![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 23, 2021, 5:20 AM IST
ಸುಳ್ಯ: ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಕೈಗೊಂಡಿರುವ ಆರ್. ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬ ನಿಯಮ ಸುಳ್ಯ ಗಡಿ ಪ್ರದೇಶದ ಜನರ ನಿದ್ದೆಗೆಡಿಸಿದಂತಿದೆ.
ಜಿಲ್ಲಾಡಳಿತದಿಂದ ಕೇರಳ ಗಡಿ ಭಾಗಗಳಾದ ಮುರೂರು, ಕಲ್ಲಪಳ್ಳಿ, ಜಾಲ್ಸೂರು ಭಾಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು, 72 ಗಂಟೆ ಒಳಗಿನ ನೆಗೆಟಿವ್ ರಿಪೋರ್ಟ್ ಇದ್ದರೆ ಹಾಗೂ ಮೊದಲ ಹಂತದ ಲಸಿಕೆ ಪಡೆದಿದ್ದರೆ ಮಾತ್ರ ಕರ್ನಾಟಕ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕಲ್ಲ ಪಳ್ಳಿ ಸೇರಿದಂತೆ ಗಡಿ ಭಾಗದ ಜನರು ವ್ಯಾವಹಾ ರಿಕವಾಗಿ ಸುಳ್ಯವನ್ನೇ ನೆಚ್ಚಿಕೊಂಡಿದ್ದಾರೆ. ಕೃಷಿ ಉತ್ಪನ್ನ ಮಾರಾಟ, ವೈದ್ಯಕೀಯ, ಶಿಕ್ಷಣ ಹಾಗೂ ಉದ್ಯೋಗ ನಿಮಿತ್ತ ನಿತ್ಯ ನೂರಾರು ಜನರು ಸುಳ್ಯದ ಜತೆ ನಂಟು ಹೊಂದಿರುವುದರಿಂದ ಬಿಗಿ ತಪಾಸಣೆ ಕಂಟಕವಾಗಿ ಪರಿಣಮಿಸಿದೆ.
ಅನ್‌ಲಾಕ್‌ನ ಆರಂಭದಲ್ಲಿ ಬಡ್ಡಡ್ಕದ ಗಡಿಭಾಗದಲ್ಲಿ ಬಸ್ ಬಿಟ್ಟು ಉಳಿದ ವಾಹನ ಗಳಲ್ಲಿ ಹೋಗುವವರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಲಾಗುತ್ತಿತ್ತು. ಆದರೆ ಈಗ ಕೇರಳದಲ್ಲಿ ಮತ್ತೆ ವೀಕೆಂಡ್ ಲಾಕ್ ಆಗುತ್ತಿ ರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣಿಕರ ಮೇಲೂ ನಿಗಾ ವಹಿಸ ಲಾಗುತ್ತಿದೆ.
ಜನಸಾಮಾನ್ಯನಿಗೇ ತೊಂದರೆ:
ಉದ್ಯೋಗಿಗಳು, ಕೊರೊನಾ ವಾರಿ ಯರ್, ವಿದ್ಯಾರ್ಥಿಗಳು ಸೇರಿದಂತೆ ಹಲವರು ಆದ್ಯತೆ ಗುಂಪಿನ ಅಡಿಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಕೃಷಿಕರು, ಕಾರ್ಮಿ ಕರು, ಇತರ 18 ವರ್ಷ ಮೇಲ್ಪಟ್ಟ ಜನ ಸಾಮಾನ್ಯರು ಲಸಿಕೆ ದೊರೆ ಯದೇ ಇತ್ತ ನೆಗೆಟಿವ್ ರಿಪೋರ್ಟ್ ಪಡೆ ಯಲು ಸಾಧ್ಯ ವಾಗದೆ ಮನೆಯಲ್ಲೇ ಕೂರುವಂತಾಗಿದೆ.
-ಸುದೀಪ್ ರಾಜ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.