ಸಾಲ ಮರುಪಾವತಿ ಅವಧಿ ವಿಸ್ತರಿಸಿದ ಕೇಂದ್ರ ; ರಾಜ್ಯ ಸರಕಾರದ ಮೌನ; ರೈತರು ಅತಂತ್ರ
Team Udayavani, Jun 8, 2020, 2:07 PM IST
ಸಾಂದರ್ಭಿಕ ಚಿತ್ರ
ಮುಂಡಾಜೆ: ಕೋವಿಡ್ ಲಾಕ್‌ಡೌನ್ ಕಾರಣದಿಂದ ಜನ ಸಾಮಾನ್ಯರ ಆದಾಯಕ್ಕೆ ಪೆಟ್ಟು ಬಿದ್ದಿರುವ ಕಾರಣ ಕೇಂದ್ರ ಸರಕಾರ ಮತ್ತು ಆರ್‌ಬಿಐ ಹೊರಡಿಸಿದ ಸಾಲ ಮರುಪಾವತಿ ವಿಸ್ತರಣೆ ಹೊಸ ಆದೇಶದಲ್ಲಿ ಬ್ಯಾಂಕ್‌ಗಳ ಸುಸ್ತಿ ಹಾಗೂ ಚಾಲ್ತಿ ಸಾಲಗಳನ್ನು ಮರು ಪಾವತಿ ಸಲು ಆಗಸ್ಟ್ ಕೊನೆಯವರೆಗೆ ಸಮಯವಿದೆ ಎಂದು ತಿಳಿಸಲಾಗಿದೆ. ಆದರೆ ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಆದೇಶ ಹೊರಡಿಸದೆ ಮೌನಕ್ಕೆ ಶರಣಾಗಿರುವುದರಿಂದ ಸಾಲ ಕಟ್ಟಬೇಕಾದ ರೈತರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲಗಾರ ರೈತರಿಗೆ ಜೂ. 30ರೊಳಗೆ ಅಥವಾ ಅದರೊಳಗಿನ ಅವಧಿಯ ದಿನಾಂಕಕ್ಕೆ ಮರುಪಾವತಿಸುವಂತೆ ನೋಟಿಸ್ ಬರಲಾರಂಭಿಸಿದೆ. ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಸ್ಥಿರತೆ ನಿಗದಿಗೊಂಡಿಲ್ಲ. ಮಳೆಗಾಲದ ಕೃಷಿ ಕೆಲಸ, ಔಷಧ ಸಿಂಪಡಣೆ, ಗೊಬ್ಬರ ಹಾಕುವ ಕೆಲಸಗಳಿಗೆ ಹಣ ಇಲ್ಲದೇ
ರೈತರು ಪರದಾಡುವಂತಾಗಿದೆ. ಅತ್ತದರಿ, ಇತ್ತಪುಲಿ ಸಹಕಾರ ಸಂಘಗಳ ಸಿಬಂದಿ ಸಾಲ ಮರುಪಾವತಿ ಕುರಿತು ಬಾಕಿದಾರರಿಗೆ ನೋಟಿಸ್ ಜಾರಿ ಮಾಡತೊಡಗಿದ್ದಾರೆ. ಈ ಬಗ್ಗೆ ಸಾಲಗಾರರು ಸಹಕಾರ ಸಂಘಗಳಿಗೆ ಬಂದು ಸಿಬಂದಿಯನ್ನು ತರಾ ಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರದ ಆದೇಶ ಬದಲಾಗದ ಕಾರಣ ಸಿಬಂದಿ ಕೂಡ ಏನನ್ನೂ ಹೇಳಲಾರದ ಸ್ಥಿತಿಯಲ್ಲಿದ್ದಾರೆ.
ಎಂಕೆಸಿಸಿ ಸಾಲ
ಓರ್ವ ಕೃಷಿಕನಿಗೆ ಗರಿಷ್ಠ 3 ಲಕ್ಷ ರೂ. ತನಕ ನೀಡುತ್ತಿರುವ ಎಂಕೆಸಿಸಿ ಹೆಸರಿನ ಒಂದು ವರ್ಷ ಅವಧಿಯ ನವೀಕರಿಸಬಹುದಾದ ಕೃಷಿ ಸಾಲದ ಮೊತ್ತವನ್ನು ರಾಜ್ಯ ಸರಕಾರ ಕೇಂದ್ರ ಸರಕಾರದಿಂದ ಶೇ. 7.4 ಬಡ್ಡಿ ದರ ದಲ್ಲಿ ಪಡೆದು ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದೆ. ರೈತರು ಇದಕ್ಕೆ ಯಾವುದೇ ಬಡ್ಡಿ ಪಾವತಿಸಬೇಕಾದ ಅಗತ್ಯ ಇಲ್ಲದ ಕಾರಣ ಈ ಸಾಲಗಳ ಅವಧಿ ವಿಸ್ತರಣೆ ಮಾಡಿದರೆ ಸರಕಾರಕ್ಕೆ ಹಾಗೂ ಸಹಕಾರ ಸಂಘಗಳಿಗೆ ಯಾವುದೇ ನಷ್ಟವಾಗದು. ಆದರೆ ಸಾಲದ ಅಸಲು ಮೊತ್ತವನ್ನು ರೈತರು ನಿಗದಿತ ದಿನಗಳ ಅವಧಿಗೆ ಪಾವತಿ ಸಲೇ ಬೇಕು. ಆದರೆ ಸಂಕಷ್ಟದ ಈ ದಿನಗಳಲ್ಲಿ ಮೊತ್ತ ಹೊಂದಾಣಿಕೆ ಮಾಡಿಕೊಳ್ಳಲಾಗದೇ ಸಾಲಗಾರರು ಬವಣೆ ಪಡುವಂತಾಗಿದೆ.
ನೋಟಿಸ್ ಬಂದಿದೆ
ಕೇಂದ್ರ ಸರಕಾರ ಸಾಲ ಮರುಪಾವತಿಗೆ ಆಗಸ್ಟ್ ಕೊನೆಯವರೆಗೆ ಸಮಯವಿದೆ ಎಂದು ಘೋಷಣೆ ಮಾಡಿದ್ದರೂ ಜೂನ್‌ನಲ್ಲೇ ಸಾಲ ಮರುಪಾವತಿಸುವಂತೆ
ಸಹಕಾರ ಸಂಘದಿಂದ ನೋಟಿಸ್ ಬಂದಿದೆ.
– ವಿಶ್ವನಾಥ, ಎಂಕೆಸಿಸಿ ಸಾಲಗಾರ, ಮುಂಡಾಜೆ
ಆದೇಶ ಬಂದಿಲ್ಲ
ಸಾಲ ಮರು ಪಾವತಿ ದಿನಾಂಕ ವಿಸ್ತರಣೆ ಕುರಿತು ರಾಜ್ಯ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಈ ಕಾರಣದಿಂದ ಸಹಕಾರ ಸಂಘದವರು ಸಾಲ ಮರುಪಾವತಿಗೆ ನೋಟಿಸ್ ನೀಡುತ್ತಿದ್ದಾರೆ.
– ಪ್ರವೀಣ್ ನಾಯಕ್, ಉಪನಿಬಂಧಕರು, ಸಹಕಾರ ಇಲಾಖೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.