ಶೋಚನೀಯ ಸ್ಥಿತಿಯಲ್ಲಿದೆ ಕೇಂದ್ರ ಗ್ರಂಥಾಲಯದ ಶೌಚಾಲಯ
Team Udayavani, Jan 10, 2019, 8:02 AM IST
ನಗರ : ನಗರದ ಕೇಂದ್ರಸ್ಥಾನ ಮಿನಿ ವಿಧಾನಸೌಧದ ಬಳಿ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸಂದರ್ಶಿಸುವವರು ಅಪ್ಪಿತಪ್ಪಿಯೂ ಶೌಚಾಲಯ ಬಳಕೆ ಮಾಡುವಂತಿಲ್ಲ. ಕಾರಣ ಆ ಶೌಚಾಲಯದ ಸ್ಥಿತಿ ಶೋಚನೀಯವಾಗಿದೆ.
ತನ್ನ ವ್ಯಾಪ್ತಿಯಲ್ಲಿನ 37 ಗ್ರಂಥಾಲಯಗಳಿಗೆ ಪ್ರಧಾನವಾಗಿರುವ ಗ್ರಂಥಾಲಯವಿದು. ಸುಮಾರು 68 ಸಾವಿರ ಪುಸ್ತಕ ಸಂಗ್ರಹಗಳು, ದಿನಪತ್ರಿಕೆ, ನಿಯತಕಾಲಿಕಗಳನ್ನು ಹೊಂದಿರುವ ಉತ್ತಮ ಗ್ರಂಥಾಲಯ ಇದಾಗಿದೆ. ಇಲ್ಲಿ ಸುಮಾರು 7,000 ಓದುಗರು ಸದಸ್ಯತ್ವವನ್ನು ಪಡೆದಿದ್ದಾರೆ.
ಬಾಗಿಲೂ ಸರಿಯಾಗಿಲ್ಲ
ಶೌಚಾಲಯದ ಬಾಗಿಲುಗಳು ಮುರಿದಿವೆ. ಒಳಗಡೆ ಹೋದರೆ ಸ್ವಚ್ಛತೆಯೂ ಇಲ್ಲ. ಆಗಾಗ್ಗೆ ನೀರಿನ ಕೊರತೆಯೂ ಕಾಡುತ್ತದೆ. ದಿನಂಪ್ರತಿ ನೂರಾರು ಮಂದಿ ಗ್ರಂಥಾಲಯಕ್ಕೆ ಭೇಟಿ ನೀಡುವುದರಿಂದ ವ್ಯವಸ್ಥಿತ ಶೌಚಾಲಯದ ಅಗತ್ಯ ಗ್ರಂಥಾಲಯಕ್ಕೆ ಇದೆ. ರಸ್ತೆಯ ಬದಿಯಲ್ಲೇ ಇರುವುದರಿಂದ ಗ್ರಂಥಾಲಯಕ್ಕೆ ಬರುವವರನ್ನು ಬಿಟ್ಟು ಹೊರಗಿನಿಂದ ಸಾರ್ವಜನಿಕರು ಬಂದು ಹಾಳು ಮಾಡುತ್ತಿದ್ದಾರೆ ಎನ್ನುವುದು ಗ್ರಂಥಾಲಯ ಸಿಬಂದಿಯ ಆರೋಪ. ಸೂಕ್ತವಾದ ವ್ಯವಸ್ಥೆಯನ್ನು ಮಾಡಿ ಬೀಗ ಹಾಕಿಟ್ಟಲ್ಲಿ ಬೇರೆಯವರು ದುರುಪಯೋಗಪಡಿಸುವುದನ್ನು ತಪ್ಪಿಸಬಹುದು. ಶೌಚಾಲಯವನ್ನು ಸಮರ್ಪಕಗೊಳಿಸಬೇಕು ಎಂದು ಗ್ರಂಥಾಲಯದ ಓದುಗರು ಆಗ್ರಹಿಸಿದ್ದಾರೆ.
ಪ್ರಸ್ತಾವನೆ ಸಲ್ಲಿಸಲಾಗಿದೆ
ಗ್ರಂಥಾಲಯ ಕಚೇರಿಯ ಒಳಗಡೆಯೇ ಶೌಚಾಲಯ ನಿರ್ಮಿಸಬೇಕು ಎನ್ನುವ ಬೇಡಿಕೆಯ ಪ್ರಸ್ತಾವನೆಯನ್ನು ಗ್ರಂಥಾಲಯ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಇದರ ಜತೆಗೆ ಗ್ರಂಥಾಲಯಕ್ಕೆ ಬಣ್ಣ ಬಳಿ ಯುವ ಪ್ರಸ್ತಾವನೆಯನ್ನೂ ಸಲ್ಲಿಸ ಲಾಗಿದೆ. ಈ ತಿಂಗಳೊಳಗೆ ಹೊಸ ಶೌಚಾಲಯ ವ್ಯವಸ್ಥೆ ಮಂಜೂರಾಗ ಬಹುದು. ಮೇಲಧಿಕಾರಿಗಳು ಫಾಲೋಅಪ್ ಮಾಡುತ್ತಿದ್ದಾರೆ.
– ನಮಿತಾ ಬಿ,
ಸಹಾಯಕ ಗ್ರಂಥಪಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.