆಯ 9 ಕಡೆಗಳಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರಗಳಲ್ಲಿ ಎ. 13ರಿಂದ 24ರ ತನಕ ಒಟ್ಟು 1,410 ಕ್ವಿಂ. ಅಡಿಕೆ ಖರೀದಿ ಮಾಡಲಾಗಿದೆ. ಪುತ್ತೂರು ಖರೀದಿ ಕೇಂದ್ರದಲ್ಲಿ 200 ಕ್ವಿಂ. ಅಡಿಕೆ ಹಾಗೂ 240 ಕ್ವಿಂ. ಕೊಕ್ಕೋ, ಅಡ್ಯನಡ್ಕದಲ್ಲಿ 116 ಕ್ವಿಂ. ಅಡಿಕೆ ಮತ್ತು 128 ಕ್ವಿಂ. ಕೊಕ್ಕೋ, ವಿಟ್ಲದಲ್ಲಿ 70 ಕ್ವಿಂ. ಅಡಿಕೆ ಮತ್ತು 205 ಕ್ವಿಂ. ಕೊಕ್ಕೋ, ಕಡಬದಲ್ಲಿ 150 ಕ್ವಿಂ. ಅಡಿಕೆ ಮತ್ತು 89 ಕ್ವಿಂ. ಕೊಕ್ಕೋ, ಸುಳ್ಯದಲ್ಲಿ 150 ಕ್ವಿಂ. ಅಡಿಕೆ ಮತ್ತು 350 ಕ್ವಿಂ. ಕೊಕ್ಕೋ, ಆಲಂಕಾರಿನಲ್ಲಿ 146 ಕ್ವಿಂ. ಅಡಿಕೆ, ನಿಂತಿಕಲ್ಲುವಿನಲ್ಲಿ 150 ಕ್ವಿಂ. ಅಡಿಕೆ, ಉಪ್ಪಿನಂಗಡಿಯಲ್ಲಿ 100 ಕ್ವಿಂ. ಅಡಿಕೆ ಮತ್ತು 5 ಕ್ವಿಂ. ಕೊಕ್ಕೋ, ಬೆಳ್ತಂಗಡಿಯಲ್ಲಿ 148 ಕ್ವಿಂ. ಅಡಿಕೆ ಮತ್ತು 115 ಕ್ವಿಂ. ಕೊಕ್ಕೋ ಖರೀದಿ ಮಾಡಲಾಗಿದೆ.
ಮಾರಾಟ ಅವಧಿ ಹೆಚ್ಚಿಸಿ
ಅಡಿಕೆಗೆ ವಾರದಲ್ಲಿ ಕೇವಲ ಮೂರು ದಿನ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೊಕ್ಕೋ ಖರೀದಿಗೆ ವಾರದಲ್ಲಿ ಒಂದು ದಿನ ಮಾತ್ರ ನಿಗದಿ ಪಡಿಸಲಾಗಿದೆ. ಕೇವಲ 6 ದಿನಗಳ ವ್ಯಾಪಾರ ದಿನಗಳಲ್ಲಿ 9 ಕೇಂದ್ರಗಳಲ್ಲಿ 1,410 ಕ್ವಿಂ. ಅಡಿಕೆ ಮತ್ತು ಮೂರು ದಿನದಲ್ಲಿ 1,100 ಕ್ವಿಂ. ಕೊಕ್ಕೋ ಖರೀದಿ ಮಾಡಲಾಗಿದೆ. ಕೊಕ್ಕೋ ಖರೀದಿಗೆ ಹೆಚ್ಚು ದಿನಗಳ ಅವಕಾಶ ನೀಡಬೇಕು ಎನ್ನುವ ಬೇಡಿಕೆ ರೈತ ವರ್ಗದಿಂದ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.