‘ಕಸ ಹಾಕದಿರುವುದೇ ಸ್ವಚ್ಛತೆ’
Team Udayavani, Feb 11, 2019, 6:17 AM IST
ಪುತ್ತೂರು: ಶ್ರೀ ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ನಡೆಯು ತ್ತಿರುವ ಸ್ವಚ್ಛ ಪುತ್ತೂರು ಕಾರ್ಯಕ್ರಮದ 3ನೇ ಹಂತದ ಮೂರನೇ ಕಾರ್ಯಕ್ರಮ ಮೊಟ್ಟೆತ್ತಡ್ಕದ ಅಗ್ನಿಶಾಮಕ ಠಾಣೆಯ ಮುಂಭಾಗ ಮತ್ತು ಕೆಮ್ಮಿಂಜೆ ಶಾಲೆ ಆವರಣದಲ್ಲಿ ರವಿವಾರ ನಡೆಯಿತು.
ಧ್ವಜಾರೋಹಣ, ವೇದಮಂತ್ರ ಘೋಷದ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಕೇಂದ್ರೀಯ ಸಮಿತಿಯ ಮಾಜಿ ಅಧ್ಯಕ್ಷ ಉಮೇಶ ಡಿ.ಕೆ. ಉದ್ಘಾಟಿಸಿ, ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಸ್ವಚ್ಛತೆ ಎಂದರೆ ಕಸ ಹೆಕ್ಕುವುದು ಮಾತ್ರವಲ್ಲ, ಕಸ ಹಾಕದೆ ಇರುವುದು ಕೂಡ. ಕಸ ಹಾಕುವುದರಿಂದ ಪರಿಸರದ ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದೇವೆ. ಪ್ರತಿಯೊಂದು ಮನೆಯಲ್ಲೂ ಸ್ವಚ್ಛತೆಯ ಕುರಿತು ಗಮನ ಕೊಡಬೇಕು ಎಂದರು.
ಆದರ್ಶ ಗ್ರಾಮವಾಗಲಿ
ಪಾಣಾಜೆ ಸುಬೋಧ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ, ಮೊಟ್ಟೆತಡ್ಕದ ಪರಿಸರದಲ್ಲಿ ಉತ್ತಮ ಪರಿಸರವಿದ್ದರೆ ಆದರ್ಶ ಗ್ರಾಮ ವಾಗುವ ಎಲ್ಲ ಸಾಧ್ಯತೆಗಳಿವೆ. ಆದರೆ ನಿರ್ಲಕ್ಷ ್ಯದಿಂದ ಈ ಪ್ರದೇಶ ಮಲಿನ ಗೊಂಡಿದೆ. ಉತ್ತಮ ಪರಿಸರ, ಹೆಚ್ಚು ಜನವಸತಿ ಇರುವ ಈ ಪ್ರದೇಶದ ಅಭಿವೃದ್ಧಿಗಾಗಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸರಾವ್ ಮತ್ತು ಶೈಲಾ ಪೈ, ಪ್ರಮುಖರಾದ ಬಾಲಚಂದ್ರ ರಾವ್, ಗಣೇಶ್ ಆಚಾರ್ಯ, ಚಂದ್ರಶೇಖರ್ ಭಟ್, ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಶಂಕರ್‌ಮಲ್ಯ, ಜಿ. ಕೃಷ್ಣ, ಅಂಬಿಕಾ ಪ. ಪೂ. ವಿದ್ಯಾಲಯದ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಮತ್ತು ದುರ್ಗಾ ಪರಮೇಶ್ವರ, ವಿನೋದ್ ಆಚಾರ್ಯ, ಮನೋಜ್, ಅಶ್ವತ್, ಸಂದೀಪ್ ಲೋಬೊ, ಹರ್ಷೇಂದ್ರ, ಕೃಷ್ಣ ಭಟ್, ಎಂ.ಜಿ. ನಾಯಕ್, ಯೋಗೀಶ್, ಸೀತಾರಾಮಾಚಾರ್ಯ ಹಾಗೂ ಹರಿಣಾಕ್ಷಿ, ಜೈನಾಬಿ, ಭಾರತಿ, ವಿದ್ಯಾರ್ಥಿ ಜಿತೇಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀ ಗಣೇಶ್ ಲಾರಿ ಮಾಲಕ ಧನೇಶ ಅವರು ಕಸವನ್ನು ತೆರವುಗೊಳಿಸುವುದಕ್ಕಾಗಿ ಉಚಿತ ಟಿಪ್ಪರ್ ಸೇವೆಯನ್ನು ಒದಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.