Crime News; ಪುತ್ತೂರು-ಸುಳ್ಯ ಭಾಗದ ಅಪರಾಧ ಸುದ್ದಿಗಳು
Team Udayavani, Apr 21, 2024, 12:59 AM IST
ಸುಳ್ಯ: ಕಾರುಗಳ ನಡುವೆ ಅಪಘಾತ
ಸುಳ್ಯ: ಎರಡು ಕಾರುಗಳ ಮುಖಾಮುಖೀ ಢಿಕ್ಕಿ ಉಂಟಾಗಿ ಪ್ರಯಾಣಿಕರು ಸಣ್ಣ-ಪುಟ್ಟ ಗಾಯ ಗೊಂಡ ಘಟನೆ ಶನಿವಾರ ಸುಳ್ಯದಲ್ಲಿ ಸಂಭವಿಸಿದೆ.
ಸುಳ್ಯ ಶ್ರೀರಾಮ್ ಪೇಟೆಯ ಪೋಸ್ಟ್ ಆಫೀಸ್ ಬಳಿ ಆಮ್ನಿ ಕಾರು ಹಾಗೂ ಸೆಲಾರಿಯೋ ಕಾರು ನಡುವೆ ಢಿಕ್ಕಿ ಸಂಭವಿಸಿದ್ದು, ಎರಡು ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ-ಪುಟ್ಟ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ರಸ್ತೆ ತಡೆಬೇಲಿಗೆ ವಾಹನ ಢಿಕ್ಕಿ
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಬೇಲಿಗೆ ವಾಹನವೊಂದು ಢಿಕ್ಕಿಯಾದ ಘಟನೆ ಎ. 18ರ ರಾತ್ರಿ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯದ ಮೊಗರ್ಪಣೆಯಲ್ಲಿ ಸಂಭವಿಸಿದೆ.
ಮೈಸೂರಿನಿಂದ ಮಂಗಳೂರಿಗೆ ಬಾಳೆಎಲೆ ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿಯಾಗಿದ್ದು, ಪರಿಣಾಮ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಜಪ್ತಿ ಮಾಡಿದ್ದ ವಾಹನ ಕಳವು
ಸುಳ್ಯ: ಬ್ಯಾಂಕ್ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದ ದ್ವಿಚಕ್ರ ವಾಹನವನ್ನು ಕಳವುಗೈದ ಘಟನೆ ಸುಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುಳ್ಯ ಕೇರ್ಪಳದ ವ್ಯಕ್ತಿಯೊಬ್ಬರು ತನ್ನ ದ್ವಿಚಕ್ರ ವಾಹನವನ್ನು ಅಡವಾಗಿಟ್ಟು ಸುಳ್ಯ ಖಾಸಗಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಸಾಲ ಪಡೆದಿದ್ದರು. ಬಳಿಕ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಸೊಸೈಟಿಯಿಂದ ಅಡವಾಗಿ ಇಟ್ಟಿದ್ದ ದ್ವಿಚಕ್ರವಾಹವನ್ನು ಜಪ್ತಿ ಮಾಡಿ ಕನಕಮಜಲು ಗ್ರಾಮದ ಸುಣ್ಣಮೂಲೆ ಯಾರ್ಡ್‌ನಲ್ಲಿ ಇರಿಸಲಾಗಿತ್ತು.
ಬಳಿಕ ವಾಹನ ಮಾಲಕರಿಗೆ ನೋಟಿಸ್ ನೀಡಿ ಸಾಲ ಕಟ್ಟಲು ಸೂಚಿಸಲಾಗಿತ್ತು. ಸಾಲ ಮರುಪಾವತಿಸಿರಲಿಲ್ಲ. ಬಳಿಕ ವಾಹನ ಹರಾಜು ಮಾಡಲು ಮಾ. 26ರಂದು ಯಾರ್ಡ್‌ಗೆ ತೆರಳಿ ವಾಹನದ ವ್ಯಾಲ್ಯುವೇಷನ್ ಮಾಡಿದ್ದು, ಮಾ. 27ರಂದು ವಾಹನವನ್ನು ಪರಿಶೀಲಿಸಲಾಗಿದೆ. ಎ. 28ರಂದು ಹರಾಜಿನ ದಿನ ಬೆಳಗ್ಗೆ ವಾಹನವನ್ನು ನೋಡಿದಲ್ಲಿ ವಾಹನ ಇರಲಿಲ್ಲ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿ ನಿಂತಿದ್ದ ಮಹಿಳೆಗೆ ಸ್ಕೂಟರ್ ಢಿಕ್ಕಿ
ಸುಳ್ಯ: ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಮಹಿಳೆಗೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಜಾಲ್ಸೂರು ಪೇಟೆಯಲ್ಲಿ ಶುಕ್ರವಾರ ಸಂಭವಿಸಿದೆ.
ಗುತ್ತಿಗಾರು ಅಡ್ಡನಪಾರೆಯ ಶೋಭಾವತಿ (70) ಗಾಯಾಳು. ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಸೊಸೆ ಜತೆ ಆಗಮಿಸುತ್ತಿದ್ದ ಶೋಭಾವತಿ ಅವರು ಜಾಲ್ಸೂರಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಸಂದರ್ಭ ಪುತ್ತೂರು ಕಡೆಯಿಂದ ಬಂದ ಸ್ಕೂಟರ್ ಸವಾರ ಬಂದು ಮಹಿಳೆಗೆ ಢಿಕ್ಕಿಯುಂಟು ಮಾಡಿದ್ದು, ಘಟನೆಯಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆಯನ್ನು ಸ್ಥಳೀಯರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ
ಪುತ್ತೂರು: ಪುತ್ತೂರಿನಿಂದ ದರ್ಬೆ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ದರ್ಬೆಯಲ್ಲಿ ಸಂಭವಿಸಿದೆ. ಕೆಮ್ಮಾಯಿಯ ವ್ಯಕ್ತಿಯೋರ್ವ ಚಲಾಯಿಸುತ್ತಿದ್ದು ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೂರು ಸ್ಕೂಟರ್, ಸಾಮೆತ್ತಡ್ಕದ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ.
ಯುವಕ ಆತ್ಮಹತ್ಯೆ
ಪುತ್ತೂರು: ಮುಕ್ವೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 19ರಂದು ಬೆಳಕಿಗೆ ಬಂದಿದೆ. ತುಂಬೆ ರಾಮಲ್ ಕಟ್ಟೆ ಮೂಲದ ಸುಮನ್ ರಾಜ್ (23) ಮೃತ ವ್ಯಕ್ತಿ. ಮೂಲತಃ ಕೇರಳದವರಾಗಿದ್ದ ಅವರು ಕಾರ್ಯಕ್ರಮದ ಕಲಾವಿದರಾಗಿ ಮುಕ್ವೆಗೆ ಆಗಮಿಸಿದ್ದು, ಕಾರ್ಯಕ್ರಮ ನಡೆಯುವ ಸ್ಥಳದ ಪಕ್ಕದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.