Charmady; ಚಾರ್ಮಾಡಿ, ಕಡಿರುದ್ಯಾವರ ಪರಿಸರದಲ್ಲಿ ಕಾಡಾನೆ ದಾಂಧಲೆ
Team Udayavani, May 19, 2023, 7:42 AM IST
ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ಕೃಷಿತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಘಟನೆ ನಡೆದಿದೆ.
ಕಾಡಾನೆಗಳು ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯದಿಂದ ಮೃತ್ಯುಂಜಯ ನದಿಯ ಮೂಲಕ ಆಗಮಿಸಿದ ಆನೆಗಳು ಹೊಸಮಠ ಪರಿಸರದ ಚಂದ್ರನ್ ಅವರ ತೋಟದಲ್ಲಿ 114 ಅಡಿಕೆ ಮರಗಳು, ಸಿಂಧೂ ರವಿ ಅವರ ತೋಟದ 36 ಅಡಿಕೆ ಮರಗಳು ಹಾಗೂ ಪುರುಷೋತ್ತಮ ಅವರ ತೋಟದ 33 ಅಡಿಕೆ ಮರಗಳನ್ನು ಮುರಿದು ಹಾಕಿವೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬಂದಿ ಪರಿಶೀಲನೆ ನಡೆಸಿ ಪರಿಹಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದೆ.
ಕಡಿರುದ್ಯಾವರ ಗ್ರಾಮದ ಸಿರಿಬೈಲು ಕಿರಣ ಹೆಬ್ಟಾರ್ ಅವರ ತೋಟಕ್ಕೆ ಬುಧವಾರ ತಡರಾತ್ರಿ ಒಂಟಿ ಸಲಗ ದಾಳಿ ನಡೆಸಿ 15ಕ್ಕಿಂತ ಅಧಿಕ ಬಾಳೆ ಗಿಡಗಳನ್ನು ಧ್ವಂಸಗೈದಿದೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಇನ್ನೊಬ್ಬ ಕೃಷಿಕರ ತೋಟಕ್ಕೆ ಒಂಟಿ ಸಲಗ ಬಂದಿದ್ದರೂ ಹೆಚ್ಚು ಹಾನಿ ಮಾಡದೆ ತೆರಳಿತ್ತು. ಬುಧವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಂಡು ಬಂದ ಒಂಟಿ ಸಲಗ ಹಲವು ಹೊತ್ತು ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.