“ಜಾನುವಾರು ಮೇವು ಸಾಗಾಟಕ್ಕೆ ಪಾಸ್ ವ್ಯವಸ್ಥೆ’
ಕೋವಿಡ್-19 ತಾ| ಮಟ್ಟದ ಕಾರ್ಯಪಡೆ ಅಧಿಕಾರಿಗಳ ಸಭೆ
Team Udayavani, Apr 17, 2020, 4:12 AM IST
ಸುಳ್ಯ: ಜಾನುವಾರುಗಳಿಗೆ ಮೇವಿನ ಅಭಾವವಿರುವುದು ಗಮನಕ್ಕೆ ಬಂದಿದ್ದು, ಅಗತ್ಯವಿರುವ ಹೈನುಗಾರರಿಗೆ ಕೆಎಂಎಫ್ ಮೂಲಕ ಮೇವು ತರಲು ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ಅವರು ಹೇಳಿದರು.
ತಾಲೂಕು ಪಂಚಾಯತ್ ಸಭಾಂಗಣ ದಲ್ಲಿ ಎ.16ರಂದು ಜರಗಿದ ಕೋವಿಡ್-19 ತಾಲೂಕು ಮಟ್ಟದ ಕಾರ್ಯಪಡೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕೆಎಂಎಫ್ ಅಧಿಕಾರಿ ಮೇವಿನ ಅಭಾ ವದ ಕುರಿತು ಸಭೆಯಲ್ಲಿ ಪ್ರಸ್ತಾವಿಸಿದರು.
ಮೇವಿನ ಕೊರತೆ ಇದ್ದರೆ ಅದರ ಪೂರೈಕೆಗೆ ವ್ಯವಸ್ಥೆ ಮಾಡೋಣ. ಕೆಎಂಎಫ್ ಹಾಲು ಒಕ್ಕೂಟದ ಮೂಲಕ ಎಲ್ಲೆಲ್ಲಿ ಮೇವಿನ ಅಗತ್ಯತೆ ಇದೆ ಮತ್ತು ಅದನ್ನು ತರುವಲ್ಲಿ ಯಾರಿಗೆ ಅನುಮತಿ ಬೇಕು ಎಂಬ ಬಗ್ಗೆ ಪಟ್ಟಿ ತಯಾರಿಸಿ ಸಾಗಾಟ ವಾಹನದ ನಂಬರ್ ಮತ್ತು ದಾಖಲೆ ಇಟ್ಟು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯ ಮಾಡಿ. ನಿಮ್ಮ ಮೂಲಕ ಅವರಿಗೆ ಅನುಮತಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದರು.
ಆತ್ಮಸ್ಥೈರ್ಯ ಹೆಚ್ಚಿಸಿ
ಲಾಕ್‌ಡೌನ್ ಮುಂದುವರಿದಿದ್ದು, ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಬಳಿಕ ತೀರ್ಮಾನಿಸಲಾಗುವುದು. ಹಾಗಾಗಿ ಪ್ರತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜನರಿಗೆ ತಾವೇ ಧೈರ್ಯ ತುಂಬುವ ಕೆಲಸ ಮಾಡಬೇಕು ಮತ್ತು ಕೃಷಿ ಸಂಬಂಧಿಸಿದ ಕೆಲಸಗಳಲ್ಲಿ ತೊಡ ಗಿಸಿಕೊಳ್ಳಲು ಸಲಹೆ ನೀಡಿ ಎಂದು ಅವರು ಅಧಿಕಾರಿಗಳಿಗೆ ಸೂಚಿನೆಯನ್ನು ನೀಡಿದರು.
ಕೃಷಿಕರಿಗೆ ಪರವಾನಿಗೆ ನೀಡಿ
ಕೆಲವು ಕೃಷಿಕರ ತೋಟ ಮತ್ತು ಮನೆ ಬೇರೆಬೇರೆ ಕಡೆ ಇರುತ್ತದೆ. ಅಂಥವರು ತೋಟಕ್ಕೆ ಹೋಗಲು ಸಮಸ್ಯೆ ಆಗುತ್ತಿದೆ. ಅವರಿಗೆ ಕೃಷಿ ಕಾರ್ಯಕ್ಕೆ ಓಡಾಟಕ್ಕೆ ಪರವಾನಿಗೆ ನೀಡಬೇಕು ಎಂದು ಕೃಷಿ ಅಧಿಕಾರಿ ಮೋಹನ್ ನಂಗಾರು ಪ್ರಸ್ತಾವಿಸಿದರು. ಅಂಥವರ ಪಟ್ಟಿ ಕೊಡಿ. ಅನುಮತಿ ನೀಡಲು ಕ್ರಮ ಕೈಗೊಳ್ಳೋಣ ಎಂದು ಎ.ಸಿ. ಭರವಸೆ ನೀಡಿದರು.
ಅಧಿಕಾರಿಗಳು ಈ ಕೆಲಸದ ಜತೆಗೆ ತಮ್ಮ ಇಲಾಖೆ ಕಡೆಗೂ ಗಮನ ಹರಿಸಬೇಕು ಎಂದು ಸಹಾಯಕ ಆಯುಕ್ತರು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಅನಂತ ಶಂಕರ್, ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಭವಾನಿ ಶಂಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಉದಯವಾಣಿ
ವರದಿಗೆ ಸ್ಪಂದನೆ
ಲೌಕ್‌ಡೌನ್ ಕಾರಣ ಘಟ್ಟ ಪ್ರದೇಶದಿಂದ ಒಣ ಹುಲ್ಲು (ಬೈ ಹುಲ್ಲು) ಪೂರೈಕೆ ಆಗದ ಕಾರಣ ಬೇಸಗೆಯಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವದ ಭೀತಿ ಎದುರಾಗಿರುವ ಬಗ್ಗೆ ಎ.15 ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಪ್ರತಿ ವರ್ಷ ಘಟ್ಟ ಪ್ರದೇಶದಿಂದ ಒಣ ಹುಲ್ಲು ಸಂಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ಕರಾವಳಿ ಜಿಲ್ಲೆಯ ಹೈನುಗಾರರಿಗೆ ಪ್ರಸ್ತುತ ಪೂರೈಕೆ ವ್ಯವಸ್ಥೆ ಇಲ್ಲದ ಕಾರಣ ಬಳಕೆಯ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ಬೈಹುಲ್ಲು ಸಾಗಾಟಕ್ಕೆ ಅನುಮತಿ ನೀಡುವಂತೆ ವರದಿ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.