![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 25, 2020, 9:13 AM IST
ಬಂಟ್ವಾಳ ವಿಭಾಗ ವ್ಯಾಪ್ತಿಯಲ್ಲಿ ರೆಂಬೆಗಳ ತೆರವು ಕಾರ್ಯ ನಡೆಯುತ್ತಿದೆ.
ಬಂಟ್ವಾಳ: ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಸವಾಲಿನ ಕೆಲಸವಾಗಿರುವುದರಿಂದ ಮೆಸ್ಕಾಂ ಕೂಡ ಮುಂಗಾರು ಪೂರ್ವದಲ್ಲೇ ಸಿದ್ಧತೆ ಮಾಡಿಕೊಂಡಿರುತ್ತದೆ. ಬಂಟ್ವಾಳ ವಿಭಾಗದಲ್ಲೂ ಸಿದ್ಧತಾ ಕಾರ್ಯ ಆರಂಭಗೊಂಡಿದ್ದು, ಮರಗಳ ರೆಂಬೆಗಳ ತೆರವು ಕಾರ್ಯ ನಡೆಯುತ್ತಿದೆ. ಮೆಸ್ಕಾಂ ಬಂಟ್ವಾಳ ವ್ಯಾಪ್ತಿಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕು ಬರುತ್ತಿದ್ದು, ಎರಡೂ ಕಡೆಗಳಲ್ಲೂ ಸಿದ್ಧತೆ ನಡೆದಿದೆ. ದುರಸ್ತಿ ಕಾರ್ಯ, ಹಾನಿ ಸಂಭವಿಸಿದಾಗ ಮರುಸಂಪರ್ಕಕ್ಕೆ ಬೇಕಾದ ಸಾಮಗ್ರಿ ಸಿದ್ಧಪಡಿಸಲಾಗುತ್ತಿದೆ.
ಮಾನ್ಸೂನ್ ಗ್ಯಾಂಗ್ ಕಾರ್ಯಪ್ರವೃತ್ತ
ಪ್ರತಿವರ್ಷ ಮೇ ತಿಂಗಳಲ್ಲಿ ಮೆಸ್ಕಾಂ ವಿದ್ಯುತ್ ತಂತಿಗೆ ಬೀಳುವ ಸ್ಥಿತಿಯಲ್ಲಿರುವ, ತಾಗಿಕೊಂಡಿರುವ ಎಲ್ಲ ಮರಗಳ ರೆಂಬೆಗಳನ್ನು ತೆರವುಗೊಳಿಸುತ್ತದೆ. ಅದಕ್ಕಾಗಿ ಹೆಚ್ಚಿನ ಸಿಬಂದಿ ಆವಶ್ಯಕತೆ ಇದ್ದು, ಮೆಸ್ಕಾಂ ಕೇಂದ್ರ ಕಚೇರಿಯಿಂದ ಈ ಕಾರ್ಯಕ್ಕೆ ಮಾನ್ಸೂನ್ ಗ್ಯಾಂಗ್‌ನ್ನು ಕಳುಹಿಸಿಕೊಡಲಾಗುತ್ತದೆ. ಈ ಬಾರಿ ಕೇಂದ್ರ ಕಚೇರಿಯಿಂದ ಎರಡು ತಾಲೂಕುಗಳಿಗೆ 54 ಮಂದಿಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸಿಬಂದಿ ವಿಭಾಗದಲ್ಲಿರುವ ರೆಗ್ಯುಲರ್ ಸಿಬಂದಿ ಜತೆ ಸೇರಿ ರೆಂಬೆಗಳ ತೆರವು ಕಾರ್ಯ ನಡೆಸುತ್ತಾರೆ. ಅಪಾಯಕಾರಿ ರೆಂಬೆಗಳನ್ನು ಯಂತ್ರಗಳ ಮೂಲಕ, ಮಾನವ ಶ್ರಮದ ಮೂಲಕವೂ ತೆರವುಗೊಳಿಸಲಾಗುತ್ತದೆ. ರೆಂಬೆ ಕಡಿಯುವುದಕ್ಕೆ ಆಯಾಯ ಊರಿನವರು ಕೂಡ ಸಹಕಾರ ನೀಡುತ್ತಾರೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ವಿಭಾಗಕ್ಕೆ ಮೂರು ವಾಹನ
ಮಳೆಗಾಲದಲ್ಲಿ ಗಾಳಿ-ಮಳೆಗೆ ಹಾನಿಯಾದರೆ ಅವುಗಳ ದುರಸ್ತಿ ಕಾರ್ಯಗಳನ್ನು ನಡೆಸುವುದಕ್ಕೆ ತಿರುಗಾಡಲು ಈ ಬಾರಿ ಬಂಟ್ವಾಳ ವಿಭಾಗಕ್ಕೆ ಮೂರು ವಾಹನಗಳನ್ನು ಕೂಡ ಮೆಸ್ಕಾಂ ನೀಡಿದೆ. ಹೆಚ್ಚುವರಿ ಕಂಬಗಳು, ಮೆಟೀರಿಯಲ್‌ಗಳನ್ನೂ ಕೂಡ ಬಂಟ್ವಾಳ ವಿಭಾಗದಲ್ಲಿ ಸ್ಟಾಕ್ ಇಟ್ಟುಕೊಳ್ಳಲಾಗಿದೆ.
ಎಲ್ಲ ರೀತಿಯಲ್ಲೂ ಸನ್ನದ್ಧ
ವಿದ್ಯುತ್ ತಂತಿಗಳಿಗೆ ಅಡಚಣೆಯಾಗುವ ಮರಗಳ ರೆಂಬೆಗಳ ತೆರವು ಕಾರ್ಯ ಈಗಾಗಲೇ ನಡೆಯುತ್ತಿದೆ. ಮಳೆಯಿಂದ ವಿದ್ಯುತ್ ಪೂರೈಕೆಗೆ ಹಾನಿಯಾದರೆ, ಅವುಗಳ ದುರಸ್ತಿ ಮೆಸ್ಕಾಂ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ. ಈ ಬಾರಿ ಮಳೆಯಿಂದ ತೊಂದರೆ ಆದಾಗ ಒಂದೂವರೆ ದಿನದಲ್ಲಿ ದುರಸ್ತಿ ಕಾರ್ಯ ನಡೆಸಿಕೊಟ್ಟಿದ್ದೇವೆ.
– ರಾಮಚಂದ್ರ ಎಂ., ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ಬಂಟ್ವಾಳ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.