![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jul 19, 2019, 5:00 AM IST
ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು.
ಕಡಬ: ಕಡಬ ಗ್ರಾ.ಪಂ. ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಕಲ್ಲಂತಡ್ಕ ಎಂಬಲ್ಲಿರುವ ಸಾರ್ವಜನಿಕ ಶ್ಮಶಾನದ ಬಳಿಯ ಸರಕಾರಿ ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವುದನ್ನು ಕಂದಾಯ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ಪುತ್ತೂರು ಸಹಾಯಕ ಆಯುಕ್ತರು ಎಚ್.ಕೆ. ಕೃಷ್ಣಮೂರ್ತಿ ಆದೇಶದಂತೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರ ನೇತೃತ್ವದ ಕಂದಾಯ ಅಧಿಕಾರಿಗಳ ತಂಡದ ಉಪಸ್ಥಿತಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದವರೇ ಸ್ವಯಂ ಪ್ರೇರಿತವಾಗಿ ಅವುಗಳ ತೆರವು ಕಾರ್ಯಾಚರಣೆ ನಡೆಸಿದರು.
ಸ್ವಯಂ ಪ್ರೇರಿತ ತೆರವು
ಆಕ್ರಮ ಕಟ್ಟಡ ನಿರ್ಮಿಸಿದವರಿಗೆ ತತ್‌ಕ್ಷಣ ತೆರವು ಗೊಳಿಲು ನೋಟಿಸ್ ನೀಡಿದಂತೆ ಗುರುವಾರ ಸ್ಥಳಕ್ಕೆ ತೆರವು ಕಾರ್ಯಕ್ಕೆ ಭೇಟಿ ನೀಡಿದಾಗ ಕಟ್ಟಡ ನಿರ್ಮಿಸಿ ದವರೂ ಹಾಜರಾಗಿದ್ದರು. ಕಂದಾಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಆರಂಭಿಸುವ ಮುನ್ನ, ನೀವಾಗಿಯೇ ತೆರವು ಮಾಡಿದರೆ ಉತ್ತಮ. ತಪ್ಪಿದಲ್ಲಿ ಜೆಸಿಬಿಯಿಂದ ನೆಲಸಮ ಮಾಡುವುದಾಗಿ ಕೊನೆಯ ಎಚ್ಚರಿಕೆ ನೀಡಿದರು. ಈ ಸೂಚನೆಗೆ ತಲೆಬಾಗಿದ ಅಕ್ರಮ ಕಟ್ಟಡ ನಿರ್ಮಾತೃಗಳು ಸ್ವಯಂ ಪ್ರೇರಣೆಯಿಂದ ಗೋಡೆಯ ಕಲ್ಲುಗಳನ್ನು ತೆರವುಗೊಳಿಸಿದರು.
ಶ್ಮಶಾನ ಬಳಿಯ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಯಾವುದೇ ಕಟ್ಟಡಗಳು ಇಲ್ಲದಿದ್ದರೂ 94ಸಿ ಯಲ್ಲಿ ಕಾನೂನುಬಾಹಿರವಾಗಿ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಇನ್ನುಳಿದವರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಲೋಕಾಯುಕ್ತಕ್ಕೆ ಹಾಗೂ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಗ್ರಾ.ಪಂ.ನವರು ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳಿಗೆ ತಡೆ ನೀಡಿ, ಪೂರಕ ದಾಖಲೆ ನೀಡಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮುಂದುವರಿಸಬೇಕೆಂದು ತಾಕಿತು ಮಾಡಿದ್ದರು.
ಇನ್ನೊಂದು ಬಾಕಿ
ಇಲ್ಲಿ ಒಟ್ಟು 8 ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, 5 ಕಟ್ಟಡಗಳು ಗೋಡೆಯ ಹಂತದಲ್ಲಿದ್ದರೆ, 1 ಕಟ್ಟಡಕ್ಕೆ ಅಡಿಪಾಯ ಹಾಕಲಾಗಿತ್ತು. ಎರಡು ಕಟ್ಟಡಗಳನ್ನು ಪೂರ್ತಿಗೊಳಿಸಿ ಶೀಟು ಹೊದಿಸಲಾಗಿತ್ತು. ಈ ಹಿಂದೆ ಯಾವುದೇ ಮನೆ ಅಥವಾ ಕಟ್ಟಡ ಇಲ್ಲದಿದ್ದರೂ 3 ಜನರಿಗೆ 94ಸಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಗುರುವಾರ ತೆರವು ಕಾರ್ಯಾಚರಣೆ ಪ್ರಾರಂಭಿಸಿದ ಕಂದಾಯ ಅಧಿಕಾರಿಗಳು 94ಸಿ ಯಲ್ಲಿ ಹಕ್ಕುಪತ್ರ ವಿತರಿಸಿದ ಜಾಗದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಹೊರತು ಪಡಿಸಿ ಉಳಿದೆಲ್ಲವುಗಳನ್ನು ನೆಲಸಮ ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ನೀಡಲಾದ ಹಕ್ಕು ಪತ್ರವನ್ನು ರದ್ದುಗೊಳಿಸಿ ಅವರಿಗೆ ನೋಟಿಸ್ ನೀಡಿ ಬಳಿಕ ಆ ಕಟ್ಟಡ ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತೆರವು ಕಾರ್ಯಚರಣೆ ವೇಳೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರೀಗಸ್, ಕಂದಾಯ ನಿರೀಕ್ಷಕ ಅವೀನ್ ರಂಗತ್ತಮೂಲೆ, ಗ್ರಾಮಕರಣಿಕ ಹರೀಶ್ ಹೆಗ್ಡೆ, ಗ್ರಾಮ ಸೇವಕ ವಿಜಯ್ ಉಪಸ್ಥಿತರಿದ್ದರು.
ಗಂಭೀರವಾಗಿ ಪರಿಗಣಿಸಿದ್ದ ಎಸಿ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪುತ್ತೂರು ಸಹಾಯಕ ಆಯುಕ್ತರು ತತ್‌ಕ್ಷಣ ಅಗತ್ಯ ಕ್ರಮ ಕೈಗೊಂಡು ಕಟ್ಟಡ ತೆರವುಗೊಳಿಸಬೇಕೆಂದು ತಹಶೀಲ್ದಾರ್‌ಗೆ ಆದೇಶ ನೀಡಿದ್ದರು. ಈ ಮಧ್ಯೆ ಶಾಸಕ ಎಸ್. ಅಂಗಾರ ಸ್ಥಳಕ್ಕೆ ಭೇಟಿ ನೀಡಿ, ಸರಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವುದನ್ನು ತತ್‌ಕ್ಷಣ ತೆರವುಗೊಳಿಸಿ ಈ ಜಾಗವನ್ನು ಸರಕಾರಿ ಉದ್ದೇಶಕ್ಕೆ ಬಳಕೆ ಮಾಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.