![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 15, 2021, 11:14 AM IST
ಸುಳ್ಯ: ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸಿ.ಡಿ.ಪಿ.ಒ. ರಶ್ಮಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ತಂಡ ಮದುವೆಯನ್ನು ತಡೆದ ಘಟನೆ ಕಂದಡ್ಕ ಎಂಬಲ್ಲಿ ನಡೆದಿದೆ.
ತಮಿಳು ಕಾಲನಿಯಲ್ಲಿನ ಪ್ರತಾಪ ಎಂಬವನಿಗೆ (26) ಜು.15 ರಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದು ಎಂದು ನಿಶ್ಚಯಿಸಲಾಗಿತ್ತು. ಹುಡುಗಿಗೆ 18 ವರ್ಷ ಆಗಿಲ್ಲ ಎಂಬ ಮಾಹಿತಿ ಬಂದ ಹಿನ್ನೆಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪೂರಕ ಮಾಹಿತಿ ಕೇಳಿದೆ. ಈ ಸಂದರ್ಭ ಹುಡುಗಿಯ ಕುಟುಂಬ ದಾಖಲೆ ನೀಡಲು ತಡವರಿಸಿ 18 ವರ್ಷವಾಗಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಹುಡುಗಿಗೆ 18 ವರ್ಷ ತುಂಬಿದ ಬಳಿಕ ಇದೇ ಹುಡುಗನಿಗೆ ಮದುವೆ ಮಾಡಿಕೊಡಬಹುದು ಎಂದು ಮುಚ್ಚಳಿಕೆ ಬರೆದು ಅಪ್ರಾಪ್ತೆಯನ್ನು ಕುಟುಂಬ ಸಮೇತ ಮೈಸೂರಿಗೆ ಕಳುಹಿಸಲಾಗಿದೆ ಎಂದು ಸಿ.ಡಿ.ಪಿ.ಒ ರಶ್ಮಿ ನೆಕ್ರಾಜೆ ಉದಯವಾಣಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಧುಮ್ಮಿಕ್ಕಿ ಹರಿದು, ಕಣ್ಮನ ಸೆಳೆಯುತ್ತಿರುವ ಕಾಮನದುರ್ಗ ಜಲಪಾತ
ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.