![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 3, 2022, 5:59 PM IST
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಪುತ್ಯ ದಿ| ಶಿವಪ್ಪ ಗೌಡರ ಪುತ್ರ ತಿರುಮಲೇಶ್ವರ (41)ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಜೂ. 2ರಂದು ರಾತ್ರಿ ಪತ್ತೆಯಾಗಿದೆ.
ತಿರುಮಲೇಶ್ವರ ಅವರು ಕೆಲವು ವರ್ಷಗಳಿಂದ ಒಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆ ಪಕ್ಕದಲ್ಲಿ ವಾಸವಾಗಿದ್ದ ತಾಯಿ ಮತ್ತು ಸಹೋದರ ಕೆಲವು ಸಮಯಗಳ ಹಿಂದೆ ಜಾಗ ಮಾರಾಟ ಮಾಡಿ ಕಡಬದಲ್ಲಿ ಮನೆ ಮಾಡಿ ವಾಸ್ತವ್ಯದಲ್ಲಿದ್ದಾರೆ.
ಗುರುವಾರ ತಿರುಮಲೇಶ್ವರ ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಅವರ ಸಹೋದರ ಅಲ್ಲಿಗೆ ಬಂದು ನೋಡಿದ ವೇಳೆ ತಿರುಮಲೇಶ್ವರ ಅವರು ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.
ಬಳಿಕ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ತಿರುಮಲೇಶ್ವರ ಅವರ ಪತ್ನಿ ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದಾರೆ. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.
ಕುಡಿತದ ಚಟದಿಂದ ಅನಾರೋಗ್ಯ ಉಂಟಾಗಿ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಂಗಳ ಹಿಂದೆ ಸಹೋದರನ ಸಾವು
ಎ. 15ರಂದು ತಿರುಮಲೇಶ್ವರ ಅವರ ತಮ್ಮ ರಮೇಶ್ (39) ಅವರ ಸಾವು ಕೂಡ ಇದೇ ರೀತಿ ಸಂಭವಿಸಿತ್ತು. ತಿರುಮಲೇಶ್ವರ ಅವರ ಮನೆಯ ಪಕ್ಕದಲ್ಲಿ ಸಹೋದರ ರಮೇಶ್ ಅವರ ಮನೆ ಇದ್ದಿದ್ದು, ರಮೇಶ್ ಒಂಟಿಯಾಗಿ ಮನೆಯಲ್ಲಿ ವಾಸವಾಗಿದ್ದರು. ರಮೇಶ್ ಅನಾರೋಗ್ಯದಿಂದ ಮನೆಯೊಳಗೆ ಮೃತಪಟ್ಟು ಯಾರ ಗಮನಕ್ಕೂ ಬಾರದೆ ಕೆಲವು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.