ಚಾರ್ಮಾಡಿ ಘಾಟಿ ಸೌಂದರ್ಯ ಕಸಿದ ಭೂಕುಸಿತ

ಕಕ್ಕಿಂಜೆಯಲ್ಲಿ ಪಿಯುಸಿ ವಿಭಾಗ ತೆರೆಯಲು ಬೇಡಿಕೆ

Team Udayavani, Aug 28, 2021, 6:53 AM IST

ಚಾರ್ಮಾಡಿ ಘಾಟಿ ಸೌಂದರ್ಯ ಕಸಿದ ಭೂಕುಸಿತ

ಆವರಣ ಗೋಡೆ ಇಲ್ಲದ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ.

ಸೌಂದರ್ಯದ ಗಣಿಯನ್ನು ಹೊಂದಿರುವ ಚಾರ್ಮಾಡಿ ಗ್ರಾಮದಲ್ಲಿ ಪ್ರವಾಸೋದ್ಯಮ ಬೆಳೆಯಲು ವಿಪುಲ ಅವಕಾಶಗಳಿದ್ದರೂ ಇಲ್ಲಿರುವ ವ್ಯವಸ್ಥೆಗಳು ಅದಕ್ಕೆ ಪೂರಕವಾಗಿ ಇನ್ನೂ ಬೆಳೆದಿಲ್ಲ. ಇದು ಅಲ್ಲದೆ ಇಲ್ಲಿ ಮೂಲ ಸೌಕರ್ಯಗಳ ಹಲವು ಕೊರತೆ ಕಾಡುತ್ತಿದೆ. ಈ ಕುರಿತು ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ ಬೆಳಕು ಚೆಲ್ಲುವ ಪ್ರಯತ್ನ.

ಬೆಳ್ತಂಗಡಿ: ರಾಜ್ಯ ರಾಜಧಾನಿಗೆ ಬಹುಮುಖ್ಯ ಸಂಪರ್ಕ ಬೆಸುಗೆಯಾಗಿದ್ದುಕೊಂಡೇ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪಶ್ಚಿಮ ಘಟ್ಟದ ತಪ್ಪಲಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಚಾರ್ಮಾಡಿ ಮಂದಿ ಮಾತ್ರ ಕರೆಗೆ ಸಿಗುತ್ತಿಲ್ಲ.

ಚಾರ್ಮಾಡಿ ಗ್ರಾಮ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿ ಕಳೆದ ಎರಡು ವರ್ಷಗಳ ಹಿಂದಿನ ಭೂಕುಸಿತದ ಹೊಡೆತಕ್ಕೆ ಸಿಲುಕಿ ಸೌಂದರ್ಯ ಕಳೆದು ಕೊಂಡಿದೆ. ಚಾರ್ಮಾಡಿ ಘಾಟಿಯ 11ನೇ ತಿರುವಿನವರೆಗೆ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದೆ. ಅಲ್ಲಿಂದ ಬಳಿಕ ಮೂಡಿಗೆರೆ ಗ್ರಾಮ. 2ನೇ ತಿರುವಿನಿಂದ ಆರಂಭವಾಗಿ ಮಲೆಯ ಮಾರುತದವರೆಗೆ ನೆಟ್‌ವರ್ಕ್‌ ಸಮಸ್ಯೆ ಇಂದು ನಿನ್ನೆಯದಲ್ಲ. ಅಪಘಾತ ವಲಯವಾಗಿದ್ದರೂ ಯಾವುದೇ ಕಾರಣಕ್ಕೂ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ. ರಾತ್ರಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ಸೂಚನ ಫಲಕವಿಲ್ಲ, ಸಾರ್ವಜನಿಕ ಶೌಚಾಲಯ ಪ್ರಮುಖ ಬೇಡಿಕೆಯಾಗಿದೆ.

ಬಸ್‌ ಸಮಯಕ್ಕೆ ಬರುತ್ತಿಲ್ಲ
ಚಾರ್ಮಾಡಿ, ಅಣಿಯೂರು, ಪುದುವೆಟ್ಟು, ಕಾಯ ರ್ತಡ್ಕ ಗ್ರಾಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಚಾರ್ಮಾಡಿಗೆ ಬರಬೇಕು. ಕಕ್ಕಿಂಜೆಯಲ್ಲಿ 10ನೇ ತರಗತಿವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಾದಲ್ಲಿ 25 ಕಿ.ಮೀ. ದೂರ ಸಾಗುವ 500 ವಿದ್ಯಾರ್ಥಿಗಳು ಸ್ಥಳೀಯವಾಗಿಯೇ ಶಿಕ್ಷಣ ಪಡೆಯಬಹುದಾಗಿದೆ. ಬಸ್‌ ವ್ಯವಸ್ಥೆ ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಖಾಸಗಿ ವಾಹನ ಅವಲಂಬಿ ಸಬೇಕಾಗಿದ್ದು ಬಸ್‌ಗೆ ಉಜಿರೆಗೆ 14 ರೂ., ಇದ್ದರೆ ಖಾಸಗಿ ವಾಹನದವರು 25 ರೂ. ಪಡೆಯುತ್ತಾರೆ. ವಿದ್ಯಾರ್ಥಿಗಳು ದಿನಕ್ಕೆ 50 ರೂ. ಸಂಚಾರಕ್ಕೆ ಮೀಸಲಿರಿಸುವಂತಾಗಿದೆ.

