ಮಂದಿರ ರಕ್ಷಣೆಗೆ ಅಭಿಯಾನ: ಪೈ
Team Udayavani, Jul 18, 2019, 5:00 AM IST
ಬೆಳ್ತಂಗಡಿ: ಮಂದಿರಗಳ ಸರಕಾರೀಕರಣದಿಂದ ಆಗುವ ದುಷ್ಪರಿಣಾಮಗಳನ್ನು ಎದುರಿಸಲು ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರೀಯ ಮಂದಿರ ಸಂಸ್ಕೃತಿ ರಕ್ಷಣೆ ಅಭಿಯಾನ ಆರಂಭಿಸಿದೆ ಎಂದೂ ಹಿಂದೂ ಜನಜಾಗೃತಿ ಸಮಿತಿಯ ವಿವೇಕ ಪೈ ಹೇಳಿದರು.
ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಜಿರೆ ಹಳೆಪೇಟೆ ಸೀತಾರಾಮ ಕಲಾಮಂದಿರದಲ್ಲಿ ಮಂಗಳವಾರ ಜರಗಿದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಗುರುಕಾರ್ಯದ ಕಕ್ಷೆ
ಗುರುಗಳ ಸ್ಥೂಲ ದೇಹ ಅಂದರೆ ವ್ಯಷ್ಟಿ ರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ. ಗುರುಕಾರ್ಯದ ಕಕ್ಷೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಸಮಾಜ, ರಾಷ್ಟ್ರ ಹಾಗೂ ಧರ್ಮದ ಉತ್ಥಾನದ ತನಕ ವ್ಯಾಪಿಸಿ ರುತ್ತದೆ. ಧರ್ಮ ಸಂಸ್ಥಾಪನೆ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆ ಕಾರ್ಯವು ವ್ಯಕ್ತಿ, ಸಮಾಜ, ರಾಷ್ಟ್ರ ಹಾಗೂ ಧರ್ಮ ಇವೆಲ್ಲದರ ಉತ್ಕರ್ಷವನ್ನು ಸಾಧಿಸುವ ಹಾಗೂ ಕಾಲಾನುಸಾರ ಆವಶ್ಯಕ ಗುರುಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಸ್ವಕ್ಷಮತೆಯಂತೆ ತನು-ಮನ-ಧನದಿಂದ ಸಹಭಾಗಿಯಾಗುವುದೇ ಕಾಲಾನುಸಾರ ನಿಜವಾದ ಗುರುದಕ್ಷಿಣೆ ಎಂದರು.
ಸನಾತನ ಸಂಸ್ಥೆಯ ಸೌ. ರಾಧಿಕಾ ಪ್ರಭು ಮಾತನಾಡಿ, ಪರಾತ್ಪರ ಗುರು ಡಾ| ಜಯಂತ ಆಠವಲೆ ಅವರ ಗುಣಗಳ ಪರಿಚಯ ಮಾಡಿ, ಗುರುಗಳ ಕುರಿತು ಅಗಾಧ ಕೃತಜ್ಞತೆ ವ್ಯಕ್ತಪಡಿಸುವ ದಿನವೇ ಗುರು ಪೂರ್ಣಿಮೆ. ಪರಾತ್ಪರ ಗುರು ಪ.ಪೂ. ಡಾ| ಜಯಂತ ಆಠವಲೆಯವರಲ್ಲಿನ ಅದ್ವಿತೀಯ ಗುಣಗಳ ಎಲ್ಲೆಡೆ ಪರಿಚಯಿಸಬೇಕಿದೆ. ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗಲು ಪ್ರಯತ್ನಿಸುವುದು, ಇದೇ ಅವರ ಬಗ್ಗೆ ನಿಜವಾದ ಕೃತಜ್ಞತೆಯಾಗಿರಲಿದೆ ಎಂದರು.
“ಧರ್ಮಾಧಿಷ್ಠಿತ “ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ ಹಾಗೂ ಹಿಂದೂಗಳ ಯೋಗದಾನ’ ಈ ವಿಷಯದ ಕುರಿತು ಅವರು ಮಾರ್ಗದರ್ಶನ ಮಾಡಿದರು. ಇತರ ಸಮವಿಚಾರಿ ಸಂಘಟನೆಗಳೊಂದಿಗೆ ದೇಶಾ ದ್ಯಂತ 112 ಸ್ಥಳಗಳಲ್ಲಿ ಭಾವ ಪೂರ್ಣ ವಾತಾವರಣದಲ್ಲಿ ಇಂತಹ “ಗುರುಪೂರ್ಣಿಮಾ ಮಹೋ ತ್ಸವವನ್ನು’ ಆಚರಿಸ ಲಾಯಿತು.
ವ್ಯಾಸಪೂಜೆ ಹಾಗೂ ಸನಾತನ ಸಂಸ್ಥೆಯ ಗುರುಪರಂಪರೆಯಲ್ಲಿನ ಶ್ರೀಮತ್ಪರಮಹಂಸ ಚಂದ್ರಶೇಖ ರಾನಂದ, ಶ್ರೀ ಅನಂತಾನಂದ ಸಾಯಿಶ, ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಸಂತ ಭಕ್ತರಾಜ ಮಹಾರಾಜ, ಪ.ಪೂ. ರಾಮಾನಂದ ಮಹಾರಾಜ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ| ಜಯಂತ ಬಾಳಾಜಿ ಆಠವಲೆಯವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ’ ಹಾಗೂ “ಪರಾತ್ಪರ ಗುರು (ಡಾ|) ಜಯಂತ ಬಾಳಾಜಿ ಆಠವಲೆ ಇವರ ಅಲೌಕಿಕ ಕಾರ್ಯ’ ಈ ವಿಷಯದಲ್ಲಿ ಚಿತ್ರ ಪ್ರದರ್ಶಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಹಿಂದೂ ರಾಷ್ಟ್ರ ನಿರ್ಮಾಣದ ಪಣ
ಜಾತ್ಯತೀತ ಭಾರತದಲ್ಲಿ ಹಿಂದೂಗಳು ಅನೇಕ ಸಮಸ್ಯೆಗಳಿಗೆ ಎಷ್ಟೇ ಪ್ರತಿಭಟನೆ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ, ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕಾಗಿದೆ ಎಂದು ಹಿಂದುತ್ವವಾದಿ ಮಂಗಳೂರಿನ ಮಧುಸೂದನ್ ಅಯ್ಯರ್ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.