ಇಂದಲ್ಲ ನಾಳೆ ಆರಂಭಗೊಳ್ಳಬಹುದೆಂಬ ನಿರೀಕ್ಷೆಗೆ ತಣ್ಣೀರು ?

ಇಂದಿರಾ ಕ್ಯಾಂಟೀನ್‌ ಮುಚ್ಚುವ ಮಾತು; ಬೆಳ್ತಂಗಡಿಯಲ್ಲಿ ಇನ್ನೂ ಅನುಷ್ಠಾನವೇ ಆಗಿಲ್ಲ

Team Udayavani, Aug 29, 2019, 5:00 AM IST

h-1

ಬೆಳ್ತಂಗಡಿ: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚ ಲಾಗುತ್ತದೆ, ಮುಚ್ಚುವುದನ್ನು ಕಾಂಗ್ರೆಸ್‌ ವಿರೋಧಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಆದರೆ ಬೆಳ್ತಂಗಡಿಯಲ್ಲಿ ಕ್ಯಾಂಟೀನನ್ನು ಮುಚ್ಚುವುದಕ್ಕೆ ಅವ ಕಾಶವೇ ಇಲ್ಲ. ಅಂದರೆ ಇಲ್ಲಿ ಕ್ಯಾಂಟೀನ್‌ಇನ್ನೂ ಆರಂಭಗೊಂಡಿಲ್ಲ !

ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ ಅನುಷ್ಠಾನಕ್ಕೆ ಕಳೆದ 1 ವರ್ಷದ ಹಿಂದೆಯೇ ಕಾಮ ಗಾರಿ ಆರಂಭಗೊಂಡಿದ್ದು, ಅಂದಿನ ತಹಶೀಲ್ದಾರ್‌ ಮದನ್‌ಮೋಹನ್‌ ಸಿ. ನಿರ್ದೇಶನದಲ್ಲಿ ಭೂಮಿ ಸಮತಟ್ಟು ಕಾರ್ಯ ನಡೆದಿತ್ತು. ಆದರೆ ಒಂದು ವರ್ಷವಾದರೂ ಕ್ಯಾಂಟೀನ್‌ ಆರಂಭಕ್ಕೆ ಅಡಿಪಾಯ ಕೆಲಸ ಮಾತ್ರ ನಡೆದಿದೆ.

ಪ್ರಾರಂಭದಲ್ಲೇ ವಿಘ್ನ !
ಬೆಳ್ತಂಗಡಿ ಬಸ್‌ ನಿಲ್ದಾಣದ ಹಿಂಬದಿ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್‌ ಅನುಷ್ಠಾನದ ದೃಷ್ಟಿಯಿಂದ ಸ್ಥಳ ಸಮತಟ್ಟು ಮಾಡುವ ಕಾರ್ಯ ನಡೆಸಲಾಗಿತ್ತು. ಆದರೆ ಅಲ್ಲಿ ಸಾರ್ವಜನಿಕ ಶೌಚಾಲಯ ಇದೆ ಎಂಬ ಕಾರಣಕ್ಕೆ ಅಲ್ಲಿ ಕ್ಯಾಂಟೀನ್‌ ನಿರ್ಮಿಸಬಾರದು ಎಂದು ವಿರೋಧಗಳು ವ್ಯಕ್ತವಾಗಿದ್ದವು. ಬಳಿಕ ಬೆಳ್ತಂಗಡಿ ಮಿನಿ ವಿಧಾನಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ಖಾಲಿ ಸ್ಥಳ ಇದೆಯೇ ಎಂದು ಪರಿಶೀಲನೆ ಕಾರ್ಯವೂ ನಡೆದಿತ್ತು. ಅಂತಿಮವಾಗಿ ಜಿಲ್ಲಾಧಿಕಾರಿ ಪ್ರಾರಂಭದಲ್ಲೇ ಗುರುತಿಸಲಾದ ಸ್ಥಳದಲ್ಲೇ ಕ್ಯಾಂಟೀನ್‌ ನಿರ್ಮಿಸುವುದಕ್ಕೆ ಸೂಚನೆ ನೀಡಿದ್ದರು.

