ಕಟ್ಟೆಚ್ಚರ ಅಗತ್ಯ: ಜಿಲ್ಲಾಧಿಕಾರಿ ಡಾ| ಸಜಿತ್
Team Udayavani, Mar 11, 2020, 5:41 AM IST
ಕಾಸರಗೋಡು: ಕೊರೊನಾ ಸೋಂಕು ರಾಜ್ಯದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಕಟ್ಟೆಚ್ಚರ ವಹಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಹೇಳಿದ್ದಾರೆ. ವಿದೇಶೀಯರು ಮತ್ತು ವಿದೇಶಗ ಳಿಂದ ಊರಿಗೆ ಮರಳುತ್ತಿರುವವರು (ಅನಿವಾಸಿಗಳು) ಕಡ್ಡಾಯವಾಗಿ ಆರೋಗ್ಯ ಇಲಾಖೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಹಾಯವಾಣಿ
ವಿದೇಶಗಳಿಂದ ಆಗಮಿಸಿದವ ರಲ್ಲಿ ಕೆಮ್ಮು, ಸೀನುವಿಕೆ, ಜ್ವರ ಸಹಿತ ರೋಗ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಜಿಲ್ಲಾ ಕೊರೊನಾ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ಸಂದೇಹಗಳಿದ್ದಲ್ಲಿ ಸಹಾಯವಾಣಿ 0471-255205 / ಉಚಿತ ಸಹಾಯವಾಣಿ 1056, ಕೊರೊನಾ
ನಿಯಂತ್ರಣ ಕೊಠಡಿ (ಕಾಸರ ಗೋಡು) 00490000493 ನಂಬರ್‌ಗೆ ಕರೆ ಮಾಡಬಹುದು.
ಮಾ. 31ರ ವರೆಗೆ ಶಾಲೆಗಳಿಗೆ ರಜೆ
ಮಾ. 31ರ ವರೆಗೆ ಒಂದನೇ ತರಗತಿಯಿಂದ 7ನೇ ತರಗತಿ ವರೆಗಿನ ತರಗತಿಗಳಿಗೆ ಪೂರ್ಣ ರೂಪದ ರಜೆ ಸಾರಲಾಗಿದೆ. ಈ ಆದೇಶ ಬಿ.ಬಿ.ಎಸ್. ಮತ್ತು ಸಿ.ಬಿ.ಸಿ.ಎ. ಶಾಲೆಗಳಿಗೂ ಅನ್ವಯವಾಗುತ್ತದೆ. 8, 9, 10, ಪ್ಲಸ್-ವನ್, ಪ್ಲಸ್-ಟು ತರ ಗತಿಗಳ ಪರೀಕ್ಷೆಗಳು ಅತ್ಯಂತ ಸುರಕ್ಷತೆಯೊಂದಿಗೆ ಸೂಕ್ತ ಅವ ಧಿಯಲ್ಲೇ ನಡೆಯಲಿವೆ. ನಿಗಾದಲ್ಲಿ ಇರುವವರು ಪರೀಕ್ಷೆಗೆ ಹಾಜರಾಗುವುದಿದ್ದರೆ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.