ಲಾಕ್‌ಡೌನ್ ಅವಧಿಯ ಸದುಪಯೋಗ: ಇರಾ ಗ್ರಾ.ಪಂ.ವ್ಯಾಪ್ತಿಯಲ್ಲಿ 12 ಬಾವಿ ನಿರ್ಮಾಣ
Team Udayavani, May 29, 2020, 9:28 AM IST
ಇರಾ ಗ್ರಾಮದಲ್ಲಿ ಬಾವಿ ನಿರ್ಮಾಣದ ಕಾರ್ಯ.
ಬಂಟ್ವಾಳ: ಸ್ವಚ್ಛತೆ, ಸಾಕ್ಷರತೆಯಲ್ಲಿ ವಿಶೇಷ ಸಾಧನೆ ಮಾಡಿರುವ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೀಗ ಜಲ ಸಾಕ್ಷರತೆಯ ಭಾಗವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೂಲಕ ಒಟ್ಟು 12 ತೆರೆದ ಬಾವಿಗಳನ್ನು ರಚನೆ ಮಾಡಲಾಗಿದೆ.
ಸ್ವಾವಲಂಬನೆ ಉದ್ದೇಶ
ಕೋವಿಡ್-19ರ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಇದ್ದ ಜನರಿಗೆ ಉದ್ಯೋಗ ಖಾತರಿ ಯೋಜನೆಯ ಕುರಿತು ತಿಳಿವಳಿಕೆ ಮೂಡಿಸಿ ತಮ್ಮ ಸ್ವಂತ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿ ಕೊರೆಯುವವರಿಗೆ ಯೋಜನೆಯಲ್ಲಿ ಅನುದಾನ ನೀಡುವುದಾಗಿ ಗ್ರಾಮ ಪಂಚಾಯತ್ ತಿಳಿಸಿತ್ತು. ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಇದ್ದರೂ ಸ್ವಾವಲಂಬಿಗಳಾಗಲು ಬಹಳಷ್ಟು ಮಂದಿ ಬಾವಿ ಕೊರೆಯುವುದಕ್ಕೆ ಮುಂದೆ ಬಂದಿದ್ದರು. ತಮ್ಮ ತಮ್ಮ ಮನೆಗಳ ಬಳಿ ತೆರೆದ ಬಾವಿಗಳನ್ನು ತೋಡುವ ಕೆಲಸವನ್ನು ಆರಂಭಿಸಿದರು. ಅಂತರ್ಜಲ ವೃದ್ಧಿಗೆ ಯೋಜನೆ ಮೂರನೇ ಹಂತದ ಲಾಕ್‌ಡೌನ್ ಅವಧಿ ಮುಗಿಯುವ ಹೊತ್ತಿಗೆ ಗ್ರಾಮದಲ್ಲಿ 12 ಹೊಸ ಬಾವಿಗಳ ಕೆಲಸ ಪೂರ್ಣಗೊಂಡಿದೆ. ಪ್ರಸ್ತುತ ಗ್ರಾಮಸ್ಥರು ಅದೇ ಬಾವಿಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಮುಂದೆ ಮಳೆಗಾಲದಲ್ಲಿ ತಮ್ಮ ಮನೆಯ ಮಾಡಿಗೆ ಬೀಳುವ ಮಳೆ ನೀರನ್ನು ಈ ಬಾವಿಯ ಮೂಲಕ ಸಂಗ್ರಹಿಸಿ ಅಂತರ್ಜಲ ವೃದ್ಧಿಗೂ ಇವರನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಕೆಲಸವನ್ನು ಗ್ರಾಮ ಪಂಚಾಯತ್ ಮಾಡುತ್ತಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾ ಧ್ಯಕ್ಷೆ ಚಂದ್ರಾವತಿ ಎ. ಕರ್ಕೇರ, ಪಿಡಿಒ ಸುಶೀಲಾ, ಕಾರ್ಯದರ್ಶಿ ನಳಿನಿ ಎ.ಕೆ., ಎಂಜಿನಿಯರ್ ನಳಿನಾಕ್ಷಿ, ಗ್ರಾ.ಪಂ.ಸದಸ್ಯರು, ಸಿಬಂದಿ ಮೊದಲಾದವರು ಗ್ರಾಮಸ್ಥರಿಗೆ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡಿದ್ದರು. ಅದೀಗ ಫಲ ಕೊಟ್ಟಿದ್ದು, ಗ್ರಾಮಸ್ಥರು ಬಾವಿ ತೋಡಿ ಸಾಧನೆ ಮಾಡಿದ್ದಾರೆ.
10 ಬಾವಿಗಳ ಗುರಿ
ಗ್ರಾ.ಪಂ.ಗೆ 10 ಬಾವಿಗಳ ಗುರಿಯನ್ನು ನೀಡಲಾಗಿದ್ದು, ಅದರಂತೆ ಬಾವಿ ಕೊರೆಯುವು ದಕ್ಕೆ ಉತ್ತೇಜನ ನೀಡಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಬಾವಿಯ ಆಳ, ಅಗಲದ ಆಧಾರದಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ಅನುದಾನ ಸಿಗಲಿದೆ. – ಸುಶೀಲಾ, ಇರಾ ಗ್ರಾ.ಪಂ. ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.