ಮೇ 29: ಎರಡು ಗ್ರಾ.ಪಂ.ಗಳ ಮೂರು ಸ್ಥಾನಕ್ಕೆ ಉಪಚುನಾವಣೆ
ಉಜಿರೆ, ಕೊಯ್ಯೂರು ಗ್ರಾ.ಪಂ. ಕ್ಷೇತ್ರಗಳು
Team Udayavani, May 11, 2019, 9:33 AM IST
ಬೆಳ್ತಂಗಡಿ : ತಾಲೂಕಿನ ಉಜಿರೆ ಹಾಗೂ ಕೊಯ್ಯೂರು ಗ್ರಾ.ಪಂ.ಕ್ಷೇತ್ರಗಳಲ್ಲಿ ಕಾರಣಾಂತರಗಳಿಂದ ತೆರವಾದ ಸ್ಥಾನಕ್ಕೆ ಮೇ 29ರಂದು ಉಪಚುನಾವಣೆ ನಿಗದಿಯಾಗಿದೆ.
ಉಜಿರೆಯ ಎರಡು ಕ್ಷೇತ್ರಗಳಾದ ವಾರ್ಡ್ ನಂ. 4ರಲ್ಲಿ ಸದಸ್ಯೆ ಗೀತಾ ವೆಂಕಪ್ಪ ನಾಯ್ಕ ರಾಜೀನಾಮೆ ಹಾಗೂ ವಾರ್ಡ್ ನಂ. 11ರಲ್ಲಿ ಸದಸ್ಯ ವೆಂಕಪ್ಪ ನಾಯ್ಕ ನಿಧನದ ಹಿನ್ನೆಲೆ ಸ್ಥಾನ ತೆರವಾಗಿತ್ತು.
ಕೊಯ್ಯೂರು ಗ್ರಾ.ಪಂ.ನ ವಾರ್ಡ್ ನಂ. 2ರಲ್ಲಿ ಪರಿಶಿಷ್ಟ ಜಾತಿಯ ವಿಟuಲ ನಿಧನ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ ಮೇ 29ರಂದು ಪೂರ್ವಾಹ್ನ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಮೇ 29 ಮತದಾನ: ಮೇ 31ಎಣಿಕೆ
ಮೇ 13ರಿಂದ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 17ರಂದು ನಾಮ ಪತ್ರಗಳ ಪರಿಶೀಲನೆ ಕೈಗೊಳ್ಳಲಿದ್ದು, ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 29ರಂದು ಮತದಾನ ನಡೆಯಲಿದ್ದು, 31ರಂದು ಬೆಳಗ್ಗೆ 8ರಿಂದ ತಾ| ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಮೇ 13ರಂದು ಚುನಾವಣಾಧಿಕಾರಿಗಳಿಗೆ ಮತದಾರರ ಪಟ್ಟಿ ನೀಡಬೇಕಾಗಿದ್ದು, ಆದರೆ ಇನ್ನೂ ಮತದಾರರ ಪಟ್ಟಿ ಬಿಡುಗಡೆಯಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಮೇ 11 ಎರಡನೇ ಶನಿವಾರ, ಮೇ 12ರಂದು ರವಿವಾರ ರಜೆಯಾದ್ದರಿಂದ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಮತದಾರರ ಪಟ್ಟಿ ಇನ್ನೂ ಬೆಂಗಳೂರು ಚುನಾವಣಾಧಿಕಾರಿ ಕಚೇರಿಯಲ್ಲೇ ಉಳಿದಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಮೇ 13ರಿಂದ 31ರ ಮತ ಎಣಿಕೆ ಪ್ರಕ್ರಿಯೆ ಮುಗಿಯುವ ವರೆಗೆ ಗ್ರಾ.ಪಂ. ವ್ಯಾಪ್ತಿಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಹಿಂದೆ ವಾರ್ಡ್‌ಗೆ ಮಾತ್ರ ಸೀಮಿತವಾಗಿದ್ದ ನೀತಿಸಂಹಿತೆ ಈ ಬಾರಿ ಪೂರ್ತಿ ಗ್ರಾ.ಪಂ.ಗೆ ಅನ್ವಯವಾಗಿರುವುದು ವಿಶೇಷ.
ಉಜಿರೆ ಗ್ರಾಮ ಪಂಚಾಯತ್ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣ ಸಂಯೋಜಕ ಸುಭಾಶ್ ಜಾಧವ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಜಿರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಯಲ್ಲವ್ವ ಹಂಡಿ, ಕೊಯ್ಯೂರು ಗ್ರಾಮ ಪಂಚಾಯತ್ ಚುನಾವಣಾಧಿಕಾರಿಯಾಗಿ ಸುಧಾಕರ (ಪಿಡಿಒ ಪಡಂಗಡಿ) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ನಾರಾವಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಿರ್ಮಲ್ ಕುಮಾರ್ ನೇಮಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.