Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ
223 ಗ್ರಾ.ಪಂ.ಗಳಲ್ಲಿ ಒಟ್ಟು ಶೇ. 81.34 ಸಂಗ್ರಹ
Team Udayavani, May 16, 2024, 7:45 AM IST
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ 14 ಗ್ರಾಮ ಪಂಚಾಯತ್‌ಗಳಲ್ಲಿ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ. 100 ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ 9 ತಾಲೂಕು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುವ 223 ಗ್ರಾಮ ಪಂಚಾಯತ್‌ಗಳಲ್ಲಿ ಶೇ. 81.34 ತೆರಿಗೆ ಸಂಗ್ರಹಗೊಂಡಿದೆ.
ಮನೆ ತೆರಿಗೆ, ಶಿಕ್ಷಣ ಕರ, ಸ್ವತ್ಛತೆ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಬೀದಿದೀಪ ಕರ, ನೀರಿನ ಕರ, ನೀರು ನೈರ್ಮಲ್ಯ ಕರ, ಕಟ್ಟಡ ಪರವಾನಿಗೆ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಉದ್ದಿಮೆ ಶುಲ್ಕ, ಮಳಿಗೆಗಳ ಬಾಡಿಗೆ, ಸಂತೆ ಕರ ಮುಂತಾದವುಗಳನ್ನು ಒಳಗೊಂಡಿದೆ.
ಕಳೆದ ಬಾರಿಗಿಂತ ಕಡಿಮೆ
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ. 86.71ರಷ್ಟು ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಶೇ. 81.34 ತೆರಿಗೆ ಸಂಗ್ರಹಗೊಂಡಿದ್ದು, ಶೇ. 5.37ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ ಮೇಲುಗೈ ಸಾಧಿ ಸಿದ್ದ ಪುತ್ತೂರು (ಶೇ. 92.53) ಈ ಸಾಲಿನಲ್ಲಿ 3ನೇ ಸ್ಥಾನ (ಶೇ. 87.19)ದಲ್ಲಿದೆ. ಕಳೆದ ಬಾರಿ 3ನೇ ಸ್ಥಾನ (ಶೇ. 86.71)ದಲ್ಲಿದ್ದ ಸುಳ್ಯ ಈ ಬಾರಿ (ಶೇ. 90.84) ಮೇಲುಗೈ ಸಾಧಿಸಿದೆ.
ಸುಮಾರು ವರ್ಷಗಳಿಂದ ತೆರಿಗೆ ಪರಿಷ್ಕರಣೆ ಆಗಿರಲಿಲ್ಲ. ಸರಕಾರದ ನಿರ್ದೇಶನದಂತೆ ವೈಜ್ಞಾನಿಕವಾಗಿ ಸರ್ವೇ ನಡೆಸಿ ನಿಯಮಾನುಸಾರ ತೆರಿಗೆ ಪರಿಷ್ಕರಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಶೇಕಡವಾರು ಕುಸಿತ ಕಂಡಿರಬಹುದು. ಆದರೆ ಒಟ್ಟಾರೆ ತೆರಿಗೆ ಸಂಗ್ರಹ ಹೆಚ್ಚಳಗೊಂಡಿದೆ. ಎಲ್ಲ ಪಂಚಾಯತ್‌ಗಳಿಗೆ ಗುರಿ ನೀಡಲಾಗಿದ್ದು ಅದರಂತೆ ತೆರಿಗೆ ಸಂಗ್ರಹಿಸುವಂತೆ ಸೂಚಿಸಲಾಗಿದೆ.
– ಡಾ| ಆನಂದ್, ಜಿ.ಪಂ. ಸಿಇಒ, ದಕ್ಷಿಣ ಕನ್ನಡ
ಸುಳ್ಯ ಗರಿಷ್ಠ; ಬಂಟ್ವಾಳ ಕನಿಷ್ಠ
ತಾಲೂಕು ಕರ ಸಂಗ್ರಹ
ಸುಳ್ಯ ಶೇ. 90.84
ಬೆಳ್ತಂಗಡಿ ಶೇ. 88.80
ಪುತ್ತೂರು ಶೇ. 87.19
ಕಡಬ ಶೇ. 86.01
ಮಂಗಳೂರು ಶೇ. 81.86
ಮೂಡುಬಿದಿರೆ ಶೇ. 81.58
ಮೂಲ್ಕಿ ಶೇ. 81.11
ಉಳ್ಳಾಲ ಶೇ. 78.10
ಬಂಟ್ವಾಳ ಶೇ. 69.53
ಒಟ್ಟು ಶೇ. 81.34 (50,24,66,912 ರೂ.)
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.