ತಣ್ಣಗಾದ ಸುದೀರ್ಘ ನೀತಿ ಸಂಹಿತೆಯ ಬಿಸಿ
ಇನ್ನು ಮುಂದೆ ಸರಕಾರಿ ಕೆಲಸ-ಕಾರ್ಯಗಳು ಚುರುಕು
Team Udayavani, May 29, 2019, 6:00 AM IST
ಪುತ್ತೂರು: ಲೋಕಸಭಾ ಚುನಾವಣೆಯ ಸುದೀರ್ಘ ಅವಧಿಯ ನೀತಿ ಸಂಹಿತೆಯ ಬಿಸಿ ಮೇ 27ಕ್ಕೆ ತಣ್ಣಗಾಗಿದ್ದು, ಮಂಗಳವಾರದಿಂದಲೇ ಬಹುತೇಕ ಸರಕಾರಿ ಕೆಲಸ-ಕಾರ್ಯಗಳು ಚುರುಕುಗೊಂಡಿವೆ. ಮಾ. 10ರಂದು ಚುನಾವಣೆ ಘೋಷಣೆಯಾಗಿದ್ದು, ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿದ್ದವು.
ಬರೋಬ್ಬರಿ 78 ದಿನಗಳ ಸುದೀರ್ಘ ಅವಧಿಯ ನೀತಿಸಂಹಿತೆ ಜಾರಿಯಲ್ಲಿತ್ತು. ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಸದಸ್ಯರು ಮೊದಲಾದ ಜನಪ್ರತಿನಿಧಿಗಳು ಕಳೆದ ಮಾರ್ಚ್‌ನಲ್ಲೇ ನೆರವೇರಿಸಬೇಕಿದ್ದ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ-ಉದ್ಘಾಟನಾ ಸಮಾರಂಭಗಳು ನಿಂತು ಹೋಗಿದ್ದವು.
ಕಾರ್ಯಕ್ರಮದಲ್ಲಿ ಭಾಗಿ
ಈಗ ಚುನಾವಣ ನೀತಿಸಂಹಿತೆ ತೆರವುಗೊಂಡಿದ್ದು, ಇನ್ನು ಜನಪ್ರತಿನಿಧಿಗಳು ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗಲಿದ್ದಾರೆ. ಮೇ 27ಕ್ಕೆ ನೀತಿ ಸಂಹಿತೆ ತೆರವುಗೊಂಡ ಬೆನ್ನಲ್ಲೇ ಮಂಗಳವಾರ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಸುಳ್ಯ ಶಾಸಕ ಎಸ್. ಅಂಗಾರ ಅವರು ಕಡಬ ಸಿಎ ಬ್ಯಾಂಕ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಗ್ರಾ.ಪಂ., ತಾ.ಪಂ., ಜಿ.ಪಂ. ಸಾಮಾನ್ಯ ಸಭೆಗಳು, ಕೆಡಿಪಿ ಸಭೆಗಳು ಸಹಿತ ಇತರ ಸಭೆಗಳನ್ನು ನಡೆಸುವುದಕ್ಕೆ ಅವಕಾಶವಿರಲಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಸಭೆಗಳನ್ನು ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಇಂತಹ ಸಭೆಗಳಲ್ಲಿ ಕೆಲವೊಂದು ಗಂಭೀರ ವಿಚಾರಗಳು ಚರ್ಚೆಯಾಗಿ ತತ್‌ಕ್ಷಣದ ಪರಿಹಾರವೂ ಸಿಗುತ್ತದೆ. ಹೀಗಾಗಿ ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆಯುವ ಸಾಧ್ಯತೆಯೂ ಇದೆ.
ಸರಕಾರಿ ಕಚೇರಿಗಳಲ್ಲಿ ಕೆಲವೊಂದು ಸೇವೆಗಳು ಮಂಗಳವಾರದಿಂದ ಪುನರಾರಂಭಗೊಂಡಿದ್ದು, ಮುಂದೆ ತಾಲೂಕು ಕಚೇರಿ ಸಹಿತ ಹೆಚ್ಚಿನ ಕಡೆ ಜನರ ಸಾಲು ಕಂಡುಬರಲಿದೆ.
ಎಲ್ಲವೂ ಪುನರಾರಂಭಲೋಕಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ಸ್ಥಗಿತಗೊಂಡಿದ್ದ ಎಲ್ಲ ಸೇವೆಗಳು, ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿ ಹಿಂದಿನಂತೆ ನಡೆಯಲಿದೆ. ತಾಲೂಕು ಕಚೇರಿಯಲ್ಲೂ ಎಲ್ಲ ಸೇವೆಗಳು ಜನರಿಗೆ ಲಭ್ಯವಾಗಲಿವೆ. ಸಭೆಗಳು, ಕಾರ್ಯಕ್ರಮಗಳು ಯಾವುದೇ ಅಡ್ಡಿಯಿಲ್ಲದೆ ಸಾಗಲಿವೆ.
ಎಚ್.ಕೆ. ಕೃಷ್ಣಮೂರ್ತಿ ಸಹಾಯಕ ಕಮಿಷನರ್, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.