ಕುಕ್ಕೆ ದೇಗುಲದ ಕಾರ್ಯನಿರ್ವಾಹಣಧಿಕಾರಿ ದಿಢೀರ್ ಬದಲಾವಣೆ
Team Udayavani, Sep 28, 2019, 12:34 PM IST
ರವೀಂದ್ರ ಎಂ.ಎಚ್
ಸುಬ್ರಹ್ಮಣ್ಯ: ಧಾರ್ಮಿಕ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಕಾರ್ಯ ನಿರ್ವಾಹಣಧಿಕಾರಿ ರವೀಂದ್ರ ಎಂ.ಎಚ್ ಅವರಿಗೆ ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ವರ್ಗಾವಣೆಗೊಳಿಸಲಾಗಿದ್ದು ಕುಕ್ಕೆ ದೇಗುಲದ ಅಧಿಕಾರವನ್ನು ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ವಹಿಸಲಾಗಿದೆ. ಪುತ್ತೂರು ಎ.ಸಿ ಅವರು ರವಿವಾರದಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ವರ್ಗಾವಣೆ ಆಗಿರುವುದನ್ನು ಇ.ಒ ರವೀಂದ್ರ ಎಂ ಎಚ್ ಖಚಿತಗೊಳಿಸಿದ್ದು ರವಿವಾರದಂದು ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಅಧಿಕಾರ ಹಸ್ತಾಂತರಿಸಿ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ದೇಗುಲಕ್ಕೆ ದಾನಿಗಳು ಕೊಡಮಾಡುವ ಬ್ರಹ್ಮರಥ ಸೆ.30ರಂದು ಹೊರಟು ಅ.2 ಕ್ಕೆ ತಲುಪಲಿದೆ.ಈ ಹಿಂದೆ ಕಾಂಗ್ರೆಸ್ ಸರಕಾರ ನೇಮಿಸಿದ ಈಗಿನ ಆಡಳಿತ ಮಂಡಳಿ ಬ್ರಹ್ಮರಥ ಬರಮಾಡಿಕೊಳ್ಳಲು ಭರಪೂರ ಸಿದ್ಸತೆ ನಡೆಸುತ್ತಿದೆ.ಈ ನಡುವೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ.ಈ ನಡುವೆ ದೇಗುಲದ ಸಿ.ಒ ಅವರನ್ನು ವರ್ಗಾಯಿಸಿ ಸಹಾಯಕ ಆಯುಕ್ತರಿಗೆ ದೇಗುಲದ ಅಧಿಕಾರ ವಹಿಸಿರುವುದು ಅಚ್ಚರಿ ಮೂಡಿಸಿದೆ. ಮುಂದಿನ ಅ.18ಕ್ಕೆ ಈಗಿನ ಆಡಳಿತ ಮಂಡಳಿ ಆಧಿಕಾರ ಮುಗಿಯಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.