ನಗರದ ರಸ್ತೆಯೇ ಡಂಪಿಂಗ್ ಯಾರ್ಡ್!
Team Udayavani, Aug 6, 2018, 4:30 PM IST
ನಗರ : ನಗರದ ಕೇಂದ್ರ ಸ್ಥಾನದಲ್ಲಿರುವ ಬಸ್ ನಿಲ್ದಾಣ ಮತ್ತು ಅರಣ್ಯ ಇಲಾಖೆ ಕಚೇರಿ ಕಾಂಪೌಂಡ್ ಎದುರಿನಲ್ಲಿರುವ ರಸ್ತೆಯೇ ಡಂಪಿಂಗ್ ಯಾರ್ಡ್ ಆದಂತಿದೆ!
ರಸ್ತೆ ಬದಿಯಲ್ಲಿ ಹರಡಿಕೊಂಡಿರುವ ತ್ಯಾಜ್ಯಗಳನ್ನು ಗಮನಿಸಿದರೆ ಇದೊಂದು ಡಂಪಿಂಗ್ ಯಾರ್ಡ್ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಾರ್ವಜನಿಕರು ನಡೆದಾಡುವ ಈ ಸ್ಥಳದಲ್ಲಿ ಹಲವು ಸಮಯಗಳಿಂದ ಇದೇ ರೀತಿ ಕಸವನ್ನು ರಾಶಿ ಹಾಕುತ್ತಿದ್ದರೂ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಕಣ್ಣು ಮುಚ್ಚಿ ಕುಳಿತಿದೆ. ಸ್ಥಳೀಯ ವ್ಯಾಪಾರಿಗಳು, ಕಚೇರಿಗಳನ್ನು ಹೊಂದಿರುವವರು ಇಲ್ಲಿಯೇ ಕಸವನ್ನು ತಂದು ರಾಶಿ ಹಾಕುತ್ತಾರೆ. ಪಾದಚಾರಿಗಳು ಇದು ಡಂಪಿಂಗ್ ಯಾರ್ಡ್ ಇರಬಹುದು ಎಂದು ವಿವೇಚನೆ ಇಲ್ಲದೆ ತಮ್ಮಲ್ಲಿರುವ ಕಸವನ್ನೂ ಎಸೆಯುತ್ತಿದ್ದಾರೆ.
ವಾರದಲ್ಲಿ ಇಂತಿಷ್ಟು ದಿನ ಎಂದು ನಗರಸಭೆ ಕಸ ಸಂಗ್ರಹ ಮಾಡುವ ಗುತ್ತಿಗೆ ದಾರರು ರಾಶಿ ಹಾಕಿದ ಕಸವನ್ನು ತೆಗೆದುಕೊಂಡು ಹೋಗುತ್ತಾರೆ. ಮರುದಿನ ಅದೇ ಕಸದ ರಾಶಿ ಪುನರಾವರ್ತನೆಯಾ ಗುವುದರಿಂದ ಶ್ವಾನಗಳು ಕಸವನ್ನು ಎಳೆದಾಡಿ ರಸ್ತೆಯೆಲ್ಲೆಡೆ ಹರಡುವಂತೆ ಮಾಡುತ್ತಿದೆ. ಜನರ ವಿವೇಚನಾ ರಹಿತ ಮತ್ತು ನಿರ್ಲಕ್ಷ್ಯದ ವರ್ತನೆ, ಸ್ಥಳೀಯಾಡಳಿತದ ನಿರ್ಲಕ್ಷ್ಯದ ಕಾರಣದಿಂದ ಮುಂದಕ್ಕೆ ರಸ್ತೆಯೇ ಡಂಪಿಂಗ್ ಯಾರ್ಡ್ ಆದರೂ ಆಶ್ಚರ್ಯ ಪಡಬೇಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.