ಗಾಂಧಿನಗರ ಕಕ್ಕಿಂಜೆ ರಸ್ತೆ
ಗಾಂಧಿನಗರದಿಂದ ಕಕ್ಕಿಂಜೆಗೆ ಬರುವ ಎರಡು ಕಿ.ಮೀ. ಮಣ್ಣಿನ ರಸ್ತೆ ಕಳಪೆಯಾಗಿದೆ. 300ಕ್ಕೂ ಅಧಿಕ ಮನೆ ಗಳಿರುವುದರಿಂದ ಸರ್ವಋತು ರಸ್ತೆ ಆಗಬೇಕೆಂಬ ಬೇಡಿಕೆಯಿದೆ. ರಸ್ತೆ ನಿರ್ಮಾಣವಾದಲ್ಲಿ ಕಕ್ಕಿಂಜೆಗೆ ನೇರವಾಗಿ ತೆರಳಲು ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಖ್ಯ ರಸ್ತೆಯಾಗಿ 4 ಕಿ.ಮೀ. ಸುತ್ತು ಬಳಸಿ ಬರಬೇಕಿದೆ. ಅನ್ನಾರು ಕಾಲನಿಯಿಂದ ಚಿಬಿದ್ರೆ ಗ್ರಾಮದ ಎಸ್‌.ಟಿ. ಕಾಲನಿ 2 ಕಿ.ಮೀ. ರಸ್ತೆ ಹದಗೆಟ್ಟಿದೆ. ಈ ರಸ್ತೆಯಾದಲ್ಲಿ ಚಿಬಿದ್ರೆ ಹಾಗೂ ಚಾರ್ಮಾಡಿ ಗ್ರಾಮದ ಮಂದಿಗೆ ಪ್ರಮುಖ ರಸ್ತೆ ಸಂಪರ್ಕ ವಾಗಲಿದೆ. ಚಿಬಿದ್ರೆ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಅನ್ನಾರು ಸೇತುವೆಯಾಗಿ ಬರಲೂ ಹತ್ತಿರದ ರಸ್ತೆಯಾಗಲಿದೆ.

ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

ಅನ್ನಾರು ಸೇತುವೆ ಸಂಪರ್ಕ ರಸ್ತೆ
ಕಕ್ಕಿಂಜೆಯಿಂದ ಅನ್ನಾರು ಸಾಗುವ 2 ಕಿ.ಮೀ. ರಸ್ತೆ ಕಾಂಕ್ರೀಟ್‌ ರಸ್ತೆಯಾಗಬೇಕೆಂಬ ಬೇಡಿಕೆ ಹಲವು ದಿನ ಗಳದ್ದು. ಕುಸಿತಗೊಂಡ ಅನ್ನಾರು ಸೇತುವೆ ನಿರ್ಮಾಣದ ಹಂತದಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಅನ್ನಾರು ಕಾಲ ನಿಯ ಮಲೆಕುಡಿಯ ಸಮುದಾಯಕ್ಕೆ ಕಕ್ಕಿಂಜೆಗೆ ಬರಲು ಪ್ರಯೋಜನವಾಗಲಿದೆ. ಬೀಟಿಗೆ ಪ್ರಾ.ಆರೋಗ್ಯ ಕೇಂದ್ರದ ಟ್ಯಾಂಕ್‌ ಹಳೆಯ ದಾಗಿದೆ. ಜತೆಗೆ ಆರೋಗ್ಯ ಕೇಂದ್ರಕ್ಕೆ 10 ಅಡಿ ಎತ್ತರ, 50 ಮೀಟರ್‌ ಉದ್ದದ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಗಾಂಧಿನಗರದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು ನೀರಿನ ಸೌಕರ್ಯವಿಲ್ಲ. ಬೀಟಿಗೆ ಹಾಗೂ ಗಾಂಧಿನಗರದಲ್ಲಿ ಎರಡು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾದಲ್ಲಿ ನೀರಿನ ತೊಂದರೆ ಶಾಶ್ವತ ನೀಗಲಿದೆ.

ಅರಣೆಪಾದೆ ಸೇತುವೆ
ಪ್ರತೀ ಮಳೆಗಾಲದಲ್ಲಿ ಅರಣೆ ಪಾದೆ ಸಂಪರ್ಕ ರಸ್ತೆಯದೇ ಸಮಸ್ಯೆ. 11 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಮಳೆಗಾಲದಲ್ಲಿ ಮರಮಟ್ಟು ಬಡಿದು ಹಾನಿಯಾಗಿದೆ. ಇಲ್ಲಿ ಸೇತುವೆ ನಿರ್ಮಾಣವಾದಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಪ್ರಯೋಜನವಾಗಲಿದೆ. ಈಗಾಗಲೆ 2 ಕೋ.ರೂ. ವೆಚ್ಚದಲ್ಲಿ ಅನ್ನಾರಿನಿಂದ ಅರಣೆಪಾದೆವರೆಗೆ ರಸ್ತೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾದರೆ ಮತ್ತಷ್ಟು ಪ್ರಯೋಜನವಾಗಲಿದೆ.

ಇತರ ಬೇಡಿಕೆಗಳೇನು?
– ಚಾರ್ಮಾಡಿ ಪಂಚಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
– ಚಾರ್ಮಾಡಿ ಘಾಟಿ ರಸ್ತೆಗೆ ಸೋಲಾರ್‌ ದೀಪ
– ಅಕ್ರಮ ಮರಳುಗಾರಿಕೆಗೆ ತಡೆ
– ಪೊಲೀಸ್‌ ಗೇಟ್‌ ಬಳಿ ಸಾರ್ವಜನಿಕ ಶೌಚಾಲಯ

– ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.