ಕಾಮಗಾರಿಯೂ ಆರಂಭ
ರಾಜ್ಯದ ಎಲ್ಲ ಕಡೆಗಳಲ್ಲೂ ಇಂದಿರಾ ಕ್ಯಾಂಟೀನ್‌ ಅನುಷ್ಠಾನ ಕಾರ್ಯ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯೇ ಮಾಡಿದ್ದು, ಅದ ರಂತೆ ಬೆಳ್ತಂಗಡಿಯಲ್ಲೂ ಸ್ಥಳ ಅಂತಿಮಗೊಂಡ ಬಳಿಕ ಕ್ಯಾಂಟೀನ್‌ನ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಪ್ರಸ್ತುತ ಅಡಿಪಾಯ ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಕಳೆದರೂ ಹಾಗೇ ಬಿಡಲಾಗಿದೆ. ಜತೆಗೆ ಕಾಮಗಾರಿ ಮುಂದು ವರಿಕೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಗುತ್ತಿಗೆ ಮುಕ್ತಾಯ ?
ಕ್ಯಾಂಟೀನ್‌ ಅನುಷ್ಠಾನ ಕಾರ್ಯ ರಾಜ್ಯಮಟ್ಟದಲ್ಲೇ ನಡೆಯುತ್ತಿರುವು ದರಿಂದ ಬೆಳ್ತಂಗಡಿಯಲ್ಲಿ ಯಾವಾಗ ಕ್ಯಾಂಟೀನ್‌ ಆರಂಭಗೊಳ್ಳುತ್ತದೆ ಎಂಬ ಮಾಹಿತಿ ಬೆಳ್ತಂಗಡಿ ಪ.ಪಂ.ನಲ್ಲಾಗಲೀ ಅಥವಾ ದ.ಕ. ಜಿಲ್ಲಾಡಳಿತದ ಬಳಿಯಾಗಲೀ ಇಲ್ಲ. ಅಲ್ಲಿನ ಅಧಿಕಾರಿಗಳ ಬಳಿ ಕೇಳಿದರೆ ಹಿಂದೆ ಅನುಷ್ಠಾನದ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಅವಧಿ ಮುಕ್ತಾಯಗೊಂಡಿರುವ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದು, ಖಚಿತ ಮಾಹಿತಿ ಅವರ ಬಳಿ ಇಲ್ಲ.

ಈ ಹಿಂದೆ ಕಾಮಗಾರಿ ಆರಂಭಿಸಿದ ಸಂಸ್ಥೆಯ ಬಳಿ ಕಾಮಗಾರಿ ಮುಂದುವರಿಸುವ ಕುರಿತು ಕೇಳಿದರೆ ಇಂದು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಸತಾಯಿಸುವ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ ಮುಚ್ಚುವ ಮಾತುಗಳು ಕೇಳಿ ಬರುತ್ತಿದ್ದರೂ ಇಲ್ಲಿ ಮಾತ್ರ ಕ್ಯಾಂಟೀನ್‌ ಅನುಷ್ಠಾನವೇ ಆಗಿಲ್ಲ.

ಸರಕಾರದಿಂದ ಅನುಷ್ಠಾನ
ಇಂದಿರಾ ಕ್ಯಾಂಟೀನ್‌ನನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಸರಕಾರವೇ ಮಾಡುತ್ತಿದ್ದು, ನಾವು ಆಹಾರ ಪೂರೈಕೆಯ ವ್ಯವಸ್ಥೆಯನ್ನು ಮಾತ್ರ ನೋಡಿಕೊಳ್ಳುತ್ತೇವೆ. ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್‌ ಅನುಷ್ಠಾನಕ್ಕೆ ಈ ಹಿಂದೆಯೇ ಸರಕಾರದಿಂದ ಅನುಮತಿ ದೊರಕಿದ್ದರೂ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಇನ್ನೂ ಅದರ ಕಾಮಗಾರಿ ನಡೆಸಿಲ್ಲ.
 - ಪ್ರಸನ್ನ ವಿ. ನಗರ ಯೋಜನ ನಿರ್ದೇಶಕರು, ದ.ಕ. ಜಿಲ್ಲೆ

 ಬಡವರ ಪರ ಯೋಜನೆ
ಇಂದಿರಾ ಕ್ಯಾಂಟೀನ್‌ ಬಡವರ ಪರ ಯೋಜನೆಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಬೆಳ್ತಂಗಡಿಯಲ್ಲಿ ಅನುಷ್ಠಾನ ವಿಳಂಬವಾಗಿದೆ. ಅವರು ಹಿಂದೆ ಬಿದ್ದು ಕೆಲಸ ಮಾಡಿದ್ದರೆ, ಕ್ಯಾಂಟೀನ್‌ ಆರಂಭವಾಗುತ್ತಿತ್ತು. ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.
 - ನವೀನ್‌ಕುಮಾರ್‌ ಕೆ. ಸವಣಾಲು

 ಸರಕಾರದ ವೈಫಲ್ಯ
ತುಳುನಾಡಿನಲ್ಲಿ ಸೂಕ್ತ ಯೋಜನೆ ಕಾರ್ಯಗತಗೊಳಿಸುವಲ್ಲಿ ಸರಕಾರ ವಿಫ‌ಲವಾಗುತ್ತಿದೆ. ಇದಕ್ಕೆ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್‌ ಕೂಡ ಉತ್ತಮ ಉದಾಹರಣೆ. ಜನಪ್ರತಿನಿಧಿಗಳ ವೈಫಲ್ಯ, ಅಧಿಕಾರಿಗಳ ಪಾಳೆಗಾರಿಕೆ ಧೋರಣೆಯೇ ಇದಕ್ಕೆ ಕಾರಣ ಎನ್ನಬಹುದು.
 - ಶೈಲೇಶ್‌ ಆರ್‌.ಜೆ. ಸಿವಿಲ್‌ ಎಂಜಿನಿಯರ್‌, ಬೆಳ್ತಂಗಡಿ

ಟಾಪ್ ನ್ಯೂಸ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.