ಹಳೆಯಂಗಡಿ: 8 ವರ್ಷದ ಮಗು ಸಹಿತ, ದಂಪತಿ ಸಾಮೂಹಿಕ ಆತ್ಮಹತ್ಯೆ
Team Udayavani, Dec 14, 2020, 3:35 PM IST
ಹಳೆಯಂಗಡಿ: ಎಂಟು ವರ್ಷದ ಮಗುವಿನೊಂದಿಗೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್ ಸಮೀಪ ನಡೆದಿದೆ.
ವಿನೋದ್ ಸಾಲಿಯಾನ್(40) ರಚನಾ ಸಾಲಿಯನ್ (38) ಮತ್ತು ಅವರ ಪುತ್ರ ಸಾಧ್ಯ ಸಾಲಿಯನ್ 8 ವರ್ಷದ ಬಾಲಕ ಸೇರಿ ದಂಪತಿಗಳು ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ
ಮೂಲತಃ ಹಳೆಯಂಗಡಿಯ ನಿವಾಸಿಯಾದ ವಿನೋದ್ ಸಾಲ್ಯಾನ್ ಕುಟುಂಬ, ಕಳೆದ ಹಲವಾರು ವರ್ಷಗಳಿಂದ ಮುಂಬೈಯಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದು ಕಳೆದ ಒಂದು ವರ್ಷದ ಹಿಂದೆ ಊರಿಗೆ ಬಂದು ಹಳೆಯಂಗಡಿಯ ಕಲ್ಲಾಪು ರೈಲ್ವೇ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದು ಊರಿನಲ್ಲಿ ರೀಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಘನಘೋರ ಸುಳ್ವಾಡಿ ದುರಂತಕ್ಕೆ 2 ವರ್ಷ: ಏನಿದು ಘಟನೆ ? ಮನಕಲಕುವಂತಿದೆ ಭಾಧಿತರ ಪರಿಸ್ಥಿತಿ !
ಶನಿವಾರ ಎಂದಿನಂತೆ ಇದ್ದ ದಂಪತಿಗಳು ಭಾನುವಾರ ದಿನ ಪೂರ್ತಿ ಮನೆಯ ಬಾಗಿಲು ತೆರೆಯದ ಕಾರಣ ಸಂಶಯಗೊಂಡ ಅಕ್ಕಪಕ್ಕದ ಮನೆಯವರು ಇಂದು ಸಂಜೆ ಮನೆಯ ಕಿಟಕಿ ಬಾಗಿಲು ಮುರಿದು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಮುಲ್ಕಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನಷ್ಟೇ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.