ಕಿಂಡಿ ಅಣೆಕಟ್ಟುಗಳ ಸ್ವಚ್ಛತಾ ಕಾರ್ಯ ಆರಂಭ

ಇಲಾಖೆಯಿಂದ ಹಲಗೆ ಜೋಡಣೆ, ಮರಮುಟ್ಟು ತೆರವು

Team Udayavani, Dec 5, 2020, 7:29 AM IST

ಕಿಂಡಿ ಅಣೆಕಟ್ಟುಗಳ ಸ್ವಚ್ಛತಾ ಕಾರ್ಯ ಆರಂಭ

ಬೆಳ್ತಂಗಡಿ: ಕಾಯರ್ತೋಡಿ ಬಳಿ ಕಿಂಡಿ ಅಣೆಕಟ್ಟು ಸ್ವತ್ಛಗೊಳಿಸುತ್ತಿರು ವುದು.

ಬೆಳ್ತಂಗಡಿ: ಮಳೆಗಾಲದಲ್ಲಿ ಮರಮಟ್ಟು, ಕಸಕಡ್ಡಿ, ಮರಳು, ಹೂಳು ಇತ್ಯಾದಿ ತುಂಬಿರುವ ಉಭಯ ಜಿಲ್ಲೆಗಳ ಕಿಂಡಿ ಅಣೆಕಟ್ಟುಗಳ ಸ್ವತ್ಛತೆಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ.

ಕೃಷಿ ಭೂಮಿಗೆ ಹಾಗೂ ಪಟ್ಟಣ ಭಾಗದಲ್ಲಿ ಕುಡಿಯುವ ನೀರಿಗೆ ಕಿಂಡಿ ಅಣೆಕಟ್ಟು, ಡ್ಯಾಂಗಳೇ ಆಧಾರ. ಪ್ರಸಕ್ತ ಮಳೆ ನಿಂತಿದ್ದು, ನೀರಿನ ಒಳ ಹರಿವು ಕ್ಷೀಣಿಸಿದೆ. ಪ್ರಸಕ್ತ ನಿರ್ವಹಣೆ ತಡವಾಗಿದ್ದು, ಶೀಘ್ರ ಹಲಗೆ ಸ್ವತ್ಛತೆ ಹಾಗೂ ಹಲಗೆ ಜೋಡಣೆ ಪ್ರಕ್ರಿಯೆ ನಡೆಸಿದಲ್ಲಿ ಕೃಷಿಗೆ ಸಾಕಷ್ಟು ನೀರು ಲಭ್ಯವಾಗಲಿದೆ ಎಂದು ಉದಯವಾಣಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಅಣೆಕಟ್ಟುಗಳ ಸ್ವತ್ಛತೆಗೆ ನಿರ್ಧರಿಸಿದೆ.

ದ.ಕ.ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ವಹಣೆಯಲ್ಲಿ ಒಟ್ಟು 315 ಮತ್ತು ಉಡುಪಿ ಜಿಲ್ಲೆಯಲ್ಲಿ 410 ಕಿಂಡಿ ಅಣೆಕಟ್ಟುಗಳಿವೆ. ಆರಂಭಿಕ ಹಂತದಲ್ಲಿ ಈಗಾಗಲೇ ಕಿಂಡಿ ಅಣೆಕಟ್ಟುಗಳ ಸಮೀಪ 5ರಿಂದ 20 ಮೀಟರ್‌ ಅಂತರದೊಳಗೆ ಹೂಳು ಹಾಗೂ ಕಸ, ಕಡ್ಡಿ ತುಂಬಿರುವುದನ್ನು ತೆರವುಗೊಳಿಸಲಾಗುತ್ತಿದೆ.

ಸಾಂಪ್ರದಾಯಿಕ ಒಡ್ಡು
ಬೇಸಗೆಯಲ್ಲಿ ಕೃಷಿ ನೀರಿಗೆ ಪೂರಕವಾಗಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಭಾಗಗಳಲ್ಲಿ ಪ್ರತಿ ವರ್ಷ ನದಿ ಹಾಗೂ ಉಪ ನದಿಗಳಿಗೆ ಸಾಂಪ್ರದಾಯಿಕ ಮಣ್ಣಿನ ಕಟ್ಟ (ಒಡ್ಡು) ನಿರ್ಮಾಣಕ್ಕೆ ಕೃಷಿಕರು ಮುಂದಾಗುತ್ತಿದ್ದರು. ಆದರೆ ಈ ವರ್ಷ ಕಿಂಡಿ ಅಣೆಕಟ್ಟುಗಳಲ್ಲಿ ಕಸ ಸಂಗ್ರಹವಾಗಿದ್ದು, ಅದನ್ನು ತೆರವುಗೊಳಿಸದೇ ಕೃಷಿ ಕಟ್ಟ ಅಳವಡಿ ಸುವಂತಿರಲಿಲ್ಲ. ಇಲಾಖೆಯು ಸ್ವತ್ಛತಾ ಕಾರ್ಯ ಆರಂಭಿಸಿರುವುದರಿಂದ ಕೃಷಿಕರಿಗೆ ಅನುಕೂಲವಾಗಲಿದೆ.

ಇಲಾಖೆಯಿಂದ ನಿರ್ವಹಣೆ
ಕಿಂಡಿ ಅಣೆಕಟ್ಟು ನಿರ್ವಹಣೆಗೆಂದು ನೀರು ಬಳಕೆದಾರರ ಸಂಘವನ್ನು ಇಲಾಖೆಯಿಂದ ರಚಿಸಲಾಗುತ್ತದೆ. ಅಣೆಕಟ್ಟುಗಳ ಗಾತ್ರಕ್ಕನುಗುಣವಾಗಿ ಹಲಗೆ ಜೋಡಣೆ, ಮರಮಟ್ಟು ತೆರವು ಇತ್ಯಾದಿ ನಿರ್ವಹಣೆಗೆ 10 ಸಾವಿರದಿಂದ 60 ಸಾವಿರ ರೂ. ವರೆಗೆ ವೆಚ್ಚವಾಗಲಿದೆ.
-ಶಿವಪ್ರಸನ್ನ , ಎಇ (ಪ್ರಭಾರ), ಸಣ್ಣ ನೀರಾವರಿ ಇಲಾಖೆ, ದ.ಕ

ಸ್ವಚ್ಛಗೊಳಿಸಲಾಗುತ್ತಿದೆ
ಉಡುಪಿ ಜಿಲ್ಲೆಯ 7 ತಾಲೂಕುಗಳಲ್ಲಿ 410 ಕಿಂಡಿ ಅಣೆಕಟ್ಟುಗಳಿವೆ. ಕೆಲವೆಡೆ ಸ್ವತ್ಛತೆ ಮುಗಿದಿದ್ದು, ಉಳಿದೆಡೆ ಪ್ರಗತಿಯಲ್ಲಿದೆ.
-ಶೇಷಕೃಷ್ಣ , ಎಇಇ, ಸಣ್ಣ ನೀರಾವರಿ ಇಲಾಖೆ,ಉಡುಪಿ

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

1-dr

Veerendra Heggade 77ನೇ ವರ್ಷಕ್ಕೆ ಪಾದಾರ್ಪಣೆ: ಗಣ್ಯರಿಂದ ಶುಭ ಹಾರೈಕೆ

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.