ಭೀಕರ ಮಳೆಗೆ ನಲುಗಿದ ಬೆಳ್ತಂಗಡಿ: ಎಲ್ಲೆಡೆ ನೀರವ ಮೌನ
Team Udayavani, Aug 10, 2019, 5:41 PM IST
ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಬದನಾಜೆ ಬದಿಯ ಮಿಂಚುಕಲ್ಲು ಗುಡ್ಡದ ಮಧ್ಯ ಒಂದು ಎಕರೆ ಪ್ರದೇಶ ಕುಸಿತವಾದ ಪರಿಣಾಮ 500ಕ್ಕೂ ಅಧಿಕ ಮರಗಳು ಕೊಚ್ಚಿ ಬಂದಿವೆ.
ಇದರ ಪರಿಣಾಮ ಕುಕ್ಕಾವು ಸೇತುವೆ ಸಂಪರ್ಕ ರಸ್ತೆ ಕೊಚ್ಚಿಹೋಗಿದೆ. ಕೂಡಬೆಟ್ಟು ಹಳ್ಳ, ಏಳುವರೆ ಹಳ್ಳದಿಂದ ಮರಗಳ ರಾಶಿ ಹರಿದು ಬಂದ ಹಿನ್ನೆಲೆಯಿಂದ ಶುಕ್ರವಾರ ಮಧ್ಯಾಹ್ನ ಸೇತುವೆ ಸಂಪರ್ಕ ಕಡಿತವಾಗಿದೆ.
ಕೂಡಬೆಟ್ಟು ದೇವಸ್ಥಾನದಲ್ಲಿ ವರಮಹಾಲಕ್ಣ್ಮಿ ಪೂಜೆಗೆ ಬಂದ 100 ಮಂದಿ ಜಲಾವೃತದಿಂದ ಸಿಲುಕಿದ್ದರು. ಬಿ.ಕೆ.ಪರಮೇಶ್ವರ್ ರಾವ್ ತಂಡ
ಅಮೈ, ಕಕ್ಕೆನೇಜಿ, ಕಬ್ಬಿನ ಹಿತ್ತಿಲು ಸುತ್ತುವರಿದು ಮಧ್ಯಾಹ್ನ 3.30ಕ್ಲೆ ಹೊರಟು ರಾತ್ರಿ 9.30ಕ್ಕ ಮನೆ ತಲುಪಿದ್ದಾರೆ.
ಈ ರಣ ಭೀಕರ ಮಳೆಯಿಂದಾಗಿ ಬೆಳ್ತಂಗಡಿ ಊರಿಗೆ ಊರು ಸ್ಮಶಾನ ಮೌನ ಆವರಿಸಿದೆ. ಬೆಟ್ಟದ ಸಾಲುಗಳು ಭಿರುಕು ಬಿದ್ದಿದ್ದು, ಪಶ್ಚಿಮಘಟ್ಟ ತಪ್ಪಲ ನಿವಾಸಿಗಳು ಆತಂಕದಲ್ಲಿದ್ದಾರೆ. ತಾಲೂಕಿನ 10ಕ್ಕೂ ಹೆಚ್ಚು ಸೇತುವೆಗಳಿಗೆ ಹಾನಿಯಾಗಿದ್ದು, ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ.
ಎಂಎಲ್ಸಿ ಹರೀಶ್ ಕುಮಾರ್ ಹಾಗೂ ಮಾಜಿ ಕೆ. ವಸಂತ ಬಂಗೇರ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ನಾವೂರು, ಇಂದಬೆಟ್ಟು, ಕಿಲ್ಲೂರು, ಕಾಜೂರು, ಕುಕ್ಕಾವು, ಚಾರ್ಮಾಡಿ, ನೆರಿಯ, ಮುಂಡಾಜೆ, ಪಜಿರಡ್ಕ ಮೊದಲಾದ ಕಡೆಗಳಿಗೆ ಶಾಸಕ ಹರೀಶ ಪೂಂಜ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡುತ್ತಿದ್ದಾರೆ.
ಶಾಸಕರೊಂದಿಗೆ ತಹಸೀಲ್ದಾರ್ ಗಣಪತಿ ಶಾಸ್ತ್ರೀ, ಇಒ ಕೆ.ಇ.ಜಯರಾಂ, ನೊಡೇಲ್ ಅಧಿಕಾರಿ ಶಿವಪ್ರಸಾದ್ ಅಜಿಲ, ಜಿಪಂ ಎಇಇ ಚೆನ್ನಪ್ಪ ಮೊಲಿಯಿ, ಮೆಸ್ಕಾಂ ಎಇಇ ಶಿವಶಂಕರ್ ಇದ್ದರು.ಅರೋಗ್ಯ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆ ಇನ್ನಿತರ ಇಲಾಖೆಗಳವರು ಇದ್ದರು.
ಸಾರ್ವಜನಿಕರಲ್ಲಿ ವಿಜ್ಞಾಪನೆ:
ಬೆಳ್ತಂಗಡಿ ತಾಲೂಕಿನಲ್ಲಾಗುತ್ತಿರುವ ಭೀಕರ ಮಳೆಯಿಂದಾಗಿ ಹಾನಿಗೀಡಾದ ಸಂತ್ರಸ್ತರಿಗೆ ದಿನ ಬಳಕೆಯ ಅಗತ್ಯ ವಸ್ತುಗಳು, ಮಹಿಳೆಯರ ಮಕ್ಕಳ ಪುರುಷರ ಉಡುಪುಗಳು, ಆಹಾರ ಪೊಟ್ಟಣಗಳು ತುರ್ತು ಅಗತ್ಯವಿದ್ದು, ನೀಡಲಿಚ್ಚಿಸುವಂತಹ ದಾನಿಗಳು ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿರುವ “ಶ್ರಮಿಕ, ಶಾಸಕರ ಕಚೇರಿ”ಗೆ ತಲುಪಿಸಬೇಕಾಗಿ ವಿನಂತಿ.
ಸಂಪರ್ಕ: 9901212207
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.